ಯಕ್ಷ ಸಾಧಕರು ೪೫

ಯಕ್ಷ ಸಂಸಾರ :-
ಶಾಲಿನಿ ಹೆಬ್ಬಾರ್, ಜಯಪ್ರಕಾಶ್ ಹೆಬ್ಬಾರ್, ವರುಣ್ ಹೆಬ್ಬಾರ್.

ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯಕ್ಷ ಸಂಸಾರ ಕಾಣಲು ಸಿಗುತ್ತೆ. ಇಂತಹ ಒಂದು ಯಕ್ಷ ಸಂಸಾರವನ್ನು ನಾವು ಇವತ್ತು ಪರಿಚಯ ಮಾಡಲು ಹೊರಟಿದ್ದೇವೆ. ಇವತ್ತಿನ ಈ "ಯಕ್ಷ ಸಂಸಾರ" ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಯಕ್ಷಗಾನ ಕಲಾವಿದರು 
ಶ್ರೀಯುತ ಜಯಪ್ರಕಾಶ್ ಹೆಬ್ಬಾರ್, 
ಶ್ರೀಮತಿ ಶಾಲಿನಿ ಹೆಬ್ಬಾರ್ ಹಾಗೂ ಇವರ ಮಗ
ವರುಣ್ ಹೆಬ್ಬಾರ್.

ಶ್ರೀಯುತ ಜಯಪ್ರಕಾಶ್ ಹೆಬ್ಬಾರ್:-
ಶ್ರೀಯುತ ಜಯಪ್ರಕಾಶ್ ಹೆಬ್ಬಾರ್ ದಿನಾಂಕ ೧೫.೧೧.೧೯೭೫ ರಂದು ಲಕ್ಷ್ಮೀ ಹೆಬ್ಬಾರ್ ಹಾಗೂ ದಿ.ರಾಮಚಂದ್ರ ಹೆಬ್ಬಾರ್ ಇವರ ಮಗನಾಗಿ ಜನನ. ಡಿಪ್ಲೋಮ ಇನ್ ಎಲೆಕ್ಟ್ರಿಕಲ್ ಇವರ ವಿಧ್ಯಾಭ್ಯಾಸ. ವಿಷ್ಣು ಭಟ್ ಶೆಂಡೆ ಪಕಳಕುಂಜ, ಕೃಷ್ಣ ನಾಯಕ್ ಇವರ ಯಕ್ಷಗಾನದ ಗುರುಗಳು. ಬಾಲ್ಯದಿಂದಲೂ ಯಕ್ಷಗಾನ ಪ್ರೇಕ್ಷಕನಾಗಿ ಯಕ್ಷಗಾನ ನೋಡಲು ಹೋಗುತ್ತಿದ್ದರು. ಇದುವೇ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಆಯಿತು.

ದೇವಿ ಮಹಾತ್ಮೆ, ಮೈರಾವಣ ಕಾಳಗ ಇವರ ನೆಚ್ಚಿನ ಪ್ರಸಂಗಗಳು. ನಿಶುಂಭ, ರಾವಣ, ಶತ್ರುಪ್ರಸೂಧನ ಇವರ ನೆಚ್ಚಿನ ವೇಷಗಳು. ಹವ್ಯಾಸಿಯಾಗಿ ಊರಿನ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಭಂಡಿಹೊಳೆ ಸಂಘದಲ್ಲಿ 20 ವರ್ಷಗಳಿಂದ ವೇಷ ಮಾಡಿದ ಅನುಭವ ಇವರಿಗೆ ಇದೆ. ಪುಸ್ತಕ ಓದುವುದು, ಸಮಾಜ ಸೇವೆ ಇವರ ಹವ್ಯಾಸಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ ಇವರು:-
ಪ್ರಸಂಗ ಪುಸ್ತಕದ ಅಧ್ಯಯನ, ಅನುಭವಿ ಕಲಾವಿದರಿಂದ ಅಗತ್ಯ ಮಾಹಿತಿ ಪಡೆದುಕೊಂಡು ತಯಾರಿ ಮಾಡಿಕೊಳ್ಳುತ್ತಾರೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ :-
ಯಕ್ಷಗಾನ ಬೆಳೆದಿದೆ ನಿಜ. ಆದರೆ ಮೂಲ ವಿಷಯಗಳು  ಮೂಲೆಗುಂಪಾಗುತ್ತಿವೆ. ಇದು ತುಂಬಾನೇ ಬೇಜಾರಿನ ವಿಷಯ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:- 
ಸದಭಿರುಚಿ ಪ್ರೇಕ್ಷಕರ ಕೊರತೆ. ಆಡಂಬರ, ವ್ಯಕ್ತಿ ಪೂಜೆ ಹೆಚ್ಚುತ್ತಿದೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಹೀಗೆ ಹೇಳುತ್ತಾರೆ:-
 ಒಂದು ಕಾಲದಲ್ಲಿ ವಿಜೃಂಭಿಸಿದ ಊರಿನ ಸಂಘವನ್ನು ಬೆಳೆಸುವ ಯೋಜನೆ ಇದೆ ಎಂದು ಹೇಳುತ್ತಾರೆ.

ಶ್ರೀಮತಿ ಶಾಲಿನಿ ಹೆಬ್ಬಾರ್:-
ಶ್ರೀಮತಿ ಶಾಲಿನಿ ಹೆಬ್ಬಾರ್ ಅವರು ೧೨.೧೧.೧೯೮೨ ರಂದು ಶ್ರೀಮತಿ ಗಾಯತ್ರಿ ಮೆಹೆಂದಳೆ ಹಾಗೂ ರವೀಂದ್ರ ಮೆಹೆಂದಳೆ ಇವರ ಮಗಳಾಗಿ ಜನನ. MCOM, BED ಇವರ ವಿಧ್ಯಾಭ್ಯಾಸ. ಪತಿ ಶ್ರೀಯುತ ಜಯಪ್ರಕಾಶ್ ಹೆಬ್ಬಾರ್ ಇವರ ಒತ್ತಾಸೆ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಆಯಿತು. ಪದ್ಮನಾಭ ಉಪಾಧ್ಯ ಇವರ ಯಕ್ಷಗಾನದ ಮೊದಲು ಗುರುಗಳು. ನಂತರ ಪೂರ್ವ ರಂಗ ಮುಂದುವರಿಕೆಯನ್ನು ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಅವರಿಂದ ಕಲಿತು ಹಾಗೂ ಕೆಲವು ತರಗತಿಗಳು ಪುತ್ತಿಗೆ ರಘುರಾಮ ಹೊಳ್ಳರಿಂದ ಕಲಿತು, ಹಾಗೂ ಮುರಾರಿ ಕಡಂಬಳಿತ್ತಾಯರಿಂದ ನಿರಂತರ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಹವ್ಯಾಸಿಯಾಗಿ ಅನೇಕ ಯಕ್ಷಗಾನ ರಂಗದಲ್ಲಿ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ. ಯಕ್ಷಗಾನ ರಂಗದಲ್ಲಿ ಒಟ್ಟು ೫ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.

ಕರ್ಣಾರ್ಜುನ, ದೇವಿ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು. ಚಾರುಕೇಶಿ, ತೋಡಿ ಇವರ ನೆಚ್ಚಿನ ರಾಗಗಳು. ಮುರಾರಿ ಕಡಂಬಳಿತ್ತಾಯ, ಪದ್ಯಾಣ ಶಂಕರ ನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ, ಗಣೇಶ್ ಭಟ್ ನೆಕ್ಕರೆಮೂಲೆ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಪುತ್ತಿಗೆ ರಘುರಾಮ ಹೊಳ್ಳ ನೆಚ್ಚಿನ ಭಾಗವತರು. ಹಾಡುವುದು, ಪುಸ್ತಕ ಓದುವುದು ಇವರ ಹವ್ಯಾಸಗಳು.

ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಆಸಕ್ತಿ ಇದೆ. ಆದರೆ ಸಾಧ್ಯವಾಗುತ್ತಿಲ್ಲ. ಕಲಿಯುವ ವೇಳೆ ಮುಗಿದು ಹೋಯಿತು. ಕಲಿತರೂ ಪರಿಪೂರ್ಣತೆ ಹೊಂದಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 
ಪರಂಪರೆಯನ್ನು ಕಲಿಯುವ ಮನಸ್ಸು ಕಡಿಮೆಯಾಗಿದೆ. ವೇದಿಕೆ ಸಿಗಬೇಕು ಅನ್ನುವ ಉದ್ದೇಶ ಮಾತ್ರ. ಆಳವಾದ ಅಧ್ಯಯನದ ಕೊರತೆ ಈವಾಗ ಕಾಣ ಸಿಗುತ್ತದೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 
ಪ್ರೇಕ್ಷಕರಲ್ಲಿ ಹೆಚ್ಚಿನವರಿಗೆ ನಿಜವಾದ ಯಕ್ಷಗಾನ ಅಂದರೆ ಏನು ಅನ್ನುವ ಜ್ಞಾನದ ಕೊರತೆ  ಇದೆ. ಪ್ರೇಕ್ಷಕ ಕಲಾವಿದನ ಮೌಲ್ಯಮಾಪನ ಮಾಡುವ ಪ್ರಬುದ್ಧತೆ ಹೊಂದಿರಬೇಕು ಎಂದು ಹೇಳುತ್ತಾರೆ ಇವರು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 
ಪಾರಂಪರಿಕ ಶೈಲಿಯ ಅಭ್ಯಾಸ ಮಾಡಿ ಮುಂದೆ ಯಕ್ಷಗಾನ ರಂಗದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂಬ ಆಸೆ ಇದೆ.

ವರುಣ್ ಹೆಬ್ಬಾರ್:- 
ಶ್ರೀಮತಿ ಶಾಲಿನಿ ಹೆಬ್ಬಾರ್ ಹಾಗೂ ಜಯಪ್ರಕಾಶ್ ಹೆಬ್ಬಾರ್ ಇವರ ಮಗನಾಗಿ ೨0.೦೫.೨೦೦೬ ರಂದು ಇವರ ಜನನ. ೯ನೇ ತರಗತಿಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಯಕ್ಷಗಾನ ಕಲಿಯಲು ಇವರ ತಂದೆ ಇವರಿಗೆ ಪ್ರೇರಣೆ. ಮುರಾರಿ ಕಡಂಬಳಿತ್ತಾಯ ಇವರ ಗುರುಗಳು. ಯಕ್ಷಗಾನ ರಂಗದಲ್ಲಿ ಒಟ್ಟು 5 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾರೆ.

ಮುರಾರಿ ಕಡಂಬಳಿತ್ತಾಯ, ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯ ಕೃಷ್ಣ ಪದ್ಯಾಣ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಕೃಷ್ಣಾರ್ಜುನ, ಗದಾಯುದ್ಧ ಇವರ ನೆಚ್ಚಿನ ಪ್ರಸಂಗಗಳು. ರವಿಚಂದ್ರ ಕನ್ನಡಿಕಟ್ಟೆ, ಪುತ್ತಿಗೆ ರಘುರಾಮ ಹೊಳ್ಳ, ಪುಂಡಿಕೈ ಗೋಪಾಲಕೃಷ್ಣ ಭಟ್ ಇವರ ನೆಚ್ಚಿನ ಭಾಗವತರು. ಇವರು ಯಕ್ಷಗಾನ ನಾಟ್ಯವನ್ನು ಶ್ರೀಯುತ ರಾಕೇಶ್ ರೈ ಅಡ್ಕ ಇವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.
ಶ್ರೀಯುತ ರವಿ ಅಲೆವೂರಾಯ ಇವರ ೬೦ನೇ ಸಂವತ್ಸರದ ಆಚರಣೆಯಲ್ಲಿ  ಶ್ರೀಯುತ ಜಯಪ್ರಕಾಶ್ ಹೆಬ್ಬಾರ್ ಹಾಗೂ ಶಾಲಿನಿ ಹೆಬ್ಬಾರ್ ಇವರಿಗೆ  "ಯಕ್ಷಾದರ್ಶ ದಂಪತಿ ಪ್ರಶಸ್ತಿ" ನೀಡಿ ಗೌರವಿಸಲಾಗಿತ್ತು.

ಶ್ರೀಯುತ ಜಯಪ್ರಕಾಶ್ ಹೆಬ್ಬಾರ್ ಹಾಗೂ ಶಾಲಿನಿ ಹೆಬ್ಬಾರ್ ಇವರು ೦೯.೦೨.೨೦೦೪ ರಂದು ಮದುವೆಯಾಗಿ ವರುಣ್ ಹೆಬ್ಬಾರ್ ಹಾಗೂ ವೈಷ್ಣವಿ ಹೆಬ್ಬಾರ್ ಇಬ್ಬರು ಮಕ್ಕಳ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಈ ಯಕ್ಷ ಸಂಸಾರಕ್ಕೆ ನಾವು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395