ಯಕ್ಷ ಸಾಧಕರು ೧೦

ಯಕ್ಷರಂಗದ ಯುವ ಪ್ರತಿಭೆ ಶರವೂರು ಶಿಖಿನ್ ಶರ್ಮ.

ತೆಂಕುತಿಟ್ಟು ಯಕ್ಷಗಾನ ಅನೇಕ ಯುವ ಪ್ರತಿಭೆಯನ್ನು ಯಕ್ಷರಂಗಕ್ಕೆ ನೀಡಿದೆ. ಅಂತಹ ಅನೇಕ ಯುವ ಪ್ರತಿಭೆಗಳ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಶರವೂರು ಶಿಖಿನ್ ಶರ್ಮ.

ದಿನಾಂಕ 25.07.2002 ರಂದು ಶರವೂರು ಸುಬ್ರಹ್ಮಣ್ಯ ರಾವ್ ಹಾಗೂ ಶೋಭಾ ರಾವ್ ಇವರ ಮಗನಾಗಿ ಜನನ. ದ್ವಿತೀಯ ಪಿಯುಸಿ ಮುಗಿಸಿ, ಅನಿಮೇಷನ್ ಶಿಕ್ಷಣವನ್ನು ಓದುತ್ತಿದ್ದಾರೆ. ಇವರ ಅಕ್ಕನ ಹೆಸರು ಶರಣ್ಯ ರಾವ್ ಶರವೂರು. ಇವರ ಅಕ್ಕನೂ ಯಕ್ಷಗಾನ ಕಲಾವಿದೆ. 
ಕಾರ್ತಿಕ ರಾವ್ ಕೋರ್ಡೆಲ್ ಇವರ ಯಕ್ಷಗಾನದ ಗುರುಗಳು. ನನ್ನ ತಂದೆ, ತಾಯಿ, ಅಕ್ಕ ಹಾಗೂ ನನ್ನ ಗುರುಗಳು ನಾನು ಯಕ್ಷರಂಗಕ್ಕೆ ಬರಲು ಪ್ರೇರಣೆ. ಚೆಂಡೆಯಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ ನನ್ನ ಗುರುಗಳು. ಯಕ್ಷರಂಗದ ನಾನು ಮಾಡಿದ ಪ್ರಥಮ ವೇಷ ಸುದರ್ಶನ ಎಂದು ಹೇಳುತ್ತಾರೆ ಶರ್ಮರು.

ಸುದರ್ಶನ, ಮುಂಡ, ಶುಭಾಂಗ, ಮಹಿಷಾಸುರ, ಸುಬ್ರಹ್ಮಣ್ಯ, ಲಕ್ಷ್ಮಣ, ಅರ್ಜುನ, ಕುಶ, ಕೃಷ್ಣ, ಮತ್ಸ್ಯ, ವಾನರ, ದುಶ್ಯಾಸನ, ಗರುಡ ನಾನು ಮಾಡಿರುವ ವೇಷಗಳು. ಸಾಲಿಗ್ರಾಮ ಮೇಳದಲ್ಲಿ ಬಾಲ ಬೊಬ್ಬರಿಯ, ಬಾಲ ಶಿವರಾಯ ಚಂದ್ರಕೇತು ಹೀಗೆ ಕೆಲವು ಪಾತ್ರಗಳನ್ನು ಮಾಡಿದ್ದೇನೆ ಎಂದು ಶರ್ಮರು ಹೇಳುತ್ತಾರೆ.

ಡಿ. ಮನೋಹರ್ ಕುಮಾರ್ ಅವರ ಕಾರಣದಿಂದ ಸಾಲಿಗ್ರಾಮ ಮೇಳದಲ್ಲಿ ಶಬರಿಮಲೆ ಅಯ್ಯಪ್ಪ ಪ್ರಸಂಗದ ಬಾಲ ಅಯ್ಯಪ್ಪ ಪಾತ್ರ ಮಾಡಲು ಅವಕಾಶ ಸಿಕ್ಕಿತು. ಡಿ. ಮನೋಹರ್ ಕುಮಾರ್ ಇವರಿಂದಾಗಿ 3 ವರ್ಷ ಸಾಲಿಗ್ರಾಮ ಮೇಳ, 1 ವರ್ಷ ಪೆರ್ಡೂರು ಮೇಳದವರು ಇವರನ್ನು ಗುರುತಿಸುವ ಹಾಗೆ ಆಯಿತು. ಕೊಲ್ಲಂಗಾನ, ಎಡನೀರು, ಬೆಂಕಿನಾಥೇಶ್ವರ ಮೇಳದಲ್ಲಿ ವೇಷವನ್ನು ಮಾಡಿದ ಅನುಭವ ಇವರಿಗೆ ಇದೆ.
ಯಕ್ಷಗಾನವನ್ನು ಬಿಟ್ಟು ಫೋಟೋಗ್ರಾಫಿ ಹಾಗೂ ಕ್ರಿಕೆಟ್ ನನ್ನ ಹವ್ಯಾಸ. ಯಕ್ಷಗಾನ ರಂಗದಲ್ಲಿ ಮುಂದೆ ಒಬ್ಬ ಒಳ್ಳೆಯ ಕಲಾವಿದ‌ ಆಗಬೇಕು ಎಂಬ ಆಸೆ ಇದೆ ಎನ್ನುತ್ತಾರೆ ಶರ್ಮರು.

ಇವರಿಗೆ ಇವರು ನಂಬಿರುವ ಕಲಾಮಾತೆ  ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395