Posts

ಯಕ್ಷ ಸಾಧಕರು 396

Image
"ಪ್ರತಿಭಾಪೂರ್ಣ ಯಕ್ಷನಿಧಿ" ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ. ಊರಿನಲ್ಲಿ ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಇವರು ಯಕ್ಷಗಾನ ಕಲಿಯಲು ಪ್ರೇರಣೆ. ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಶ್ರೀ ಸದಾನಂದ ಐತಾಳ್‌ ಗುಂಡ್ಮಿ ಮತ್ತು ಶ್ರೀ ದೇವದಾಸ ರಾವ್‌ ಕೂಡ್ಲಿ ಇವರ ಯಕ್ಷಗಾನ ಗುರುಗಳು. ಕಳೆದ 12 ವರ್ಷಗಳಿಂದ ವಡ್ಡರ್ಸೆಯ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ) ಸಂಸ್ಥೆಯಲ್ಲಿ ಅಲ್ಲದೆ ವಿವೇಕ ಯಕ್ಷರಂಗ ಮಧುವನ ಅಚ್ಲಾಡಿ ಮತ್ತು ಯಕ್ಷಮಿತ್ರರು ಹೊನ್ನಾರಿ ಗಿಳಿಯಾರು ಸಂಸ್ಥೆಯಲ್ಲಿ ಅತಿಥಿಯಾಗಿ ವೇಷಗಳನ್ನು ಮಾಡುತ್ತಾ ಇಂದು ಯಕ್ಷಗಾನ ರಂಗದಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಕಲಾವಿದ ನಾಗರಾಜ ಆಚಾರ್ಯ ವಿ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವಡ್ಡರ್ಸೆಯ ರುದ್ರ ಆಚಾರ್ಯ ಹಾಗೂ ಜಲಜ ಇವರ ಮಗನಾಗಿ 29.07.1979ರಂದು ನಾಗರಾಜ ಆಚಾರ್ಯ ವಿ ಅವರ ಜನನ. ಬಿ.ಎ ಮತ್ತು ಟಿ.ಸಿ.ಎಚ್ ಇವರ ವಿದ್ಯಾಭ್ಯಾಸ. ಪ್ರಸ್ತುತ ಪಿ.ಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆಕ್ಕಟ್ಟೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲಿಸುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಬರುವ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ವಡ್ಡರ್ಸೆ ವಸುಂಧರೆ (ಗುರುಗಳಾದ ಶ್ರೀ ಪ್ರಸಾದ್ ಕುಮಾರ್‌ ಮೊಗೆಬೆಟ್ಟು ವಿರಚಿತ ವಡ್ಡರ್ಸೆಯ ಇತಿಹಾಸವನ್ನು ಆಧರಿಸಿದ ...

ಯಕ್ಷ ಸಾಧಕರು 395

Image
"ಯಕ್ಷ ವೈಷ್ಣವಿ" ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಇವರ ಹುಟ್ಟೂರು, ಪ್ರಸ್ತುತ  ಮಂಗಳೂರಿನ ಬಜಪೆಯಲ್ಲಿ ವಾಸ. ವೃತ್ತಿಯಲ್ಲಿ ಇವರು ಸಮುದಾಯ ಆರೋಗ್ಯ ಕೇಂದ್ರ, ಮೂಡಬಿದ್ರೆಯಲ್ಲಿ ವೈದ್ಯಾಧಿಕಾರಿ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ. ಶ್ರೀ ರಾಜೇಶ್ ಐ ಕಟೀಲು (ಗುರುಗಳು) ಹಾಗೂ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ (ಭಾಗವತಿಕೆ) ಇವರ ಯಕ್ಷಗಾನ ಗುರುಗಳು. ಡಾ. ನರೇಶ್ ರಾವ್ ಬಜ್ಪೆ ಹಾಗೂ ಉಷಾ ಎನ್ ರಾವ್ ಇವರ ಮಗಳಾಗಿ 10.05.2002ರಂದು ಡಾ.ಬಿ ವೈಷ್ಣವಿ ರಾವ್ ಜನನ. ಬಿ ವೈಭವಿ ರಾವ್ (2nd year BAMS, SDM Udyavara) ಇವರ ತಂಗಿಯೂ ಯಕ್ಷಗಾನ ಕಲಾವಿದೆ. ಬಾಲ್ಯದಲ್ಲಿ ಯಕ್ಷಗಾನವನ್ನೇ ನೋಡಿ ಯಕ್ಷಗಾನದ ಮೇಲಿನ ಒಲವು ಹೆಚ್ಚಾಯಿತು. ಬೇಸಿಗೆ ರಜೆಯಲ್ಲಿ ಬೆಳಿಗ್ಗೆ ಯಕ್ಷಗಾನ ಕ್ಯಾಸ್ಸೇಟ್ಟ್ ಗಳನ್ನು ಹಾಕಿದರೆ ಇಡೀ ದಿನ ಅದನ್ನೇ ನೋಡಿ ಬೇಸಿಗೆ ರಜೆಯನ್ನು ಕಳೆಯುತ್ತಿದ್ದೆ. ಮೇಳ ಹೊರಟ ಮೇಲೆ ಅಪ್ಪನೊಂದಿಗೆ ಎಲ್ಲ ಯಕ್ಷಗಾನ ಬಯಲಾಟಕ್ಕೆ ಹೋಗ್ತಿದ್ದೆ. ನನ್ನ ಪಿಜ್ಜಿ ಹರಿಕಥಾ ವಿದುಷಿ, ಹಾಗಾಗಿ ಅಮ್ಮನಿಗೂ ಅವ್ರು ಹೇಳಿದ ಪುರಾಣ ಕಥೆಗಳನ್ನು ನನಗೆ ಹೇಳುವುದು, ಹೊಸ ಕಥೆಗಳನ್ನೂ ಓದುವುದು ಅಚ್ಚು ಮೆಚ್ಚು. ಇದೆಲ್ಲವು ನನ್ನನ್ನು ಯಕ್ಷಗಾನ ಕಲೆಯತ್ತ ಸೆಳೆಯಿತು ಎಂದು ಹೇಳುತ್ತಾರೆ ವೈಷ್ಣವಿ. ನೆಚ್ಚಿನ ಪ್ರಸಂಗಗಳು:- ಶ್ರೀ ದೇವೀಮಹಾತ್ಮೆ, ಶ್ರೀ ರಾಮ ನಿರ್ಯಾಣ, ಶ್ರೀ ರಾಮ ಪಟ್ಟಾಭಿಶೇಕ, ಉತ್ತರನ ಪೌ...

ಯಕ್ಷ ಸಾಧಕರು 394

Image
"ಉತ್ಸಾಹಿ ಕಲಾವಿದ" ಉಡುಪಿ ಜಿಲ್ಲೆಯ ಕುಂದಾಪುರದ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ರಾಮಕೃಷ್ಣ ದೇವಾಡಿಗ ಹಾಗೂ ಸಾವಿತ್ರಿ ಇವರ ಮೂರು ಜನ ಮಕ್ಕಳಲ್ಲಿ ಮೊದಲ ಮಗನಾಗಿ 20.02.2004 ರಂದು ರೋಶನ ದೇವಾಡಿಗ ಅವರ ಜನನ. K.R Hegde College Of Paramedical Sciences College ನಲ್ಲಿ (DMLT - Diploma In Medical Laboratory Technology) ಹಾಗೂ Acharya Institute Of Health Sciences Bangalore ನಲ್ಲಿ BSC - (Bsc In Medical Laboratory Technology) ಇವರ ವಿದ್ಯಾಭ್ಯಾಸ. ತಂದೆ ತರುತ್ತಿದ್ದ ಯಕ್ಷಗಾನದ ಮುದ್ರಿಕೆಗಳನ್ನು(CD) ನೋಡಿ ನಾನು ಯಕ್ಷಗಾನ ಕಲಿಯಬೇಕು, ವೇಷ ಮಾಡಬೇಕೆಂದು ಆಸೆ ಪಟ್ಟು ಯಕ್ಷಗಾನ ಇನ್ನೂ ಕಲಿಯಬೇಕು ಎಂಬ ಪ್ರೇರಣೆಯಿಂದ ಬಿ.ವಿಶ್ವೇಶ್ವರ ಅಡಿಗ ಹಾಗೂ ಪ್ರಶಾಂತ ಮಯ್ಯ ಬಳಿ ಪ್ರಾಥಮಿಕ ಅಭ್ಯಾಸ ಮಾಡಿ ಮುಂದೆ ಮರವಂತೆ ದೇವರಾಜ ದಾಸ ಅವರ ಬಳಿ ಅಭ್ಯಾಸ ಮಾಡಿ 15 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಹವ್ಯಾಸಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ ರೋಶನ. ನೆಚ್ಚಿನ ಪ್ರಸಂಗಗಳು:- ಚಕ್ರ ಚಂಡಿಕೆ, ಲಂಕಾ ದಹನ, ಸುದರ್ಶನ ವಿಜಯ, ಚಂದ್ರಹಾಸ, ಶ್ವೇತಕುಮಾರ, ರುದ್ರಕೋಪ ಇತ್ಯಾದಿ. ನೆಚ್ಚಿನ ವೇಷ:- ಸುದರ್ಶನ, ಕೃಷ್ಣ, ಈಶ್ವರ, ಚಂದ್ರಹಾಸ, ಬಾರ್ಬರಿಕ ಇತ್ಯಾದಿ. ಯಕ್ಷಗಾನ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿ...

