ಯಕ್ಷ ಸಾಧಕರು ೩

ಮನೆಯನ್ನೇ ರಂಗಸ್ಥಳವನ್ನಾಗಿಸಿದ ಕಲಾವಿದರು

ಕರಾವಳಿಯ "ಶ್ರೀಮಂತ" ಕಲೆ ಯಕ್ಷಗಾನ. ಇಂತಹ ಶ್ರೀಮಂತ ಕಲೆಯಲ್ಲಿ ಅನೇಕ ಯುವ ಕಲಾವಿದರು ಹಾಗೂ ಕಲಾವಿದೆಯರು ನೋಡಲು ಸಿಗುತ್ತಾರೆ.
ಇವತ್ತು ನಾನು ಹೇಳುವ ಕಲಾವಿದರು ಉಜಿರೆಯ ಶ್ರೀಯುತ ಸುರೇಶ್ ಹೊಳ್ಳ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಹೊಳ್ಳ ಇವರ 4 ಜನ ಮಕ್ಕಳು.
ನವ್ಯ ಹೊಳ್ಳ 
ದಿವ್ಯ ಹೊಳ್ಳ
ದೀಪಾ ಹೊಳ್ಳ
ಆದಿತ್ಯ ಹೊಳ್ಳ.

ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನಕ್ಕೆ  ಮನಸೋತು ಶ್ರೀ ವಿಶ್ವನಾಥ್ ಗೌಡ ಕೊಯ್ಯೂರು ಇವರಿಂದ ಯಕ್ಷಗಾನ ಕಲಿತು ಯಕ್ಷರಂಗದಲ್ಲಿ ಒಳ್ಳೆಯ ಕಲಾವಿದರು ಆಗಬೇಕು ಹಾಗೂ ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಬೇಕು ಅಂತ ಆಸೆ, 4 ಜನರ ಕನಸು. ಈ ನಾಲ್ಕು ಜನರ ಇನ್ನೊಂದು ವಿಶೇಷ ಏನು ಅಂದರೆ ನಾಲ್ಕೂ ಜನ ಒಟ್ಟಿಗೆ ಯಕ್ಷಗಾನ ಕಲಿತು 2015ರಲ್ಲಿ ಒಂದೇ ವೇದಿಕೆಯಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಿದುದು. ಯಕ್ಷಗಾನಕ್ಕೆ ಬರಲು ಸ್ಫೂರ್ತಿ ಯಾರು ಅಂತ ಕೇಳಿದರೆ ಇವರ ಅಜ್ಜ ಹಾಗೂ ಇವರ ತಂದೆ ತಾಯಿ ಎಂದು ಹೇಳ್ತಾರೆ.

ಇನ್ನು ನವ್ಯ ಹೊಳ್ಳ ಇವರು 17.04.1998ರಲ್ಲಿ ಜನಿಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಬಿ.ಕಾಮ್ ಪದವಿಯನ್ನು ಪಡೆದಿರುತ್ತಾರೆ. ಇವರು ಯಕ್ಷಗಾನದಲ್ಲಿ ಹಾಸ್ಯ, ದೇವೇಂದ್ರ, ಬಲಗಳು, ಅರ್ಜುನ, ರಕ್ತಬೀಜ, "ಕಾರ್ತವೀರ್ಯ", ಕೌರವ, ನಾರದ, "ಮುರಾಸುರ", ದೇವಿ, "ವಿದ್ಯುನ್ಮಾಲಿ", ಲಕ್ಷ್ಮಣ, ಚಂಡ-ಮುಂಡ, ಶಶಿಪ್ರಭೆ, ಹಿರಣ್ಯಾಕ್ಷ, ರಾಕ್ಷಸ ಬಲ, ಜಾಂಬವ, ಹಂಸಧ್ವಜ, ಬಬ್ರುವಾಹನ, ಸುಧನ್ವ ಹೀಗೆ ಎಲ್ಲಾ ರೀತಿಯ ವೇಷ ಮಾಡುತ್ತಾರೆ. ನಿಮ್ಮ ನೆಚ್ಚಿನ ವೇಷ ಯಾವುದು ಅಂತ ಕೇಳಿದಾಗ ಇವರು  ನನಗೆ ಕಿರೀಟ ವೇಷ ಅಂದ್ರೆ ಬಹಳ ಇಷ್ಟ ಎಂದು ಹೇಳುತ್ತಾರೆ. ಇವರ ಯಕ್ಷಗಾನ ಬಿಟ್ಟು ಬೇರೆ ಹವ್ಯಾಸ ಡ್ಯಾನ್ಸ್, ಯಕ್ಷಗಾನ ಛಾಯಾಚಿತ್ರ, ಅಡುಗೆ, ಪೈಂಟಿಂಗ್. ಯಕ್ಷಗಾನ ರಂಗದಲ್ಲಿ ಇನ್ನೂ ಸಾಧನೆ ಮಾಡಬೇಕು ಎಂಬ ಕನಸು ಇವರದು.


ಎರಡನೆಯವರು ದಿವ್ಯ ಹೊಳ್ಳ. 23.12.2000ರಂದು ಇವರ ಜನನ. ಉಜಿರೆಯ ಅನುಗ್ರಹ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಹೈ ಸ್ಕೂಲ್ ಶಿಕ್ಷಣವನ್ನು ಪಡೆದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ನಲ್ಲಿ ಪಿ.ಯು.ಸಿ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಹವ್ಯಾಸ ಡ್ಯಾನ್ಸ್, ಯಕ್ಷಗಾನ, ಸಂಗೀತ.ಯಕ್ಷಗಾನದಲ್ಲಿ ಇವರಿಗೆ ಸ್ತ್ರೀ ವೇಷ ಮಾಡವುದು ಅಂದ್ರೆ ಬಹಳ ಖುಷಿ . ಯಕ್ಷಗಾನದಲ್ಲಿ ದೇವೇಂದ್ರ ಬಲ, ವಿಷ್ಣು, ಕೃಷ್ಣ, ಮಾಲಿನಿ, ತಿಲೋತ್ತಮೆ, ನಂದಿನಿ, ನಾರದ, ಲಕ್ಷ್ಮೀ, ಪ್ರಭಾವತಿ, ಪ್ರಸೇನ ಇವರು ಮಾಡಿರುವ ವೇಷಗಳು. ಮುಂದೆ  ಒಳ್ಳೆಯ ಡ್ಯಾನ್ಸರ್ ಹಾಗೂ ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಇವರದು.


ಮೂರನೇಯವರು ದೀಪಾ ಹೊಳ್ಳ 25.07.2003ರಲ್ಲಿ ಇವರ ಜನನ ಉಜಿರೆಯ ಅನುಗ್ರಹ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ. ಪ್ರಸ್ತುತ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದಾರೆ. ಯಕ್ಷಗಾನದಲ್ಲಿ ಇವರು ದೇವೇಂದ್ರ, ದೇವೇಂದ್ರ ಬಲ, ರಾಕ್ಷಸ ಬಲ, ವಿಷ್ಣು, ನಾರದ, ಕೃಷ್ಣ, ಸೀತೆ, ಜಾಂಬವತಿ, ಲಕ್ಷ್ಮಣ ಇವರು ಮಾಡಿರುವ ವೇಷಗಳು. ಕಿರೀಟ ವೇಷ ಮಾಡವುದು ಅಂದ್ರೆ ಇವರಿಗೆ ಬಹಳ ಖುಷಿ. ಯಕ್ಷಗಾನದ ಜೊತೆಗೆ ಇವರಿಗೆ ಡ್ಯಾನ್ಸ್ ಹಾಗೂ ಛಾಯಾಚಿತ್ರ ಇವರ ಹವ್ಯಾಸ. ಮುಂದೆ ಯಕ್ಷಗಾನ ರಂಗದಲ್ಲಿ ಒಳ್ಳೆಯ ಕಲಾವಿದರು ಆಗಬೇಕು ಅಂತ ಬಹಳ ಆಸೆ.



