ಯಕ್ಷ ಸಾಧಕರು ೩೨

ಬಹುಮುಖ ಪ್ರತಿಭೆ ಅಜಿತ್ ಕೆರೆಕಾಡು 

ವಜ್ರದಂತೆ ಪ್ರತಿಭೆಯೊಂದು ಯಕ್ಷಲೋಕದಲ್ಲಿ ತನ್ನ ಛಾಪು ಮೂಡಿಸುತ್ತಾ ಹಲವಾರು ವೇದಿಕೆ ಏರಿ ಕಲಾ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಅಪ್ರತಿಮ ಪ್ರತಿಭಾನ್ವಿತ ಅಜಿತ್ ಕೆರೆಕಾಡು.

ದಿನಾಂಕ 11.11.1998 ರಂದು ಶ್ರೀಮತಿ ಪ್ರೇಮಲತಾ ಹಾಗೂ ಜಯಂತ್ ಅಮೀನ್ ಇವರ ಪ್ರೀತಿಯ ಮಗನಾಗಿ ಜನನ. ಪ್ರಸ್ತುತ ಉಜಿರೆಯ ಪ್ರಸನ್ನ ಕಾಲೇಜಿನಲ್ಲಿ  ಬಿ.ಎಡ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಇವರ ತಂದೆ ಹಾಗೂ ತಾಯಿ ಪ್ರೇರಣೆ. ದಿ. ಸತೀಶ್ ಆಚಾರ್ಯ, ಉಬರಡ್ಕ ಉಮೇಶ್ ಶೆಟ್ಟಿ, ಪ್ರಸಾದ್ ಚೇರ್ಕಾಡಿ ಇವರ ನಾಟ್ಯಗಾರಿಕೆ ಗುರುಗಳು. ಗಣೇಶ್ ಕೊಲಕಾಡಿ ಹಾಗೂ ದಿನೇಶ್ ಶೆಟ್ಟಿ ಕಾವಳಕಟ್ಟೆ ಅರ್ಥಗಾರಿಕೆ ಹಾಗೂ ಛಂದಸ್ಸು ಗುರುಗಳು. ಭಾಗವತಿಕೆಯಲ್ಲಿ ಗಣೇಶ್ ಕೊಲಕಾಡಿ, ಮಾಂಬಾಡಿ ಸುಬ್ರಮಣ್ಯ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಇವರ ಗುರುಗಳು.

ದೇವಿ ಮಹಾತ್ಮೆ, ಅಭಿಮನ್ಯು ಕಾಳಗ, ಸುದರ್ಶನ ವಿಜಯ, ನರಕಾಸುರ ಮೋಕ್ಷ ಇವರ ನೆಚ್ಚಿನ ಪ್ರಸಂಗಗಳು. ದೇವಿ, ಸುದರ್ಶನ, ಅಭಿಮನ್ಯು ಇವರ ನೆಚ್ಚಿನ ವೇಷಗಳು. 13 ವರ್ಷಗಳಿಂದ ಶ್ರೀ ವಿನಾಯಕ ಯಕ್ಷ ಕಲಾ ತಂಡ ಕೆರೆಕಾಡು ತಂಡದಲ್ಲಿ ವೇಷವನ್ನು ಮಾಡುತ್ತಿದ್ದಾರೆ ಹಾಗೂ ಕಟೀಲು, ಬಪ್ಪನಾಡು, ಹೊಸನಗರ, ಹಾಗೂ ಬಡಗಿನ ಗುತ್ಯಮ್ಮ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ ಇದೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡ್ತೀರಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ ಇವರು:-
ಯಾವುದೇ ಪಾತ್ರವಾಗಲಿ ಪೂರ್ವ ಸಿದ್ದತೆ  ಮಾಡುತ್ತೇನೆ, ಅದು ಆ ಮೊದಲು ಮಾಡಿದ ಪಾತ್ರವಾದರು ಸರಿ, ಆ ಮೊದಲಿನ ತಪ್ಪುಗಳನ್ನು ಸರಿಪಡಿಸಿ, ವಿನೂತನ ಕಲ್ಪನೆಗಳನ್ನು ಜೋಡಿಸುವುದು. ಹಿರಿಯ ಕಲಾವಿದರಿಂದ ಮಾಹಿತಿ ಸಂಗ್ರಹಿಸಿ, ಪ್ರತಿ ಪ್ರದರ್ಶನಕ್ಕೆ ಬೇರೆ ಬೇರೆ ಅರ್ಥಗಾರಿಕೆ ಸಿಧ್ಧ ಮಾಡಿಕೊಳ್ಳುತ್ತೇನೆ.

ಕೋಟ ಶಿವರಾಮ ಕಾರಂತ ಪ್ರಶಸ್ತಿ, ನಾಟ್ಯರತ್ನ ಪ್ರಶಸ್ತಿ, ಅಮಲಕಲಾನಿಧಿ ಪ್ರಶಸ್ತಿ, ಮುಂಬೈ ರಂಗಭೂಮಿ ಪ್ರಶಸ್ತಿ ಇವರಿಗೆ ಸಿಕ್ಕಿರುವ ಪ್ರಶಸ್ತಿಗಳು. ಕಾದಂಬರಿ ಓದುವುದು, ಹಾಡು ಕೇಳುವುದು, ತಾಳಮದ್ದಳೆ ಕೇಳುವುದು ಇವರ ಹವ್ಯಾಸಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಇಂದು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿದೆ. ಆದರೆ ಅತಿಯಾದ ನಾಟ್ಯ, ಭಾಗವತಿಕೆ ಯಕ್ಷಗಾನದ ಅಂದ ಕೆಡಿಸುತ್ತಾ ಇದೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಲೆಯ ಅಭಿಮಾನಕ್ಕಿಂತ ಕಲಾವಿದರ ಅಭಿಮಾನಿಗಳು ಹೆಚ್ಚುತ್ತಿರುವುದು ಬೇಸರದ ಸಂಗತಿ... ಪ್ರೇಕ್ಷಕರ ಚಪ್ಪಾಳೆ ಕಲಾವಿದನಿಗೆ ಸನ್ಮಾನ. ಉತ್ತಮ ಪ್ರೇಕ್ಷಕನೇ ಕಲಾವಿದರ ತಪ್ಪನ್ನು ತಿದ್ದುವ ಗುರು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನಾದರೂ ಇದೆಯಾ:-
ಕಿರಿವಯಸ್ಸಿನ ಯಕ್ಷ ಗುರುವಾಗಿ ಸೇವೆ ಸಲ್ಲಿಸುತ್ತಿರುವ ನಾನು ಮುಂದೆಯು ಸಾವಿರಾರು ಮಕ್ಕಳಿಗೆ ಉಚಿತವಾಗಿಯೇ ಯಕ್ಷಗಾನ ಕಲಿಸುವ ಹಂಬಲ. ಒಂದು ವಿಭಾಗಕ್ಕೆ ಸೀಮಿತ ಕಲಾವಿದನಲ್ಲದೆ, ಆಲ್ ರೌಂಡರ್ ಕಲಾವಿದನನ್ನು ರೂಪುಗೊಳಿಸುವುದು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395