ಯಕ್ಷ ಸಾಧಕರು ೪೯
ತೆಂಕುತಿಟ್ಟು ಯಕ್ಷಗಾನ ರಂಗದ ಭಾಗವತರು ಶ್ರೀಯುತ ಡಾ.ಸತೀಶ್ ಪುಣಿoಚತ್ತಾಯ ಪೆರ್ಲ
ಕೇರಳ ರಾಜ್ಯ, ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಶ್ರೀಯುತ ಡಾ.ಸತೀಶ್ ಪುಣಿoಚತ್ತಾಯ ಪೆರ್ಲ.
ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಪೆರ್ಲದ ಶ್ರೀಯುತ ಗೀತಾ ಪುಣಿoಚತ್ತಾಯ ಹಾಗೂ ಗಣಪತಿ ಪುಣಿoಚತ್ತಾಯ ಇವರ ಮಗನಾಗಿ ೦೧.೦೫.೧೯೭೦ ರಂದು ಇವರ ಜನನ. ಎಂ.ಎ, B.ED ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಯೊಂದಿಗೆ ವಿದ್ಯಾಭ್ಯಾಸ. ತಂದೆ ಯಕ್ಷಗಾನ ಅರ್ಥಧಾರಿ, ಅಜ್ಜ- ವೇಷಧಾರಿ, ಹಿಮ್ಮೇಳ ಕಲಾವಿದ. ಒಟ್ಟಾಗಿ ಪರಿಸರ ಮತ್ತು ನಮ್ಮನ್ನು ಬೆಳೆಸಿದ ರೀತಿ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಡಾ.ಪುಣಿoಚತ್ತಾಯ.
ಹಿರಿಯ ಬಲಿಪರ ಶಿಷ್ಯ ಕೋಟೆ ನಾರಾಯಣ ಭಟ್ ಇವರ ಯಕ್ಷಗಾನದ ಗುರುಗಳು. ವೃತ್ತಿಯ ಜೊತೆಯಲ್ಲಿ ಕೊಲ್ಲಂಗಾನ, ಬಪ್ಪನಾಡು, ದೇoತಡ್ಕ ಮೇಳ, ಪ್ರಸ್ತುತ ಮಾಣಿಲ ಮೇಳ ಮತ್ತು ಇತರ ಹವ್ಯಾಸಿ ಸಂಘಗಳಲ್ಲಿ 30 ವರ್ಷಗಳ ಯಕ್ಷಗಾನ ಸೇವೆ ಮಾಡುತ್ತಿದ್ದಾರೆ ಡಾ.ಪುಣಿoಚತ್ತಾಯರು. ಭೀಷ್ಮ ವಿಜಯ, ಸುಂದೋಪಸುಂದ, ದೇವಿ ಮಹಾತ್ಮೆ ಇತ್ಯಾದಿ ಹಾಗೂ ಪೌರಾಣಿಕಕ್ಕೆ ಸಂಬಂಧ ಪಟ್ಟ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಸಾವೇರಿ, ಮೋಹನ, ಕಾನಡ, ಕರ್ಣ ರಂಜಿನಿ ಇವರ ನೆಚ್ಚಿನ ರಾಗಗಳು. ಎಲ್ಲ ಹಿರಿಯ ಭಾಗವತರು ಇವರ ನೆಚ್ಚಿನ ಭಾಗವತರು.
ಯಕ್ಷಗಾನ ತರಗತಿ, ಯುವಕರನ್ನು ಯಕ್ಷಗಾನ ರಂಗಕ್ಕೆ ತಯಾರುಗೊಳಿಸುವುದು ಇವರ ಹವ್ಯಾಸಗಳು. 50ಕ್ಕೂ ಮಿಕ್ಕಿ ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಾಲಕ್ಕೆ ಸರಿಯಾಗಿ ಬದಲಾಗುತ್ತಿದೆ. ಆದರೆ ಪ್ರಜ್ಞಾವಂತ ಪ್ರೇಕ್ಷಕರು ನಮ್ಮೆದುರು ಕುಳಿತಿದ್ದಾರೆ ಎಂಬ ಪ್ರಜ್ಞೆ ಅಗತ್ಯ. ಅದನ್ನು ತಿಳಿದು ವೇದಿಕೆಯಲ್ಲಿ ವ್ಯವಹರಿಸುವುದು ಒಳಿತು ಎಂದು ಹೇಳುತ್ತಾರೆ ಡಾ.ಪುಣಿoಚತ್ತಾಯ.
ಯಕ್ಷಗಾನದ ಮುಂದಿನ ಯೋಜನೆಯ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕರ್ಮಯೋಗಿ ಪರಮಹoಸ ಮಾಣಿಲ ಶ್ರೀಶ್ರೀ ಮೋಹನದಾಸ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಮಾಣಿಲ ಮೇಳ ಈ ವರ್ಷ ಗೆಳೆಯರ ಸಹಕಾರದೊಂದಿಗೆ ಆರಂಭಿಸಿದ್ದೇನೆ. ಮುಂದೆ ಈ ಮೇಳವನ್ನು ಬೆಳೆಸಬೇಕು ಎಂದು ಹೇಳುತ್ತಾರೆ ಡಾ.ಪುಣಿoಚತ್ತಾಯ.
29.08.1998 ರಂದು ಮಧುರಾ ಸತೀಶ್ ಅವರನ್ನು ವಿವಾಹವಾದ ಡಾ.ಪುಣಿoಚತ್ತಾಯ ಮಗ ಸಮೃದ್ಧ ಪುಣಿoಚತ್ತಾಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಮಗ ಸಮೃದ್ಧ ಪುಣಿoಚತ್ತಾಯ ೬ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಗ ಸಮೃದ್ಧ ಯಕ್ಷಗನಾಸಕ್ತ, ಭಾಗವತಿಕೆ ಹಾಗೂ ಹಿಮ್ಮೇಳವನ್ನು ಕಲಿಯುತ್ತಿದ್ದಾನೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment