ಯಕ್ಷ ಸಾಧಕರು ೪೧
ಯಕ್ಷರಂಗದ ಯುವ ವೇಷಧಾರಿ ಶ್ರೀಯುತ ರವಿಕುಮಾರ್ ಮುಂಡಾಜೆ.
ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ. ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಲಾವಿದರು ನಮಗೆ ನೋಡಲು ಸಿಗುತ್ತಾರೆ. ಅಂತಹ ಯುವ ಕಲಾವಿದರಲ್ಲಿ ಓರ್ವ ಯುವ ವೇಷಧಾರಿ, ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿರುವ ಶ್ರೀಯುತ ರವಿಕುಮಾರ್ ಮುಂಡಾಜೆ.
ಬೆಳ್ತಂಗಡಿ ತಾಲ್ಲೂಕು ಮುಂಡಾಜೆಯ ಶ್ರೀಮತಿ ಕಮಲ ಹಾಗೂ ರಾಘವ ಪೂಜಾರಿ ಇವರ ಮಗನಾಗಿ 22.03.1986ರಂದು ಜನನ. ಬಿ.ಎ ಇವರ ವಿದ್ಯಾಭ್ಯಾಸ. ಶ್ರೀಯುತ ದಿವಾಣ ಶಿವಶಂಕರ ಭಟ್ ಇವರ ಯಕ್ಷಗಾನದ ಗುರುಗಳು. ಊರಿನಲ್ಲಿ ನಡೆಯುತ್ತಿದ್ದ ಕಟೀಲು, ಧರ್ಮಸ್ಥಳ ಮೇಳದ ಯಕ್ಷಗಾನ ನೋಡಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಆಯಿತು.
ಯಕ್ಷಗಾನದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಬ್ರಹ್ಮ, ವಿಷ್ಣು, ಚಂಡ ಮುಂಡ, ರಾಮ, ಕೃಷ್ಣ, ಅಭಿಮನ್ಯು, ತರಣಿಸೇನ, ಭಾರ್ಗವ, ಹನುಮಂತ, ಜಾಬಾಲಿ ಉಳಿದಂತೆ ಎಲ್ಲಾ ವೇಷಗಳು ಇವರ ನೆಚ್ಚಿನ ವೇಷಗಳು. ಎಡನೀರು, ಉಳ್ಳಾಲ ಪ್ರಸ್ತುತ ಕಟೀಲು ಮೇಳದಲ್ಲಿ 14 ವರ್ಷಗಳಿಂದ ತಿರುಗಾಟವನ್ನು ಮಾಡಿದ ಅನುಭವ ಇವರಿಗೆ ಇದೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಪುರಾಣ ಪುಸ್ತಕ ಓದುವುದು, ಅನುಭವಿ ಹಿರಿಯ ಕಲಾವಿದರಲ್ಲಿ ಕೇಳಿ ಆ ದಿನದ ಪ್ರಸಂಗದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ.
ಪುಸ್ತಕ ಓದುವುದು ಹಾಗೂ ಹಾಡುವುದು ಇವರ ಹವ್ಯಾಸಗಳು. ಯಕ್ಷಗಾನ ನಾಟ್ಯ ತರಬೇತಿಗಾಗಿ ಇವರ ಶಿಷ್ಯರಿಂದ ಗುರುವಂದನೆ ಇವರಿಗೆ ಸಿಕ್ಕಿರುತ್ತದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಬದಲಾವಣೆ ಜಗದ ನಿಯಮ ಹಾಗಾಗಿ ಯಕ್ಷಗಾನದಲ್ಲಿಯೂ ಬದಲಾವಣೆ ಆಗುತ್ತಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದಲ್ಲಿ ಅನೇಕ ಅನುಭವಿ ಪ್ರೇಕ್ಷಕರು ಇರುವುದು ತುಂಬಾನೇ ಸಂತೋಷದ ವಿಷಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಉತ್ತಮ ಕಲಾವಿದನಾಗಬೇಕು ಎಂಬ ಬಯಕೆ ಇದೆ ಎಂದು ಹೇಳುತ್ತಾರೆ ಶ್ರೀಯುತ ರವಿಕುಮಾರ್ ಮುಂಡಾಜೆ.
ಸುಣ್ಣಂಬಳ ವಿಶ್ವೇಶ್ವರ ಭಟ್, ರವಿರಾಜ್ ಭಟ್ ಪನೆಯಾಲ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಕೊಲಕಾಡಿ ಇವರ ಮಾರ್ಗದರ್ಶನ ಹಾಗೂ ಮೇಳದ ಸರ್ವ ಕಲಾವಿದರಿಗೂ ನನ್ನ ಧನ್ಯವಾದಗಳು (ಎಂದು ಹೇಳುತ್ತಾರೆ ರವಿಕುಮಾರ್ ಮುಂಡಾಜೆಯವರು.)
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- Yaksha Madhava, Vaishak Kotian
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️:- +91 8971275651
Comments
Post a Comment