“ಸುವರ್ಣ ಸ್ವರ ಶ್ರವಣ"

“ಸುವರ್ಣ ಸ್ವರ ಶ್ರವಣ"

ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿ ಮಲೆನಾಡಿನವರೆಗೂ ಹಬ್ಬಿರುವ ಆಕರ್ಷಕ ಕಲೆ, ಕರಾವಳಿಯ ಈ ಗಂಡುಕಲೆ ಕನ್ನಡದ ಕಂಪನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ಬಿತ್ತರಿಸಿದೆ. ಕರಾವಳಿ ತೀರದ ಸಮುದ್ರದ ಅಲೆಗಳಂತೆ ಯಕ್ಷಗಾನಕ್ಕೂ ಸಮುದ್ರದ ಅಲೆಗಳ ನಾದವಿದೆ; ಭೋರ್ಗರೆತವಿದೆ. ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಯಕ್ಷಗಾನ-ಪ್ರಸಂಗ, ಆಟ, ಬಯಲಾಟ, ಹರಕೆಯಾಟ, ದಶಾವಾತಾರದ ಆಟ ಎಂಬೆಲ್ಲ ಹೆಸರುಗಳಿಂದ ಪ್ರಚಾರದಲ್ಲಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ಕೆಳಗೆ ಮತ್ತು ಅದರ ಸೆರಗಂಚಿನ ಹಲವು ತಾಲೂಕು-ಜಿಲ್ಲೆಗಳಲ್ಲಿ ಪ್ರಚಾರದಲ್ಲಿರುವ ಪ್ರಾದೇಶಿಕ ಕಲೆಯಾಗಿ ಯಕ್ಷಗಾನ ಹೆಸರಾಗಿದೆ. ಅತ್ಯಾಕರ್ಷಕ ವೇಷಭೂಷಣಗಳಿಂದ ಅದು ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಬಣ್ಣ ಹಾಗೂ ವೇಷಭೂಷಣಗಳಿಂದ ಯಕ್ಷಗಾನವೂ ಯಕ್ಷಲೋಕವನ್ನು ಸೃಷ್ಟಿಸುತ್ತದೆ.

ತುಳುನಾಡು ಎಂದಾಗ ಎಲ್ಲರ ಮನಸಿಗೆ ತಟ್ಟನೆ ಹೊಳೆಯುವ ವಿಚಾರಗಳಲ್ಲಿ ಯಕ್ಷಗಾನವೂ ಒಂದು. ಮನೋರಂಜನೆಯ ಮೂಲಕ ಮನೋವಿಕಾಸಕ್ಕೆ ಕಾರಣವಾಗುವ ಒಂದು ಸಂಪೂರ್ಣ ಕಲೆ ನಮ್ಮ ಯಕ್ಷಗಾನ.

ಯಕ್ಷಗಾನ ಕಲೆಯ ಬಗ್ಗೆ ತುಂಬಾನೇ ಆಸಕ್ತಿ ಇರುವ ನಾನು ಕಲೆಗೆ ಏನಾದ್ರೂ ಕೊಡುಗೆ ನೀಡಬೇಕು ಎಂಬ ಕನಸು ಕಾಣುತ್ತಿದ್ದೆ. ಯಕ್ಷಗಾನ ಕಲಾವಿದರ ಬಗ್ಗೆ ಸರಣಿ ಲೇಖನ ಬರೆಯುವ ಬಗ್ಗೆ ಯೋಚನೆ ಮಾಡಿದ್ದೆ. ಲೇಖನವನ್ನು ಯಾವ ರೀತಿ ಬರೆಯಬೇಕು, ಏನೆಲ್ಲಾ ಮಾಹಿತಿ ಇರಬೇಕು ಎಂದು ಹೇಳಿಕೊಟ್ಟು ನನ್ನ  ಕನಸಿಗೆ ಪ್ರೋತ್ಸಾಹ ಹಾಗೂ ಗುರುಗಳಾಗಿ ಮಾರ್ಗದರ್ಶನ ನೀಡಿದವರು ಯಕ್ಷಕವಿ, ವಾಗ್ಮಿ ಪ್ರೊ. ಪವನ್ ಕಿರಣ್ ಕೆರೆ ಹಾಗೂ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು.