ಯಕ್ಷ ಸಾಧಕರು 393

Image
"ಯಕ್ಷಕಲಾ ಪ್ರತಿಭಾ ಸಂಪನ್ನೆ" ವೃತ್ತಿಯಲ್ಲಿ ಇವರು ಶಿಕ್ಷಕಿ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ. MA in ಜ್ಯೋತಿಷ್ಯ ಇವರ ವಿದ್ಯಾಭ್ಯಾಸ. ಮನೆಯಲ್ಲಿ ಅಜ್ಜ ಮಟಪಾಡಿ ರಾಮಮೋಹನ ಆಚಾರ್ಯ ಹಾಗೂ ಅಪ್ಪನಿಗೆ ಇವರು ಯಕ್ಷಗಾನ ಕಲಿಯಬೇಕು, ಯಕ್ಷಗಾನದಲ್ಲಿ ಸಾಧನೆ ಮಾಡಬೇಕು ಎಂದು ಆಸೆ. ಡೊಡ್ಡಜ್ಜ ಮಟಪಾಡಿ ರಾಜಗೋಪಾಲ ಆಚಾರ್ಯರು ಕೆಲವು ಸಂಸ್ಕೃತ ಯಕ್ಷಗಾನ ಪ್ರಸಂಗ ಬರೆದಿದ್ದರು. ಅದನ್ನೆಲ್ಲ ಕೇಳಿ ಇವರಿಗೆ ಯಕ್ಷಗಾನ ಹೆಚ್ಚು ಕಲಿಯಬೇಕೆಂದು ಆಸೆ. ಯಕ್ಷಗಾನದಲ್ಲಿ ವೇಷ ಮಾಡು ಎಂದು ಹುರಿದುಂಬಿಸುವವರು ಎಮ್.ಸಿ.ಕಲ್ಕೂರು. ಈ ಆಸೆ ಸಹಕಾರಗೊಳಿಸಲು ಬಡಗುತಿಟ್ಟು ಯಕ್ಷಗಾನವನ್ನು  ಗುರುಗಳಾದ ಕೃಷ್ಣಸ್ವಾಮಿ ಜೋಯಿಸ್, ಹರಿಕೃಷ್ಣ ಹೊಳ್ಳ, ಪ್ರತೀಶ್ ಕುಮಾರ್, ಕೇಶವ್ ಆಚಾರಿ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಬಳಿ ಕಲಿತು; ತೆಂಕುತಿಟ್ಟು ಯಕ್ಷಗಾನವನ್ನು ರಕ್ಷಿತ್ ಶೆಟ್ಟಿ ಪಡ್ರೆ, ರಾಮಪ್ರಕಾಶ್ ಕಲ್ಲೂರಾಯ, ಲಕ್ಷ್ಮಣ್ ಕುಮಾರ್ ಮರಕಡ ಬಳಿ ಅಭ್ಯಾಸ ಮಾಡಿ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದೆ ಸ್ವಸ್ತಿಶ್ರೀ ಸಾಮಗ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿಯ ಸಾಮಗ ಎಮ್ ನರಸಿಂಹ ಆಚಾರ್ಯ ಹಾಗೂ ಮಾಲಿನೀ ಇವರ ಮಗಳಾಗಿ 12.08.2001 ರಂದು ಸ್ವಸ್ತಿಶ್ರೀ ಸಾಮಗ ಅವರ ಜನನ. ನೆಚ್ಚಿನ ಪ್ರಸಂಗಗಳು:- ಶ್ರೀ ದೇವೀ ಮಹಾತ್ಮೆ, ಶಬರಿ ಮೋಕ್ಷ, ಗದಾಯುದ್ಧ , ಅಭಿಮನ್ಯು ಕಾಳಗ, ಸುಧನ್ವಾರ್...