ಯಕ್ಷ ಸಾಧಕರು ೪೩
ತೆಂಕುತಿಟ್ಟು ಯಕ್ಷಗಾನ ರಂಗದ ಹಸನ್ಮುಖಿ ಕಲಾವಿದ ಶ್ರೀಯುತ ಆನಂದ ಪೂಜಾರಿ ಕೊಕ್ಕಡ.
ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ. ಯಕ್ಷಗಾನ ರಂಗದಲ್ಲಿ ಅನೇಕ ಕಲಾವಿದರು ನಮಗೆ ನೋಡಲು ಸಿಗುತ್ತಾರೆ. ಅದರಲ್ಲಿ ಸದಾ ತಮ್ಮ ನಗುವಿನ ಮೂಲಕ ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರದಲ್ಲಿ ವೇಷಧಾರಿಯಾಗಿರುವ, ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿರುವ ಶ್ರೀಯುತ ಆನಂದ್ ಪೂಜಾರಿ ಕೊಕ್ಕಡ.
ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದ ಶ್ರೀಮತಿ ಚಿನ್ನಮ್ಮ ಹಾಗೂ ಕೊರಗಪ್ಪ ಪೂಜಾರಿ ಇವರ ಮಗನಾಗಿ 26.02.1980ರಂದು ಜನನ. 10ನೇ ತರಗತಿ ಇವರ ವಿದ್ಯಾಭ್ಯಾಸ. ಶ್ರೀಯುತ ಪರಮೇಶ್ವರ ಆಚಾರ್ಯ ಇವರ ಯಕ್ಷಗಾನದ ಗುರುಗಳು. ಯಕ್ಷಗಾನದ ಮೇಲೆ ಇದ್ದ ಒಲವು ಇವರನ್ನು ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು.
ದೇವಿ ಮಹಾತ್ಮೆ, ಸುದರ್ಶನ ವಿಜಯ, ಕಟೀಲು ಕ್ಷೇತ್ರ ಮಹಾತ್ಮೆ, ಕೃಷ್ಣಾರ್ಜುನ ಹೀಗೆ ಇನ್ನು ಅನೇಕ ಯಕ್ಷಗಾನ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ವಿಷ್ಣು ಮತ್ತು ಪುಂಡು ವೇಷಗಳು ಇವರ ನೆಚ್ಚಿನ ವೇಷಗಳು. ಕಟೀಲು ಮೇಳದಲ್ಲಿ 20 ವರ್ಷದಿಂದ ತಿರುಗಾಟವನ್ನು ಮಾಡುತ್ತಿದ್ದಾರೆ. ಸಂಗೀತ ಕೇಳುವುದು, ಭರತನಾಟ್ಯ ನೋಡುವುದು, ಯಕ್ಷಗಾನ ನೋಡುವುದು ಇವರ ಹವ್ಯಾಸಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಪುಸ್ತಕ ಓದುವುದು, ಅನುಭವಿ ಹಿರಿಯ ಕಲಾವಿದರಲ್ಲಿ ಕೇಳಿ, ಭಾಗವತರಲ್ಲಿ ಕೇಳಿ ಆ ದಿನದ ಪ್ರಸಂಗದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಬದಲಾವಣೆ ಜಗದ ನಿಯಮ, ಹಾಗಾಗಿ ಯಕ್ಷಗಾನದಲ್ಲಿಯೂ ಬದಲಾವಣೆ ಆಗುತ್ತಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದಲ್ಲಿ ಅನೇಕ ಅನುಭವಿ ಪ್ರೇಕ್ಷಕರು ಇರುವುದು ತುಂಬಾನೇ ಸಂತೋಷದ ವಿಷಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಉತ್ತಮ ಕಲಾವಿದನಾಗಬೇಕು ಎಂಬ ಬಯಕೆ ಇದೆ ಎಂದು ಹೇಳುತ್ತಾರೆ ಶ್ರೀಯುತ ಆನಂದ ಪೂಜಾರಿ ಕೊಕ್ಕಡ.
ಶ್ರೀಯುತ ಆನಂದ್ ಪೂಜಾರಿ ಕೊಕ್ಕಡ ಅವರು ದಿನಾಂಕ 26.10.2010 ರಂದು ಅಶ್ವಿನಿ ಅವರನ್ನು ಮದುವೆಯಾಗಿ, ಆದ್ಯ ಹಾಗೂ ಆರಾಧ್ಯ ಇಬ್ಬರು ಮಕ್ಕಳ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- S.K Photography, Yaksha Naveena, Diwanagraphy, Vaishak Kotian.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
ಎಲೆಯ ಮರೆಯ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಲೋಕಕ್ಕೆ ಪರಿಚಯಿಸಿದ ನಿಮಗೆ ಹೃತ್ಪೂರ್ವಕಧನ್ಯವಾದಗಳು ಸರ್. ಹಾಗೆಯೇ ಇನ್ನಷ್ಟು ಕಲಾಮಾತೆಯ ಸೇವೆ ಗೈಯುವ ಪುಣ್ಯ ಲಭಿಸಲಿ.
ReplyDeleteಧನ್ಯವಾದಗಳು ಕಲೆ - ಕಲಾವಿದರ ಮೇಲಿನ ಪ್ರೀತಿ - ಗೌರವದಿಂದ, ಇದೊಂದು ಸಣ್ಣ ಅಳಿಲುಸೇವೆ.
Deleteಇನ್ನು ಮುಂದೆಯೂ ಹೆಚ್ಚಿನ ಕಲಾವಿದರ ಬಗ್ಗೆ ಬರೆಯಲು ದೇವರ ಅನುಗ್ರಹ, ನಿಮ್ಮೆಲ್ಲರ ಸಲಹೆ ಸಹಕಾರವು ನನಗಿರಲಿ.
♥️🙏
ಇತ್ತೀಚೆಗೆ ನಮ್ಮ ಊರಿನಲ್ಲಿ ನಡೆದ ಯಕ್ಷಗಾನದಲ್ಲಿ ಅವರ ವಿಷ್ಣು ವಿನ ಪಾತ್ರ ತುಂಬಾ ಅಧ್ಬುತ ವಾಗಿತ್ತು.
ReplyDelete