ಯಕ್ಷ ಸಾಧಕರು ೭೨

ಬಡಗುತಿಟ್ಟಿನ ಪ್ರಖ್ಯಾತ ಚೆಂಡೆ ವಾದಕರು ಶ್ರೀಯುತ ರಾಧಾಕೃಷ್ಣ ಕುಂಜಿತ್ತಾಯ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಶ್ರೀಯುತ ರಾಧಾಕೃಷ್ಣ ಕುಂಜಿತ್ತಾಯ.

ಶ್ರೀಮತಿ ಭಾಗೀರಥಿ ಹಾಗೂ ನಾರಾಯಣ ಕುಂಜಿತ್ತಾಯ ಇವರ ಮಗನಾಗಿ ೨೯.೧೨.೧೯೭೧ ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಹಳ್ಳಿಹೊಳೆಯ ಹನಿಕೆ ಎಂಬಲ್ಲಿ ಇವರ ಜನನ. SSLC ಇವರ ವಿಧ್ಯಾಭ್ಯಾಸ. ಇವರು ಬೆಳೆದ ವಾತಾವರಣ ಹಾಗೂ ಇವರದು ಯಕ್ಷಗಾನ ಕುಟುಂಬವಾದದಿಂದ ಇವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು ಎಂದು ಕುಂಜಿತ್ತಾಯರು ಹೇಳುತ್ತಾರೆ.

ವಿಶ್ವೇಶ್ವರ ಸೋಮಯಾಜಿ (ಭಾಗವತರು) ಇವರ ಯಕ್ಷಗಾನದ ಗುರುಗಳು. ನಾಗರಕೊಡಿಗೆ, ಕಮಲಶಿಲೆ, ಮಂದಾರ್ತಿ, ಪೆರ್ಡೂರು ಹಾಗೂ ಬಯಲಾಟದ ಹೆಚ್ಚಿನ ಮೇಳಗಳಲ್ಲಿ ೩೦ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.

ರಾಮಕೃಷ್ಣ ಮಂದಾರ್ತಿ ಇವರ ನೆಚ್ಚಿನ ಚೆಂಡೆ ವಾದಕರು. ಶ್ರೀನಿವಾಸ ಆಚಾರ್ ಹುಂಚದಕಟ್ಟೆ, ದುರ್ಗಪ್ಪ ಗುಡಿಗಾರ್, ಎ.ಪಿ.ಪಾಠಕ್ ಇವರ ನೆಚ್ಚಿನ ಮದ್ದಳೆ ವಾದಕರು. ಸುಬ್ರಹ್ಮಣ್ಯ ಧಾರೇಶ್ವರ, ಹೆರಂಜಾಲು ಗೋಪಾಲ್ ಗಾಣಿಗ, ಸುರೇಶ್ ಶೆಟ್ಟಿ, ಪ್ರಸಾದ್ ಮೊಗೆಬೆಟ್ಟು ಹಾಗೂ ಇನ್ನು ಹಲವಾರು ಮಂದಿ ಇವರ ನೆಚ್ಚಿನ ಭಾಗವತರು. ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಹಿಂದಿನ ಕಾಲಕ್ಕೆ ಹೋಲಿಸಿದರೆ ಜನಾಕರ್ಷಣೆಯಲ್ಲಿ ಯಶಸ್ವಿಯಾಗಿದೆ. ಎಲ್ಲೋ ಒಂದು ಕಡೆ ಕುಣಿತವೇ ಪ್ರಧಾನವಾಗದೆ, ಯಕ್ಷಗಾನದ ಚೌಕಟ್ಟನ್ನು ಮೀರದೆ ಇರಲಿ ಎಂದು ಬಯಸುತ್ತೇನೆ ಎಂದು ಕುಂಜಿತ್ತಾಯರು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಇಂದು ಯಕ್ಷಗಾನ ಯಶಸ್ವಿಯಾಗುವಲ್ಲಿ ಪ್ರೇಕ್ಷಕರೆ ಬಹು ಮುಖ್ಯ ಪಾತ್ರ. ಕಲಾವಿದನ ಕಷ್ಟಗಳಲ್ಲಿಯೂ ಪ್ರೇಕ್ಷಕರು ಸಹಾಯಕ್ಕೆ ನಿಲ್ಲುತ್ತಾರೆ. ಪ್ರತಿಯೊಬ್ಬ ಕಲಾವಿದನ ಸರಿ ತಪ್ಪುಗಳನ್ನು ಕೂಡ ಗುರುತಿಸುತ್ತಾರೆ.

ಯಕ್ಷಗಾನದ ಮುಂದಿನ ಯೋಜನೆಗಳನ್ನು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
"ಯಕ್ಷಕಲಾವಲ್ಲರಿ ಮಹಿಳಾ ಯಕ್ಷಗಾನ ಸಂಘ" ಕಟ್ಟಿರುವ ಇವರು ಯಕ್ಷಗಾನ ಸಂಘವನ್ನು ಅಭಿವೃದ್ಧಿಗೊಳಿಸುವ ಯೋಜನೆ ಹಾಗೂ ಹವ್ಯಾಸಿ ಕಲಾವಿದನಾಗಿ ಕಲಾ ಜೀವನವನ್ನು ಮುಂದುವರಿಸುವ ಯೋಜನೆ ಇದೆ ಎಂದು ಕುಂಜಿತ್ತಾಯರು ಹೇಳುತ್ತಾರೆ.

ಕೃಷಿ ಇವರ ಹವ್ಯಾಸಗಳು. ಯಕ್ಷ ಸಿಂಚನ (ರಿ) ಬೆಂಗಳೂರು ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

೨೮.೦೪.೨೦೦೦ರಂದು ಶ್ರೀಲಕ್ಷ್ಮಿ ಅವರನ್ನು ವಿವಾಹವಾದ ರಾಧಾಕೃಷ್ಣ ಕುಂಜಿತ್ತಾಯ ಮಗಳು ವೈಷ್ಣವಿ ಕುಂಜಿತ್ತಾಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.ಇವರ ಹೆಂಡತಿ ಹಾಗೂ ಮಗಳು ಇಬ್ಬರು ಯಕ್ಷಗಾನ ಕಲಾವಿದರು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395