ನನ್ನ ಈ ಸರಣಿ ಲೇಖನದಲ್ಲಿ ಇಂದಿಗೆ ೧೦೦ ಲೇಖನಗಳನ್ನು  ಪೂರ್ಣಗೊಳಿಸಿರುವೆ. ೧೫ ಏಪ್ರಿಲ್ ೨೦೨೦ ರಂದು ನಾನು ಬರೆದ ಪ್ರಥಮ ಲೇಖನವು ಪ್ರೊ. ಪವನ್ ಕಿರಣ್ ಕೆರೆ ಇವರ “ನಗಾರಿ ಧ್ವನಿ" ಪತ್ರಿಕೆಯಲ್ಲಿ ಪ್ರಕಟಗೊಂಡು, ನಂತರದ ದಿನಗಳಲ್ಲಿ  ಬರೆದ ೯೮ ಲೇಖನಗಳು ಪ್ರತೀ ವಾರ ಶ್ರೀಯುತ ಚಂದ್ರಶೇಖರ ಕುಳಮರ್ವ ಅವರ ಉಪಯುಕ್ತ ನ್ಯೂಸ್‌ ವೆಬ್‌ ಪೋರ್ಟಲ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಶ್ರೀಯುತ ಚಂದ್ರಶೇಖರ ಕುಳಮರ್ವ ಇವರಿಗೆ ತುಂಬು ಹೃದಯದ ಧನ್ಯವಾದಗಳು.

ಸರಣಿ ಲೇಖನದ ೨೫ನೇ ಲೇಖನವಾಗಿ “ರಂಗ ನಿಷ್ಠೆ, ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು", ೫೦ನೇ ಲೇಖನವಾಗಿ “ತೆಂಕುತಿಟ್ಟು ಯಕ್ಷಗಾನ ರಂಗದ ಧ್ರುವ ತಾರೆ, ಕಲಾವಿದರ ಕಾಮಧೇನು, ಪಾವಂಜೆ ಮೇಳದ ಪ್ರಧಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ" ಅವರ ಲೇಖನ ಪ್ರಕಟಗೊಂಡಿದೆ. ೫೦ನೇ ಲೇಖನವನ್ನು ಒಂದು ವಿಭಿನ್ನವಾಗಿ ಮಾಡಬೇಕು ಎಂಬ ಯೋಚನೆಯಿಂದ ರಸಪ್ರಶ್ನೆ ಮೂಲಕ ಆಯೋಜಿಸಲಾಯಿತು.

ರಸ ಪ್ರಶ್ನೆ ಕಾರ್ಯಕ್ರಮದ ಪ್ರಶ್ನೆಯು "ಯಕ್ಷ ಸಾಧಕರು ಸರಣಿ ಲೇಖನದ ೫೦ನೇ ಲೇಖನ ಯಾವ ಕಲಾವಿದರ ಬಗ್ಗೆ ಪ್ರಕಟಗೊಳ್ಳುತ್ತದೆ?" ಎಂದು ಕೇಳಲಾಗಿತ್ತು.
ರಸಪ್ರಶ್ನೆ ಕಾರ್ಯಕ್ರಮದ ಸರಿಯಾದ ಉತ್ತರ ನೀಡಿದ ವಿಜೇತರಿಗೆ ಶ್ರೀಯುತ ರವಿಶಂಕರ್ ವಳಕ್ಕುಂಜ ಅವರು ಬರೆದು ವಳಕ್ಕುಂಜ ಪ್ರಕಾಶನ ಮಾಡವು ಪುತ್ತೂರು ಇವರು ಪ್ರಕಟಿಸಿದ
● ಯಕ್ಷಗಾನ ಪ್ರಸಂಗ ದೃಶ್ಯಾವಳೀ
● ಯಕ್ಷಪಾತ್ರದೀಪಿಕಾ ಹಾಗೂ
ಶ್ರೀಯುತ ಕೃಷ್ಣಪ್ರಕಾಶ ಉಳಿತ್ತಾಯ ಇವರು ಬರೆದ ಈಶಾವಾಸ್ಯಂ ಕಲಾ ಪ್ರಕಾಶನ ಇವರು ಪ್ರಕಟಿಸಿದ ಕರ್ನಾಟಕ ಯಕ್ಷಗಾನ ಅಕಾಡಮಿ ಬಹುಮಾನ ಪುರಸ್ಕೃತ ಕೃತಿ "ಅಗರಿ ಮಾರ್ಗ" ಪುಸ್ತಕವನ್ನು ಬಹುಮಾನವಾಗಿ ಕೊಡಲಾಗಿದೆ.

ಹೀಗೆ ಮುಂದುವರೆದು ೭೫ನೇ ಲೇಖನವಾಗಿ “ಯಕ್ಷಗಾನ ಪರಂಪರೆಯ ಪ್ರತಿಪಾದಕ ಗುರು ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ ಭಾಗವತೀ ಶ್ರೀಮತಿ ಲೀಲಾ ಬೈಪಾಡಿತ್ತಾಯ" ಇವರ ಲೇಖನ ಪ್ರಕಟಗೊಂಡು; ೨೦.೦೨.೨೦೨೨ ರಂದು
“ಸುವರ್ಣ ಸ್ವರ ಶ್ರವಣ"
“ಮಯ್ಯರ ಕಲಾರೂಪ..ಮಧುರಾಲಾಪ"
ಎಂಬ ಶೀರ್ಷಿಕೆಯಲ್ಲಿ ಸ್ವರ ಸ್ನೇಹ ಜೀವಿ ಶ್ರೀಯುತ ರಾಘವೇಂದ್ರ ಮಯ್ಯ ಹಾಲಾಡಿ ಅವರ ನೇರ ಸಂದರ್ಶನವು “ಯಕ್ಷಗಾನ ನಾಟ್ಯ" ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಿದೆ.

ನನ್ನ ಈ ಸರಣಿ ಲೇಖನದಲ್ಲಿ ೧೦೦ ಕಲಾವಿದರ ಪರಿಚಯ ಮಾಡಿದ ವಿವರ:-
೧.ಶ್ರವಣ್ ಕುಮಾರ್ ಕೊಳಂಬೆ.
೨.ಯಕ್ಷಪ್ರಿಯೆ ಅರ್ಷಿಯಾ.
೩.ಮನೆಯನ್ನೇ ರಂಗಸ್ಥಳವನ್ನಾಗಿಸಿದ ಕಲಾವಿದರು; ನವ್ಯ ಹೊಳ್ಳ, ದಿವ್ಯ ಹೊಳ್ಳ, ದೀಪಾ ಹೊಳ್ಳ, ಆದಿತ್ಯ ಹೊಳ್ಳ.
೪.ಯಕ್ಷರಂಗದ ಧಿಗಿಣ ವೀರ ಲೋಕೇಶ್ ಮುಚ್ಚೂರು.
೫.ಯಕ್ಷರಂಗದ ದೇವಿ ಭಟ್ರು ರಮೇಶ್ ಭಟ್ ಬಾಯಾರು.
೬.ಬಹುಮುಖ ಪ್ರತಿಭೆ ವಿಕ್ರಮ್ ಮಯ್ಯ ಪೈವಳಿಕೆ.
೭.ಪಂಚರಾಜ್ಯ ಯಕ್ಷಪ್ರಭೃತಿ  ಕೆ ಗೋವಿಂದ ಭಟ್ ನಿಡ್ಲೆ.
೮.ಬಡಗುತಿಟ್ಟಿನ ಆಲ್ ರೌಂಡರ್ ಕಲಾವಿದ ನೀಲ್ಕೋಡು ಶಂಕರ ಹೆಗಡೆ.
೯.ಯಕ್ಷಪಟು ಸುಷ್ಮಾ ಮೈರ್ಪಾಡಿ.
೧೦.ಯಕ್ಷರಂಗದ ಯುವ ಪ್ರತಿಭೆ ಶರವೂರು ಶಿಖಿನ್ ಶರ್ಮ.
೧೧.ಯಕ್ಷರಂಗದ ಯುವ ಪುಂಡುವೇಷಧಾರಿ ಶಿವಾನಂದ ಶೆಟ್ಟಿ ಪೆರ್ಲ.
೧೨.ತೆಂಕುತಿಟ್ಟು ಯಕ್ಷಗಾನದ ಜೂ.ಪುತ್ತಿಗೆ ಶೈಲಿಯ ಸ್ವರ ಸಾಮ್ಯ ಉಳ್ಳ ಭಾಗವತರು ಶ್ರೀಯುತ ಮಹೇಶ ಜೆ ರಾವ್ ಕನ್ಯಾಡಿ.
೧೩.ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಸಮರ್ಥ ಪುಂಡುವೇಷಧಾರಿ  ವಿಷ್ಣುಶರ್ಮ ವಾಟೆಪಡ್ಪು.
೧೪.ಸುಮಧುರ ಕಂಠದ  ಭಾಗವತರು ಶ್ರೀಯುತ ಚಂದ್ರಕಾಂತ್ ರಾವ್ ಮೂಡುಬೆಳ್ಳೆ.
೧೫.ತೆಂಕುತಿಟ್ಟು ಪ್ರಸಿದ್ಧ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ.
೧೬.ಯಕ್ಷಸಂಸಾರ:- ಶ್ರೀಯುತ ಸತ್ಯನಾರಾಯಣ ಅಡಿಗ ಹಾಗೂ ಇವರ ಮಕ್ಕಳು ಶ್ರೀಮತಿ ಅಮೃತಾ ಅಡಿಗ, ಅನನ್ಯ ಅಡಿಗ, ಅಳಿಯ ಕೌಶಿಕ್ ರಾವ್ ಹಾಗೂ ಇವರ ತಮ್ಮ ಕೌಶಲ್ ರಾವ್.
೧೭.ಕೌಟುಂಬಿಕ ಕಥಾನಕಗಳ ಕಥಾಕರ್ತ ಅಲ್ತಾರು ನಂದೀಶ್ ಶೆಟ್ಟಿ.
೧೮.ಯಕ್ಷಲೋಕದ ಕೋಲ್ಮಿಂಚು ಪ್ರಕಾಶ್ ಮೊಗವೀರ ಕಿರಾಡಿ.
೧೯.ಬಡಗುತಿಟ್ಟಿನ ಯುವ ಭಾಗವತರು ಗಣೇಶ್ ಆಚಾರ್ ಬಿಲ್ಲಾಡಿ.
೨೦.ತೆಂಕುತಿಟ್ಟು ಯಕ್ಷಗಾನದ ಯುವ ಮದ್ದಳೆ ಹಾಗೂ ಚೆಂಡೆ ವಾದಕರು ಶ್ರೀಯುತ ಲವ ಕುಮಾರ್ ಐಲ.
೨೧.ಬಡಗುತಿಟ್ಟಿನ ಯುವ ಕಥಾಕರ್ತ ಅಕ್ಷಯ್ ಶೆಟ್ಟಿ ಮುಂಬಾರು.
೨೨.ಯಕ್ಷರಂಗದ ಯುವ ಕಲಾವಿದೆ ಶರಣ್ಯ ರಾವ್ ಶರವೂರು.
೨೩.ತೆಂಕು-ಬಡಗಿನ ಭಾಗವತರು ಶ್ರೀಯುತ ದಿನೇಶ್ ಭಟ್ ಯಲ್ಲಾಪುರ.
೨೪.ಯಕ್ಷಗಾನದ ಸರ್ವ ಸಮರ್ಥ ವೇಷಧಾರಿ ಮಂಜುನಾಥ್ ಭಟ್ ಬೆಳ್ಳಾರೆ.
೨೫.ರಂಗ ನಿಷ್ಠೆ,ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು.
೨೬.ಯಕ್ಷರಂಗದ ಪ್ರಸಿದ್ಧ ಮಹಿಳಾ ಕಲಾವಿದೆ ಶ್ರೀಮತಿ ಸಾಯಿಸುಮಾ ಎಂ ನಾವಡ ಕಾರಿಂಜ.
೨೭.ಬಡಗುತಿಟ್ಟಿನ ಖ್ಯಾತ ಸ್ತ್ರೀ ವೇಷಧಾರಿ ಹಾಗೂ ಯಕ್ಷ ಗುರು ಶ್ರೀಯುತ ಮನೋಜ್ ಭಟ್.
೨೮.ಚೆಂಡೆಯ ಏಕಲವ್ಯ ಶ್ರೀಯುತ ಸುಜನ್ ಕುಮಾರ್ ಹಾಲಾಡಿ.
೨೯.ಬಹುಮುಖ ಪ್ರತಿಭೆ ಕಿಶನ್ ಅಗ್ಗಿತ್ತಾಯ.
೩೦.ಯಕ್ಷಗಾನದ ಸವ್ಯಸಾಚಿ,ಯಕ್ಷ ದಶಾವತಾರಿ,ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು.
೩೧.ತೆಂಕುತಿಟ್ಟು ಯಕ್ಷರಂಗದ ಯುವ ಭಾಗವತರು ಶ್ರೀಯುತ ಹರಿಪ್ರಸಾದ್ ಕಾರಂತ್ ಸರಪಾಡಿ.
೩೨.ಬಹುಮುಖ ಪ್ರತಿಭೆ ಅಜಿತ್ ಕೆರೆಕಾಡು.
೩೩.ಯಕ್ಷ ನಾಟ್ಯ ಗುರು, ವೇಷಧಾರಿ ಶ್ರೀಯುತ ದಿವಾಣ ಶಿವಶಂಕರ ಭಟ್.
೩೪.ಸುಮಧುರ ಕಂಠದ ಭಾಗವತರು ಶ್ರೀಯುತ ಪ್ರದೀಪ್ ಕುಮಾರ್ ಗಟ್ಟಿ.
೩೫.ಬಡಗುತಿಟ್ಟಿನ ಖ್ಯಾತ ಭಾಗವತರು ಸ್ವರ ನಿಧಿ ಶ್ರೀಯುತ ಪ್ರಸನ್ನ ಭಟ್ ಬಾಳ್ಕಲ್.
೩೬.ಮದ್ದಳೆ ಮಾಂತ್ರಿಕ ರಾಘವೇಂದ್ರ ಪರಮೇಶ್ವರ ಹೆಗಡೆ.
೩೭.ಯಕ್ಷ ಗುರು, ಸಂಘಟಕ, ಕಲಾ ಪೋಷಕ, ನಿರೂಪಕ ಶ್ರೀಯುತ ರವಿ ಅಲೆವೂರಾಯ ವರ್ಕಾಡಿ.
೩೮.ಯಕ್ಷರಂಗದಲ್ಲಿ ಮಿನುಗುತ್ತಿರುವ ಉಪನ್ಯಾಸಕಿ  ಶ್ರೀಮತಿ ವಿನುತ ನಿತೇಶ್ ಪೂಜಾರಿ.
೩೯.ಯಕ್ಷಕುವರಿ  ದಿಶಾ ಸಿ ಶೆಟ್ಟಿ ಕಟ್ಲ.
೪೦.ಯಕ್ಷಗಾನದ  ಪ್ರಸಂಗಕರ್ತ ಶ್ರೀಯುತ ಬೇಳೂರು ವಿಷ್ಣುಮೂರ್ತಿ ನಾಯಕ್.
೪೧.ಯಕ್ಷರಂಗದ ಯುವ ವೇಷಧಾರಿ ಶ್ರೀಯುತ ರವಿಕುಮಾರ್ ಮುಂಡಾಜೆ.
೪೨.ಯಕ್ಷ ಮಾಣಿಕ್ಯ ಶ್ರೀಯುತ ರಾಕೇಶ್ ರೈ ಅಡ್ಕ.
೪೩.ತೆಂಕುತಿಟ್ಟು ಯಕ್ಷಗಾನ ರಂಗದ ಹಸನ್ಮುಖಿ ಕಲಾವಿದ  ಶ್ರೀಯುತ ಆನಂದ್ ಪೂಜಾರಿ ಕೊಕ್ಕಡ.
೪೪.ರಂಗದ ಚೆಲುವ ಹರೀಶ್ ಮೊಗವೀರ ಜಪ್ತಿ‌ .
೪೫. ಯಕ್ಷಸಂಸಾರ:- ಶಾಲಿನಿ ಹೆಬ್ಬಾರ್, ಜಯಪ್ರಕಾಶ್ ಹೆಬ್ಬಾರ್, ವರುಣ್ ಹೆಬ್ಬಾರ್.
೪೬.ಮದ್ದಳೆ ಮಾಂತ್ರಿಕ ಪರಮೇಶ್ವರ್ ಪ್ರಭಾಕರ್ ಭಂಡಾರಿ.
೪೭.ಉಭಯತಿಟ್ಟಿನ ಭಾಗವತರು ಶ್ರೀಯುತ ಕೃಷ್ಣ ಪ್ರಪುಲ್ಲ.
೪೮.ಮದ್ದಳೆಯ ನಾದ ಶ್ರೀಯುತ ಕೃಷ್ಣಪ್ರಕಾಶ ಉಳಿತ್ತಾಯ.
೪೯. ತೆಂಕುತಿಟ್ಟು ಯಕ್ಷಗಾನ ರಂಗದ ಭಾಗವತರು ಶ್ರೀಯುತ ಡಾ.ಸತೀಶ್ ಪುಣಿಂಚತ್ತಾಯ ಪೆರ್ಲ.
೫೦.ಕಲಾವಿದರ ಕಾಮಧೇನು, ಯಕ್ಷಗಾನ ರಂಗದ ಧ್ರುವ ತಾರೆ, ಪಾವಂಜೆ ಮೇಳದ ಪ್ರದಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ.

೫೧. ಯಕ್ಷರಂಗದಲ್ಲಿ ಮಿನುಗುತ್ತಿರುವ ಇಂಗ್ಲಿಷ್ ಉಪನ್ಯಾಸಕ ಶ್ರೀಯುತ  ಶಶಾಂಕ್ ಪಟೇಲ್ ಕೆ.ಜಿ.
೫೨. ಯಕ್ಷರಂಗದಲ್ಲಿ ಮಿನುಗುತ್ತಿರುವ ಕನ್ನಡ ಅಧ್ಯಾಪಕಿ ಸುಷ್ಮಾ ಉದ್ಯಾವರ.
೫೩. ರಂಗಮಂಚದ ಯಕ್ಷ ಸ್ಪೂರ್ತಿಯ ಚಿಲುಮೆ.
೫೪. ಯಕ್ಷಗಾನ ರಂಗದ ಧ್ರುವ ತಾರೆ ಗಾನ ಕೋಗಿಲೆ ಶ್ರೀಯುತ ದಿ.ಕಾಳಿಂಗ ನಾವಡ.
೫೫. ಕಲಾಧರ್ಮ ದೇಗುಲದ ಯಕ್ಷ ‌ಪ್ರಣತಿ ಅಬ್ದುಲ್ ರವೂಫ್.
೫೬. ಚೆಂಡೆ ವಾದಕಿ ದಿವ್ಯಶ್ರೀ ನಾಯಕ್ ಸುಳ್ಯ.
೫೭. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ತಾಯಿ-ಮಗಳು; ಶ್ರೀಮತಿ ಜ್ಯೋತಿ ಟಿ.ಎನ್ ಹಾಗೂ ಅವರ ಮಗಳು ಕುಮಾರಿ ಟಿ.ಎನ್ ಶ್ರೀರಕ್ಷಾ ಭಟ್.
೫೮. ಪರಂಪರೆ ನೆಚ್ಚುವ ಯುವ ಕಲಾವಿದ ಉದಯ ಹೆಗಡೆ.
೫೯. ಬಡಗುತಿಟ್ಟಿನ ಯುವ ಮಹಿಳಾ ಭಾಗವತರು ಕುಮಾರಿ ಶ್ರೀರಕ್ಷಾ ರತ್ನವರ್ಮ ಹೆಗಡೆ.
೬೦. ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಭಾಗವತರಾದ ಶ್ರೀಯುತ ರಮೇಶ್ ಭಟ್ ಪುತ್ತೂರು.
೬೧. ಯಕ್ಷಗಾನ ರಂಗದ ಮೋಹಕ ತಾರೆ ಸುಧೀರ್ ಉಪ್ಪೂರು.
೬೨. ಬಡಗುತಿಟ್ಟು ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರು ಯಕ್ಷಮಾಣಿಕ್ಯ ಕು.ಚಿಂತನಾ ಹೆಗಡೆ ಮಾಳಕೋಡು.
೬೩. ಬಡಗುತಿಟ್ಟು ಯಕ್ಷಗಾನದ ಯುವ ಭಾಗವತರು ಶ್ರೀಯುತ ಪಲ್ಲವ ಗಾಣಿಗ ಹೇರಂಜಾಲು.
೬೪. ಯಕ್ಷ ಮೇನಕೆ ಶ್ರೀಯುತ ಮಹೇಶ್ ಕುಮಾರ್ ಸಾಣೂರು.
೬೫. ಯಕ್ಷ ರಂಗದ ಯುವ ಮಹಿಳಾ ಕಲಾವಿದೆ ಕುಮಾರಿ ಸುಷ್ಮಿತಾ ಸಾಲಿಗ್ರಾಮ.
೬೬. ಬಹುಮುಖ ಪ್ರತಿಭೆ ನೃತ್ಯ ವಿದುಷಿ ಶ್ರೀಮತಿ ಬಿ ಸುಮಂಗಲಾ ರತ್ನಾಕರ್ ರಾವ್.
೬೭. ಯಕ್ಷ ಚಿರ ಕನ್ಯೆ ಪಂಜು ಪೂಜಾರಿ ಬಗ್ವಾಡಿ.
೬೮. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕನ್ನಡ ಉಪನ್ಯಾಸಕ ಶ್ರೀಯುತ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ.
೬೯. ಯಕ್ಷಗಾನ ಕಲಾವಿದ, ಕಲಾ ಪೋಷಕ, ಸಮಾಜ ಸೇವಕ ಶ್ರೀ ಪಿ.ಜಿ ಜಗನ್ನಿವಾಸ ರಾವ್ ಪುತ್ತೂರು.
