ಯಕ್ಷ ಸಾಧಕರು ೪೬
ಮದ್ದಳೆ ಮಾಂತ್ರಿಕ ಶ್ರೀಯುತ ಪರಮೇಶ್ವರ್ ಪ್ರಭಾಕರ್ ಭಂಡಾರಿ
ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಬಡಗುತಿಟ್ಟಿನ ಹಿರಿಯ ಮದ್ದಳೆವಾದರಕು ಶ್ರೀಯುತ ಪರಮೇಶ್ವರ್ ಪ್ರಭಾಕರ್ ಭಂಡಾರಿ.
ದಿನಾಂಕ ೦೨.೦೫.೧೯೭೧ ರಂದು ಶ್ರೀಮತಿ ಶಾರದಾ ಹಾಗೂ ಪ್ರಭಾಕರ್ ಭಂಡಾರಿ ಇವರ ಮಗನಾಗಿ ಜನನ. SSLC ಇವರ ವಿಧ್ಯಾಭ್ಯಾಸ. ಇವರ ತಂದೆಯ ಪ್ರೇರಣೆಯಿಂದ ಇವರು ಚೆಂಡೆ ಹಾಗೂ ಮದ್ದಳೆ ಕಲಿತರು ಹಾಗೂ ಇವರ ತಂದೆಯೇ ಇವರ ಗುರುಗಳು.
ಗುಂಡಬಾಳ ಮೇಳದಲ್ಲಿ ೭ ವರ್ಷ, ಶಿರಸಿ ಮೇಳದಲ್ಲಿ ೧ ವರ್ಷ, ಭುವನಾಗಿರ ಮೇಳದಲ್ಲಿ ೧ ವರ್ಷ ಹಾಗೂ ಕಳೆದ 24 ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಒಟ್ಟು 33 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ತಂದೆ ಪ್ರಭಾಕರ್ ಭಂಡಾರಿ, ಅಣ್ಣ ಮಂಜುನಾಥ್ ಭಂಡಾರಿ ಹಾಗೂ ಶಂಕರ್ ಭಾಗವತ್, ಸತ್ಯನಾರಾಯಣ ಭಂಡಾರಿ ಕರ್ಕಿ, ಮಂದಾರ್ತಿ ರಾಮಣ್ಣ, ಶಿವಾನಂದ ಕೋಟ, ರಾಕೇಶ್ ಮಲ್ಯ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು. ಹೆರಂಜಾಲು ಗೋಪಾಲ್ ಗಾಣಿಗ, ಕೊಳಾಗಿ ಕೇಶವ ಹೆಗಡೆ, ಜನ್ಸಾಲೆ, ಮೂಡುಬೆಳ್ಳೆ, ಹಿಲ್ಲೂರು ಇವರ ನೆಚ್ಚಿನ ಭಾಗವತರು. ರಂಗನಾಯಕಿ, ಈಶ್ವರಿ ಪರಮೇಶ್ವರಿ ಮತ್ತು ಇತರೆ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಚಿತ್ರಕಲೆ ಇವರ ಹವ್ಯಾಸಗಳು. ಗಣೇಶ ಹಬ್ಬದ ಸಮಯದಲ್ಲಿ ಇವರು ಮನೆಯಲ್ಲಿ ತಯಾರಿಸುವ ಗಣಪತಿ ಮೂರ್ತಿಗಳನ್ನು ತುಂಬಾನೇ ಆಕರ್ಷಕವಾಗಿ ತಯಾರು ಮಾಡುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಕೆಲವು ಒಳ್ಳೇದು ಉಂಟು, ಕೆಲವು ಕೆಟ್ಟದು ಉಂಟು. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಇವತ್ತಿನ ಈ ಸಾಮಾಜಿಕ ಜಾಲತಾಣಗಳ ನಡುವೆ ಕೂಡ ಎಷ್ಟೋ ಮನೋರಂಜನೆ ಕಾರ್ಯಕ್ರಮ ಇದ್ದರು ಯಕ್ಷಗಾನಕ್ಕೆ ಇಷ್ಟೊಂದು ಅಭಿಮಾನಿಗಳು ಇರುವುದು ನನಗೆ ಹೆಮ್ಮೆ .
ದಿನಾಂಕ ೧೦.೦೬.೧೯೯೫ ರಂದು ಭಾರತಿ ಅವರನ್ನು ವಿವಾಹವಾಗಿ ಹೊನ್ನಾವರ ತಾಲೂಕು ಕರ್ಕಿಯಲ್ಲಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Pic By:- Sumanth Mithyantha & Manjunath Bairy.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment