ಯಕ್ಷ ಸಾಧಕರು ೬

ಬಹುಮುಖ ಪ್ರತಿಭೆ ವಿಕ್ರಮ್ ಮಯ್ಯ ಪೈವಳಿಕೆ

ಕಲಾ ಪ್ರಪಂಚವು ಮುತ್ತಿನ ಕಿರೀಟದಲ್ಲಿ ಹೊಳೆವ ರತ್ನಮಣಿಯಂತೆ ಕಂಗೊಳಿಸುವ ಅನೇಕ ಅದ್ಭುತ ಪ್ರತಿಭೆಗಳನ್ನು ಕಲಾಜಗತ್ತಿಗೆ ಪರಿಚಯಿಸಿದೆ...  ಇಂತಹ ಅದ್ಭುತ ಕಲಾಮಾಣಿಕ್ಯಗಳಲ್ಲಿ ಕೆಲವರು ಪ್ರಜ್ವಲಿಪ ದೀಪದಂತೆ ಜಗತ್ತಿಗೆ ಕಂಡರೆ ಮತ್ತೆ ಕೆಲ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಉಳಿದುಕೊಂಡಿದ್ದಾರೆ. ಅಂತಹ ಅದ್ಭುತ ಪ್ರತಿಭೆಗಳಲ್ಲಿ ಪ್ರಸ್ತುತ ನಮಗೆ ರತ್ನದಂತೆ ಹೊಳೆವ ಪ್ರತಿಭೆ ವಿಕ್ರಮ ಮಯ್ಯ ಪೈವಳಿಕೆ.

ಕಾಸರಗೋಡು ಜಿಲ್ಲೆ ಪೈವಳಿಕೆಯ ದಿ ಪಿ ಸುಂದರ ಮಯ್ಯ ಹಾಗೂ ಮಾಲಿನಿ ಇವರ ಸುಪುತ್ರನಾಗಿ 09.07.1991ರಂದು ಜನನ. ಡಿಪ್ಲೊಮಾ ಇನ್ ಟೂರಿಸಂ ಆಂಡ್ ಟ್ರಾವೆಲಿಂಗ್ ಇವರ ವಿದ್ಯಾಭ್ಯಾಸ. ಪ್ರಸ್ತುತ ಕರ್ನಾಟಕ ಬ್ಯಾಂಕ್ ಉದ್ಯೋಗಿ. ದಿವಂಗತ ದೇವಕಾನ ಕೃಷ್ಣ ಭಟ್ ಅವರ ವೇಷಭೂಷಣದ ಜೊತೆಗೆ ಚಿಕ್ಕಂದಿನಿಂದಲೇ ಸಂಘಗಳ ಯಕ್ಷಗಾನಕ್ಕೆ ತಂದೆಯ ಜೊತೆ ಹೋಗುತ್ತಿದ್ದ ಕಾರಣ ಯಕ್ಷಗಾನದ ಆಸಕ್ತಿ ಇವರಿಗೆ ಚಿಗುರಿತು. ಚಕ್ರತಾಳದಲ್ಲಿ ಇವರ ತಂದೆಯೇ ಇವರ ಗುರು.

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (ಭಾಗವತಿಗೆ)
ಸಬ್ಬಣಕೋಡಿ ರಾಮ ಭಟ್ (ನಾಟ್ಯ) ಹಾಗೂ
ದೇಲಂತಮಜಲು ಸುಬ್ರಹ್ಮಣ್ಯ ಭಟ್ (ಚೆಂಡೆ) ಇವರಿಂದ ಕಲಿತು ಯಕ್ಷಗಾನ ರಂಗದಲ್ಲಿ ಪರಿಪೂರ್ಣ ಕಲಾವಿದನಾಗಿ ಹೊರ ಹೊಮ್ಮಿದರು. ವೃತ್ತಿಪರ  ಕಲಾವಿದನಾಗಿ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಎಡನೀರು ಮೇಳದಲ್ಲಿ ಹಲವಾರು ವರುಷ ತಿರುಗಾಟ ಮಾಡಿದ ಅನುಭವ ಇದೆ.

ಯಕ್ಷಗಾನದ ಜೊತೆಗೆ ಹಾಡುವುದು , ಪದ್ಯ_ರಚನೆ ,ಪೋಟೋಗ್ರಾಫಿ,
ಆಡಿಯೋ ಎಡಿಟಿಂಗ್ ಇವರ ಹವ್ಯಾಸಗಳು.

ಇವರ ಪ್ರತಿಭೆಯನ್ನು ನೋಡಿ ಚೆನ್ನೈ ಕರ್ನಾಟಕ ಸಂಘದ ವತಿಯಿಂದ ನಡೆದ 2019ರ ಚೆನ್ನೈ ಕನ್ನಡ ರಾಜ್ಯೋತ್ಸವದಲ್ಲಿ ಯುವ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಯಕ್ಷಗಾನದಲ್ಲಿ ನಾನು ಇನ್ನೂ ಉತ್ತಮ ಸಾಧನೆ ಮಾಡಿ ಒಬ್ಬ ಒಳ್ಳೆಯ ಕಲಾವಿದ ಆಗಬೇಕು ಎಂಬ ಕನಸು ಇದೆ ಎಂದು ಹೇಳುತ್ತಾರೆ ಮಯ್ಯರು.


ಇವರಿಗೆ ಇವರು ನಂಬಿರುವ ಕಲಾಮಾತೆ  ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395