೭೦. ಯುವ ಯಕ್ಷ ರಂಗಕರ್ಮಿ ಶ್ರೀಯುತ ಶಮಂತ್ ಕುಮಾರ್ ಕೆ ಎಸ್.
೭೧. ಯಕ್ಷಗಾನದ ಬೆಂಕಿ ಚೆಂಡು ಶ್ರೀಯುತ ವಿಶ್ವನಾಥ್ ಪೂಜಾರಿ ಹೆನ್ನಾಬೈಲ್.
೭೨. ಬಡಗುತಿಟ್ಟಿನ ಪ್ರಖ್ಯಾತ ಚೆಂಡೆ ವಾದಕರು ಶ್ರೀಯುತ ರಾಧಾಕೃಷ್ಣ ಕುಂಜಿತ್ತಾಯ.
೭೩. ಕಟೀಲು ಮೇಳದ ದೇವಿ ಪಾತ್ರಧಾರಿ ಶ್ರೀಯುತ ಅರುಣ್ ಕೋಟ್ಯಾನ್.
೭೪. ತೆಂಕುತಿಟ್ಟು ಯಕ್ಷಗಾನ ರಂಗದ ಹವ್ಯಾಸಿ ಚೆಂಡೆ,ಮದ್ದಳೆ ವಾದಕರು ವೇಷಧಾರಿ ಶ್ರೀ ಮಧ್ವರಾಜ್ ಅಡಿಗ.
೭೫. ಯಕ್ಷಗಾನ ಪರಂಪರೆಯ ಪ್ರತಿಪಾದಕ ಗುರು ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ ಭಾಗವತೀ ಶ್ರೀಮತಿ ಲೀಲಾ ಬೈಪಾಡಿತ್ತಾಯ.
೭೬. ಬಡಗುತಿಟ್ಟಿನ "ಯಕ್ಷಯುವರಾಜ" ಚಂದ್ರಹಾಸ ಭೈರು ಗೌಡ.
೭೭. ಸುಮಧುರ ಕಂಠದ  ಭಾಗವತರು ಶ್ರೀಯುತ ಗಣೇಶ್ ಕುಮಾರ್ ನೆಲ್ಲಿಕಟ್ಟೆ.
೭೮. ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸ್ತ್ರೀ ವೇಷಧಾರಿ ಶ್ರೀಯುತ ಮುರಳೀಧರ ಕನ್ನಡಿಕಟ್ಟೆ.
೭೯. ಕಟೀಲು ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶ್ರೀಯುತ ಶೇಖರ್ ಗೌಡ ಹಿರೇಬಂಡಾಡಿ.
೮೦. ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಮಹಿಳಾ ಕಲಾವಿದೆ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ.
೮೧. "ಬಿಸ್ಮಿಲ್ಲಾ ಖಾನ್ ರಾಷ್ಟ್ರೀಯ ಯುವ ಪುರಸ್ಕಾರ" ಪ್ರಶಸ್ತಿ ಪುರಸ್ಕಾರ ಪಡೆದ ಭಾಗವತರು ಶ್ರೀಯುತ  ಅನಂತ ಹೆಗಡೆ ದಂತಳಿಗೆ.
೮೨. ಬಡಗುತಿಟ್ಟು ಯಕ್ಷಗಾನ ರಂಗದ  ಯುವ ವೇಷಧಾರಿ ವಿನಯ ಭಟ್  ಬೇರೊಳ್ಳಿ.
೮೩. ಯಕ್ಷಗಾನ ಕಥಾಕರ್ತೆ,ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀಮತಿ ಅರ್ಪಿತಾ ಹೆಗಡೆ.
೮೪. ಯಕ್ಷಗಾನ ಪ್ರಸಂಗಕರ್ತೆ ಶುಭಾಶಯ.
೮೫. ದುಬೈ ಯಕ್ಷಗಾನ ಅಭ್ಯಾಸ ತರಗತಿಯ ನಾಟ್ಯ ಗುರು ಶ್ರೀಯುತ ಶರತ್ ಕುಡ್ಲ.
೮೬. ಬಹುಮುಖ ಪ್ರತಿಭೆ ಯಕ್ಷಗಾನ ನಿರ್ದೇಶಕಿ  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ.
೮೭. ಯಕ್ಷ ಗಾರುಡಿ, ಸವ್ಯಸಾಚಿ ಶ್ರೀಯುತ ಸುಬ್ರಾಯ ಹೆಬ್ಬಾರ್ ಬಿ.
೮೮. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸೋದರಿಯರು.