ಇನ್ನು ಕೊನೆಯವರು ಆದಿತ್ಯ ಹೊಳ್ಳ ಇವರ ಜನನ ದಿನಾಂಕ 13.10.2007 . ಅನುಗ್ರಹ ಇಂಗ್ಲೀಷ್ ಮೀಡಿಯಂನಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿದ್ದಾರೆ. ಇವರು ಯಕ್ಷಗಾನದಲ್ಲಿ ಆಲ್ ರೌಂಡ್ ಕಲಾವಿದ ಅಂತ ಹೇಳಬಹುದು. ಯಾಕೆಂದರೆ ಇವರು ಯಕ್ಷಗಾನದಲ್ಲಿ ಚೆಂಡೆ, ಮದ್ದಳೆ ಹಾಗೂ ವೇಷವನ್ನೂ ಮಾಡುತ್ತಾರೆ. ಇವರ ಚೆಂಡೆ ಹಾಗೂ ಮದ್ದಳೆ ಗುರುಗಳು ಮೋಹನ್ ಬೈಪಡಿತ್ತಾಯರು. ಇವರು ಬಲಗಳು, ಪ್ರಸೇನ, ಹಾಸ್ಯ, ಜಾಂಬವತಿ ಮೊದಲಾದ ವೇಷ ಮಾಡಿರುತ್ತಾರೆ. ಯಕ್ಷಗಾನದಲ್ಲಿ ನಿಮ್ಮ ನೆಚ್ಚಿನ ವೇಷ ಯಾವುದು ಅಂತ ಕೇಳಿದರೆ ಪಕಡಿ ವೇಷ ಅಂತ ಹೇಳ್ತಾರೆ ಇವರು. ಕೀಬೋರ್ಡ್, ತಬಲಾ ಹಾಗೂ ಇನ್ನಿತರ ಸಂಗೀತ ಉಪಕರಣ ನುಡಿಸುವುದು ಇವರಿಗೆ  ಖುಷಿ ಹಾಗೂ ನನ್ನ ಒಂದು ಹವ್ಯಾಸ ಅಂತ ಹೇಳ್ತಾರೆ ಇವರು. ಹಾಗೂ ಮುಂದೆ ಒಂದು ಒಳ್ಳೆಯ ಕಲಾವಿದ ಆಗಬೇಕು ಎಂಬ ಬಹಳ ಆಸೆ ಇದೆ ಅಂತ ಹೇಳ್ತಾರೆ ಇವರು.

ಇವರು ನಾಲ್ಕು ಜನರ ವಿಶೇಷ ಏನು ಎಂದರೆ ಎಲ್ಲಿ ಯಕ್ಷಗಾನ ಇದ್ದರೂ ನಾಲ್ಕು ಜನ ಒಟ್ಟಿಗೇ ಹೋಗುವುದು ಹಾಗೂ ನಾಲ್ಕೂ ಜನಕ್ಕೆ ಯಕ್ಷಗಾನದಲ್ಲಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಹಾಗೂ  ಒಳ್ಳೆಯ ಕಲಾವಿದರು ಆಗಬೇಕು ಎಂಬ ಆಸೆ. ಇನ್ನೊಂದು ವಿಶೇಷ ಅಂದ್ರೆ ಆಮಂತ್ರಣ ಹಬ್ಬ ಅಳದಂಗಡಿ ಇಲ್ಲಿ ನಾಲ್ಕ ಜನರಿಗೂ ಸಮ್ಮಾನ ಮಾಡಿದುದು.ಇವರು ನಾಲ್ಕೂ ಜನ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ ಒಳ್ಳೆಯ ಹೆಸರು ಹಾಗೂ ಅನೇಕ ಯುವ ಕಲಾವಿದರಿಗೆ ಸ್ಫೂರ್ತಿ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ..

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
.

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395