ಯಕ್ಷ ಸಾಧಕರು ೨೯
ಬಹುಮುಖ ಪ್ರತಿಭೆ ಕಿಶನ್ ಅಗ್ಗಿತ್ತಾಯ
ವಜ್ರದಂತೆ ಪ್ರತಿಭೆಯೊಂದು ಯಕ್ಷಲೋಕದಲ್ಲಿ ತನ್ನ ಛಾಪು ಮೂಡಿಸುತ್ತಾ ಹಲವಾರು ವೇದಿಕೆ ಏರಿ ಕಲಾ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಅಪ್ರತಿಮ ಪ್ರತಿಭಾನ್ವಿತ ಕಲಾವಿದ ಕಿಶನ್ ಅಗ್ಗಿತ್ತಾಯ.
ಕಾಸರಗೋಡು ಜಿಲ್ಲೆಯ ನೆಕ್ರಾಜೆ ಗ್ರಾಮ ನೆಲ್ಲಿಕಟ್ಟೆಯ ಶ್ರೀಮತಿ ರೇಷ್ಮಾ ಸತ್ಯನಾರಾಯಣ ಅಗ್ಗಿತ್ತಾಯ ಹಾಗೂ ಸತ್ಯನಾರಾಯಣ ಅಗ್ಗಿತ್ತಾಯ ಇವರ ಮಗನಾಗಿ 20.06.2007 ರಂದು ಇವರ ಜನನ. ಕಾಸರಗೋಡು ಕೇಂದ್ರೀಯ ವಿದ್ಯಾಲಯದಲ್ಲಿ 8ನೇ ತರಗತಿ ಕಲಿಯುತ್ತಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಇವರ ತಂದೆ ತಾಯಿ ಪ್ರೇರಣೆ. ಸೂರ್ಯನಾರಾಯಣ ಪದಕಣ್ಣಾಯ ಹಾಗೂ ರಾಕೇಶ್ ರೈ ಅಡ್ಕ ಇವರ ಯಕ್ಷಗಾನದ ಗುರುಗಳು.
ದೇವಿ ಮಹಾತ್ಮೆ, ಅಭಿಮನ್ಯು ಕಾಳಗ, ಸುದರ್ಶನ ವಿಜಯ, ಲವ ಕುಶ ಕಾಳಗ ಇವರ ನೆಚ್ಚಿನ ಪ್ರಸಂಗಗಳು. ಅಭಿಮನ್ಯು, ಸುದರ್ಶನ, ಚಂಡ, ಮುಂಡ, ಕೃಷ್ಣ, ಮೀನಾಕ್ಷಿ, ಹನುಮಂತ, ಭಾರ್ಗವ ಇವರ ನೆಚ್ಚಿನ ವೇಷಗಳು.
ಮಲ್ಲ ಮೇಳ, ಕೂಡ್ಲು ಮೇಳ, ಬಪ್ಪನಾಡು ಮೇಳ, ಎಡನೀರು ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಇದೆ ಹಾಗೂ ಕಟೀಲು, ಮಂಗಳಾದೇವಿ, ಧರ್ಮಸ್ಥಳ, ಬೆಂಕಿನಾಥೇಶ್ವರ, ಕೊಲ್ಲಂಗಾನ, ಹನುಮಗಿರಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಸೇವೆ ಮಾಡಿದ ಅನುಭವ ಇವರಿಗೆ ಇದೆ.
ಆಟೋಟ, ಚಿತ್ರಕಲೆ, ಚೆಂಡೆ ಮದ್ದಳೆ ನುಡಿಸುವುದು, ಸಂಗೀತ ಕೇಳುವುದು ಹಾಗೂ ಹಾಡುವುದು ಇವರ ಹವ್ಯಾಸಗಳು. ಶಾಸ್ತ್ರೀಯ ಸಂಗೀತವನ್ನು ಗುರುಗಳಾದ ವಿದುಷಿ ವಾಣಿ ಕಬೆಕೋಡ್ ಇವರ ಬಳಿ ಕಲಿತು ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಚೆಂಡೆ ಮದ್ದಳೆಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಬಳಿ ಕಲಿಯುತ್ತಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಮೊದಲು ಗುರುಗಳ ಹತ್ತಿರ ಆ ದಿನದ ಪ್ರಸಂಗದ ನಡೆ ಹಾಗೂ ಪ್ರಸಂಗದಲ್ಲಿ ಬರುವ ಪಾತ್ರದ ಬಗ್ಗೆ ಕೇಳುತ್ತೇನೆ. ಮೇಳಗಳಲ್ಲಿ ವೇಷ ಮಾಡುವಾಗ ಮೇಳದ ಹಿರಿಯ ಕಲಾವಿದರಿಂದ ಪ್ರಸಂಗದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೆನೆ.
ಆಮಂತ್ರಣ ಹಬ್ಬ ಅಳದಂಗಡಿ, ಮಡಿಲು ಟಿವಿ ವತಿಯಿಂದ ಸನ್ಮಾನ, ಮಯೂರ ವಾಹನ ನಾಟಕ ಸಂಘ ಸೂಡ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಕಾಸರಗೋಡು, 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯೋತ್ಸವ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪ್ರಶಸ್ತಿ ಇವರಿಗೆ ಸಿಕ್ಕಿರುತ್ತದೆ.
ಯಕ್ಷಗಾನದಲ್ಲಿ ಮುಂದಿನ ಯೋಜನೆಯನ್ನು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಇನ್ನು ಕೂಡ ಹಲವು ಮೇಳಗಳಲ್ಲಿ ಭಾಗವಹಿಸಿ ಯಕ್ಷಗಾನದ ಮಾಹಿತಿಗಳನ್ನು ಸಂಗ್ರಹಿಸಿ ಯಕ್ಷಗಾನ ರಂಗದಲ್ಲಿ ಉತ್ತಮ ವೇಷಧಾರಿಯಾಗಿ ಹಾಗೂ ಉತ್ತಮ ಮಾತುಗರಿಕೆಯನ್ನು ಕಲಿತು ಚೆಂಡೆ ಹಾಗೂ ಮದ್ದಳೆ ಕಲಿತು ಯಕ್ಷಗಾನ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಯೋಜನೆ ಇದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
Comments
Post a Comment