೮೯. ಯಕ್ಷದ್ಯುಮಣಿ ಮೋಹನ್ ಕುಮಾರ್ ಅಮ್ಮುಂಜೆ.
೯೦. ಕಿರುತೆರೆ ನಟಿ, ಯಕ್ಷಗಾನ ಕಲಾವಿದೆ ನಾಟ್ಯ ಮಯೂರಿ ನಾಗಶ್ರೀ ಜಿ ಎಸ್.
೯೧. ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ.
೯೨. ಯಕ್ಷರಂಗದ ಯುವ  ವೇಷಧಾರಿ ಶ್ರೀಯುತ ಮಧುರಾಜ್ ಎಡನೀರು.
೯೩. ಸುಮಧುರ ಕಂಠದ ಭಾಗವತರು ಸುಧೀರ್ ಭಟ್ ಪೆರ್ಡೂರು.
೯೪. ಯಕ್ಷ ಲೋಕದ ನಾಟ್ಯ ಮಯೂರಿ ಶ್ರೀ ವಂಡಾರು ಗೋವಿಂದ ಮೊಗವೀರ.
೯೫. ಚೆಂಡೆಯ ಗಂಡುಗಲಿ ರಾಕೇಶ್ ಮಲ್ಯ ಹಳ್ಳಾಡಿ.
೯೬. ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ.
೯೭. ಯಕ್ಷ ಕುವರಿ ನಿಹಾರಿಕಾ ಕೆ ಭಟ್.
೯೮. ತೆಂಕು ಬಡಗಿನ ಯುವ ಕಲಾವಿದ ಶಬರೀಶ್ ಆಚಾರ್ಯ ಮುನಿಯಾಲು.
೯೯. ರಸಗಾನ ವಿಶಾರದ- ಸುರೇಶ ಶೆಟ್ಟಿ ಶಂಕರನಾರಾಯಣ.
೧೦೦. ಸ್ವರ ಸ್ನೇಹ ಜೀವಿ ರಾಘವೇಂದ್ರ ಮಯ್ಯ ಹಾಲಾಡಿ.

ಈ ಸರಣಿ ಲೇಖನ ಬರೆಯಲು ನನಗೆ ಪ್ರೋತ್ಸಾಹ ನೀಡಿದ ಪ್ರತೀ ಒಬ್ಬರಿಗೂ ಹಾಗೂ ಲೇಖನದಲ್ಲಿ ಪರಿಚಯಿಸಲ್ಪಟ್ಟಿರುವ ಪ್ರತೀ ಒಬ್ಬ ಕಲಾವಿದರಿಗೂ ತುಂಬು ಹೃದಯದ ಧನ್ಯವಾದಗಳು ಹಾಗೂ ಈ ಸರಣಿ ಲೇಖನದಲ್ಲಿ ಕಲಾವಿದರ ಬಗ್ಗೆ ಮಾಹಿತಿ, ಫೋಟೋ, ವಿಡಿಯೋ ನೀಡಿ ಸಹಕರಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಯಕ್ಷಗಾನ ಕಲೆ ಹಾಗೂ ಕಲಾವಿದರ ಮೇಲಿನ ಪ್ರೀತಿ ಗೌರವದಿಂದ ಆರಂಭಿಸಿದ ಲೇಖನ ಮಾಲಿಕೆಯ ಸಂಖ್ಯೆ ತಲುಪಿದೆ ೧೦೦. ನನ್ನ ಈ ಅಳಿಲು ಸೇವೆಗೆ ನೀವೆಲ್ಲರೂ ನೀಡಿದ ಪ್ರೋತ್ಸಾಹ ಸಲಹೆ ಸಹಕಾರಕ್ಕೆ ಧನ್ಯವಾದಗಳು.ಇನ್ನು ಮುಂದೆಯೂ ದೇವರ ಅನುಗ್ರಹ ಹಾಗೂ ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಸಲಹೆ ಸಹಕಾರವನ್ನು ಬಯಸುತ್ತಾ,ಇನ್ನೂ ಅನೇಕ ಹಿರಿಯ - ಕಿರಿಯ ಕಲಾವಿದರನ್ನು ಹಾಗೂ ತೆರೆಮರೆಯ ಯುವ ಕಲಾವಿದರನ್ನು ಪರಿಚಯಿಸಲು ಪ್ರಯತ್ನಿಸುವೆ. ಮಗದೊಮ್ಮೆ ಧನ್ಯವಾದಗಳೊಂದಿಗೆ..,

📝
ಶ್ರವಣ್ ಕಾರಂತ್ ಕೆ.
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️:- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395