ಯಕ್ಷ ಸಾಧಕರು ೭೧
ಯಕ್ಷಗಾನದ ಬೆಂಕಿ ಚೆಂಡು ಶ್ರೀಯುತ ವಿಶ್ವನಾಥ್ ಪೂಜಾರಿ ಹೆನ್ನಾಬೈಲ್.
ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಹೆನ್ನಾಬೈಲ್ ನ ಶ್ರೀಮತಿ ಸುಶೀಲ ಹಾಗೂ ಬಾಬು ಪೂಜಾರಿ ಇವರ ಮಗನಾಗಿ ದಿನಾಂಕ ೦೭.೧೧.೧೯೯೦ ರಂದು ಇವರ ಜನನ. ೮ ನೇ ತರಗತಿವರೆಗೆ ವಿದ್ಯಾಭ್ಯಾಸ. ಯಕ್ಷರಂಗದ ಧ್ರುವ ತಾರೆ ದಿ.ಕಾಳಿಂಗ ನಾವಡರ ಪದ್ಯಗಳು ಇವರನ್ನು ಯಕ್ಷಗಾನ ರಂಗಕ್ಕೆ ಬರಲು ಪ್ರೇರೇಪಿಸಿತು ಎಂದು ಹೆನ್ನಾಬೈಲ್ ಅವರು ಹೇಳುತ್ತಾರೆ.
ಗುರು ಇಲ್ಲದೆ ಯಕ್ಷಗಾನ ರಂಗ ಪ್ರವೇಶ ಮಾಡಿ ೧ ವರ್ಷದ ತಿರುಗಾಟದ ನಂತರ ಮಾನ್ಯ ಶ್ರೀಧರ್ ಕುಲಾಲ್ ಅವರಲ್ಲಿ ೧ ವಾರ ಯಕ್ಷಗಾನ ಕಲಿತು ನಂತರ ಅವರನ್ನೇ ಗುರುವಾಗಿ ಸ್ವೀಕರಿಸಿದ್ದರು. ರಂಗಕ್ಕೆ ಹೋಗುವ ಮೊದಲು ಎದುರು ವೇಷದವರ ಪದ್ಯ ಕೇಳಿ ನೆನಪು ಮಾಡಿಕೊಂಡು ರಂಗ ಪ್ರವೇಶ ಮಾಡುತ್ತೇನೆ ಎಂದು ಹೆನ್ನಾಬೈಲ್ ಅವರು ಹೇಳುತ್ತಾರೆ.
ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅಭಿಮನ್ಯು, ಸುಧನ್ವ, ಸುದರ್ಶನ, ಬರ್ಬರಿಕ, ರಕ್ತ ಬೀಜ, ಪುಷ್ಕಳ ಹಾಗೂ ಎಲ್ಲಾ ಪುರಾಣ ಪಾತ್ರ ಇವರ ನೆಚ್ಚಿನ ವೇಷಗಳು. ಕಮಲಶಿಲೆ, ಸಾಲಿಗ್ರಾಮ, ಶನೇಶ್ವರ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಕಮಲಶಿಲೆ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಈಗ ಯಕ್ಷಗಾನಕ್ಕೆ ತುಂಬಾ ಪ್ರೋತ್ಸಾಹ ಇದೆ. ಮಾಧ್ಯಮದವರು ತುಂಬಾ ಪ್ರಚಾರ ಮಾಡ್ತಾರೆ, ವಿಮರ್ಶೆ ಮಾಡ್ತಾರೆ, ಹಾಗಾಗಿ ನಾವು ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಹೆನ್ನಾಬೈಲ್ ಅವರು ಹೇಳುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಮುಂದೆ ಉತ್ತಮ ಕಲಾವಿದನಾಗಿ ಕಲೆಗೆ ಶ್ರಮಿಸಿ ನಾನು ಕಲಿತ ವಿದ್ಯೆಯಿಂದ ಇನ್ನಷ್ಟು ಕಲೆ ಬೆಳೆದು ಯುವ ಕಲಾವಿದರನ್ನ ತರಬೇಕು ಎನ್ನೋ ಆಸೆ ಇದೆ ಎಂದು ಹೆನ್ನಾಬೈಲ್ ಅವರು ಹೇಳುತ್ತಾರೆ.
ಬಂಟ್ಸ್ ವಾಟ್ಸಪ್ ಬಳಗ ಸಿದ್ಧಾಪುರ, ಬಿಲ್ಲವ ಸಂಘ ಕುಂದಾಪುರ, ಕೆರೆಕಾಡು ವಿನಾಯಕ ಬಳಗ ಮೂಲ್ಕಿ ಸಂಸ್ಥೆಯಿಂದ "ಯಕ್ಷ ಮಾಣಿಕ್ಯ" ಬಿರುದು, ಹುಟ್ಟೂರು ಸನ್ಮಾನ ಹಾಗೂ ಅನೇಕ ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದೆ.
೨೮.೦೧.೨೦೧೯ ರಂದು ವಿಮಲಾ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ತಂದೆ ತಾಯಂದಿರು, ಸರ್ವ ಕಲಾವಿದರು ಇವರೆಲ್ಲರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photo Click:- Gajendra Acharya Koni,ಉದಯ ಕೈರಂಗಳ, Dheeraj Udupa Uppinakudru.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment