ಯಕ್ಷ ಸಾಧಕರು 396
"ಪ್ರತಿಭಾಪೂರ್ಣ ಯಕ್ಷನಿಧಿ" ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ. ಊರಿನಲ್ಲಿ ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಇವರು ಯಕ್ಷಗಾನ ಕಲಿಯಲು ಪ್ರೇರಣೆ. ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಶ್ರೀ ಸದಾನಂದ ಐತಾಳ್ ಗುಂಡ್ಮಿ ಮತ್ತು ಶ್ರೀ ದೇವದಾಸ ರಾವ್ ಕೂಡ್ಲಿ ಇವರ ಯಕ್ಷಗಾನ ಗುರುಗಳು. ಕಳೆದ 12 ವರ್ಷಗಳಿಂದ ವಡ್ಡರ್ಸೆಯ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ) ಸಂಸ್ಥೆಯಲ್ಲಿ ಅಲ್ಲದೆ ವಿವೇಕ ಯಕ್ಷರಂಗ ಮಧುವನ ಅಚ್ಲಾಡಿ ಮತ್ತು ಯಕ್ಷಮಿತ್ರರು ಹೊನ್ನಾರಿ ಗಿಳಿಯಾರು ಸಂಸ್ಥೆಯಲ್ಲಿ ಅತಿಥಿಯಾಗಿ ವೇಷಗಳನ್ನು ಮಾಡುತ್ತಾ ಇಂದು ಯಕ್ಷಗಾನ ರಂಗದಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಕಲಾವಿದ ನಾಗರಾಜ ಆಚಾರ್ಯ ವಿ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವಡ್ಡರ್ಸೆಯ ರುದ್ರ ಆಚಾರ್ಯ ಹಾಗೂ ಜಲಜ ಇವರ ಮಗನಾಗಿ 29.07.1979ರಂದು ನಾಗರಾಜ ಆಚಾರ್ಯ ವಿ ಅವರ ಜನನ. ಬಿ.ಎ ಮತ್ತು ಟಿ.ಸಿ.ಎಚ್ ಇವರ ವಿದ್ಯಾಭ್ಯಾಸ. ಪ್ರಸ್ತುತ ಪಿ.ಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆಕ್ಕಟ್ಟೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲಿಸುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಬರುವ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ವಡ್ಡರ್ಸೆ ವಸುಂಧರೆ (ಗುರುಗಳಾದ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ವಡ್ಡರ್ಸೆಯ ಇತಿಹಾಸವನ್ನು ಆಧರಿಸಿದ ...