ಯಕ್ಷ ಸಾಧಕರು ೫೨

ಯಕ್ಷರಂಗದಲ್ಲಿ ಮಿನುಗುತ್ತಿರುವ ಕನ್ನಡ ಅಧ್ಯಾಪಕಿ ಸುಷ್ಮಾ ಉದ್ಯಾವರ.

ಇವರಿಗೆ ಪ್ರಚಾರದ ಹಂಗಿಲ್ಲ, ಪ್ರಶಸ್ತಿ ಸನ್ಮಾನಗಳ ಹಂಗಿಲ್ಲ. ಹೀಗೆ ಯಕ್ಷಗಾನ  ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಸಿಕೊಂಡಿರುವ ಪ್ರತಿಭೆ ಸುಷ್ಮಾ ಉದ್ಯಾವರ.

ಉಡುಪಿ ಜಿಲ್ಲೆ ಉದ್ಯಾವರದ ಶ್ರೀಮತಿ ಲಕ್ಷ್ಮೀ ಉದ್ಯಾವರ ಹಾಗೂ ಸದಾನಂದ ಇವರ ಮಗಳಾಗಿ ದಿನಾಂಕ ೨೨.೦೧.೧೯೯೨ ರಂದು ಇವರ ಜನನ. MA, B.ED ಇನ್ ಕನ್ನಡ ಇವರ ವಿದ್ಯಾಭ್ಯಾಸ. ವೃತ್ತಿಯಲ್ಲಿ ಕನ್ನಡ ಅಧ್ಯಾಪಕಿ ಆಗಿರುವ ಇವರು ಉಡುಪಿಯ ಪ್ರಸಿದ್ಧ ಶಿಕ್ಷಣ ಸಂಸ್ಥೆ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ. 'ನನ್ನ ಕುಟುಂಬ ವರ್ಗ ಮತ್ತು ನನ್ನ ಸಹೋದರಿ ಸುಪ್ರಿಯ ನಿತಿನ್ ಕುಮಾರ್ ರವರ ಉತ್ತೇಜನದಿಂದ ಯಕ್ಷಗಾನ ಕಲಿಯಲು ಪ್ರೇರಣೆ' ಎಂದು ಸುಷ್ಮಾ ಹೇಳುತ್ತಾರೆ.

ರಾಜೀವ ತೋನ್ಸೆ, ಗೋರ್ಪಾಡಿ ವಿಠಲ ಪಾಟೀಲ್, ರತ್ನಾಕರ ಆಚಾರ್ಯ, ಪ್ರಸಾದ ಮೊಗಬೆಟ್ಟು ಇವರ ಯಕ್ಷಗಾನದ ಗುರುಗಳು.
ಶ್ರೀಕೃಷ್ಣ ವಿವಾಹ, ಶ್ವೇತಕುಮಾರ ಚರಿತ್ರೆ, ಗದಾಯುದ್ಧ ಇವರ ನೆಚ್ಚಿನ ಪ್ರಸಂಗಗಳು. ದುಷ್ಟಬುದ್ಧಿ, ಕೃಷ್ಣ, ಸುಧನ್ವ, ಕರ್ಣ, ಮದನಾಕ್ಷಿ, ಶ್ವೇತಕುಮಾರ, ದುರ್ಯೋಧನ, ದೇವಿ ಇವರ ನೆಚ್ಚಿನ ವೇಷಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ನಾನು ನನ್ನ ಗುರುಗಳ ಬಳಿ ಪದೇಪದೇ ಹೋಗಿ ಅಭ್ಯಸಿಸುತ್ತೇನೆ. ಪದಗಳ ಅರ್ಥ ಅವರಿಂದಲೇ ಕೇಳಿ ತಿಳಿದುಕೊಳ್ಳುತ್ತೇನೆ.

ಇವರು ಯಕ್ಷಗಾನದ ಜೊತೆಗೆ ನಾಟಕರಂಗ ಕಲಾವಿದೆ ಆಗಿರುತ್ತಾರೆ. ನಾಟಕ ರಂಗದ ಗುರು ಉದ್ಯಾವರ ನಾಗೇಶ್ ಕುಮಾರ್, ಸುದೇಶ್ ಕುಮಾರ್ ಕೆಮ್ಮಣ್ಣು ಅವರ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಇವರು ಯಕ್ಷಗಾನ ಕಲಿಯುತ್ತಿರುವ ಸಂಘ ಬ್ರಹ್ಮಲಿಂಗೇಶ್ವರ ಯಕ್ಷಗಾನ ಕಲಾಮಂಡಳಿ ಉದ್ಯಾವರ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಇವತ್ತಿನ ಪ್ರೇಕ್ಷಕರು ಕೇವಲ ಕುಣಿತಕ್ಕೆ ಮಾತ್ರ ಹೆಚ್ಚಿನ ಆಧ್ಯತೆ ನೀಡುವುದು ನಾನು ಗಮನಿಸಿದ ವಿಚಾರ. ಆಧುನೀಕತೆಗೆ ನಾವು ಒಗ್ಗಿಕೊಳ್ಳಲೇ ಬೇಕು. ಕಲಾವಿದರಿಗೆ ಪ್ರೇಕ್ಷಕರೇ ಜೀವಾಳ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಕೇಳಿದಾಗ ಹೀಗೆ ಹೇಳುತ್ತಾರೆ:-
ನನ್ನ ಮುಂದಿನ ಮಹತ್ವಾಕಾಂಕ್ಷೆ ಯಕ್ಷಗಾನದಲ್ಲಿ PHD ಮಾಡಬೇಕು, ಈಗಾಲೇ ಪ್ರಯತ್ನ ಸಾಗುತ್ತಿದೆ ಎಂದು ಸುಷ್ಮಾ ಹೇಳುತ್ತಾರೆ.
ಅರ್ಥಗಳಿಗೂ ಪ್ರಾಧಾನ್ಯತೆ ಕೊಡಬೇಕು. ರಂಗದಲ್ಲಿ ಕಲಾವಿದರು ಆಡುವ ಕೆಲವು ಪ್ರಾಸ ಬದ್ಧವಾದ ಮಾತುಗಳನ್ನು ನಾವು ಚೆನ್ನಾಗಿ ಆಲಿಸಿದರೆ ನಾವು ಕೂಡ ಚೆನ್ನಾಗಿ ಮಾತಾಡಲು ಸಾಧ್ಯ ಎಂದು ಸುಷ್ಮಾ ಹೇಳುತ್ತಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395