ಯಕ್ಷ ಸಾಧಕರು ೭೮
ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸ್ತ್ರೀ ವೇಷಧಾರಿ ಶ್ರೀಯುತ ಮುರಳೀಧರ ಕನ್ನಡಿಕಟ್ಟೆ.
ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಪ್ರಸಿದ್ಧ ಸ್ತ್ರೀ ವೇಷಧಾರಿಗಳು ನಮಗೆ ಕಾಣಲು ಸಿಗುತ್ತಾರೆ. ಇಂತಹ ಅನೇಕ ಪ್ರಸಿದ್ಧ ವೇಷಧಾರಿಗಳ ಸಾಲಿನಲ್ಲಿ ಮಿಂಚುತ್ತಿರುವ ಸ್ತ್ರೀ ವೇಷಧಾರಿ ಶ್ರೀಯುತ ಮುರಳೀಧರ ಕನ್ನಡಿಕಟ್ಟೆ.
ದಿನಾಂಕ ೨೨.೦೧.೧೯೮೧ ರಂದು ಲಲಿತ ಹಾಗೂ ಪುರುಷೋತ್ತಮ ಇವರ ಮಗನಾಗಿ ಜನನ. ೮ ನೇ ತರಗತಿವರೆಗೆ ವಿದ್ಯಾಭ್ಯಾಸ. ಇವರ ಮಾವ ಯಕ್ಷಗಾನ ವೇಷಧಾರಿ ಆದ ಕಾರಣ ಇವರೇ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ. ಧರ್ಮೇಂದ್ರ ಆಚಾರ್ಯ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪುಸ್ತಕ ಓದಿ, ಪಾತ್ರದ ಬಗ್ಗೆ ತಿಳಿದುಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಕನ್ನಡಿಕಟ್ಟೆ ಅವರು ಹೇಳುತ್ತಾರೆ.
ದಮಯಂತಿ ಪುನರ್ ಸ್ವಯಂವರ, ಚೂಡಾಮಣಿ, ದೇವಿ ಮಹಾತ್ಮೆ, ಸೀತಾ ಪರಿತ್ಯಾಗ, ಅಭಿಮನ್ಯು ಕಾಳಗ, ದಕ್ಷ ಯಜ್ಞ ಇವರ ನೆಚ್ಚಿನ ಪ್ರಸಂಗಗಳು. ಸೀತೆ, ದಾಕ್ಷಾಯಿಣಿ, ಶ್ರೀ ದೇವಿ ಇವರ ನೆಚ್ಚಿನ ವೇಷಗಳು. ಕಟೀಲು, ಹೊಸನಗರ, ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು ೨೨ ವರ್ಷಗಳ ಕಾಲ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಬದಲಾವಣೆ ಜಗದ ನಿಯಮ. ಹಾಗಾಗಿ ಯಕ್ಷಗಾನದಲ್ಲಿಯೂ ಬದಲಾವಣೆ ಆಗುತ್ತಿದೆ ಹಾಗೂ ಇವಾಗ ಯಕ್ಷಗಾನ ರಂಗ ತುಂಬಾ ಉತ್ತಮವಾಗಿ ಬೆಳೆಯುತ್ತಿದೆ ಎಂದು ಕನ್ನಡಿಕಟ್ಟೆ ಅವರು ಹೇಳುತ್ತಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದಲ್ಲಿ ಅನೇಕ ಅನುಭವಿ ಪ್ರೇಕ್ಷಕರು ಇರುವುದು ತುಂಬಾನೇ ಸಂತೋಷದ ವಿಷಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಉತ್ತಮ ಕಲಾವಿದನಾಗಬೇಕು ಎಂಬ ಬಯಕೆ ಇದೆ ಎಂದು ಕನ್ನಡಿಕಟ್ಟೆ ಅವರು ಹೇಳುತ್ತಾರೆ.
ಇವರ ಪ್ರತಿಭೆಯನ್ನು ನೋಡಿ ಕೆಲವು ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಯಕ್ಷಗಾನ ನೋಡುವುದು ಹಾಗೂ ಪುಸ್ತಕ ಓದುವುದು ಇವರ ಹವ್ಯಾಸಗಳು.
೦೧.೦೫.೨೦೦೯ ರಂದು ಮಾಲತಿ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ಹರಿಪ್ರಿಯ, ಜಾಹ್ನವಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಂದಿರು ಹಾಗೂ ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ಪ್ರತಿಯೊಬ್ಬರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photo Click:- MBT, ಎಸ್.ಎಸ್.ಭಟ್. ಬಾಯಾರು,Rai's Photography.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment