ಯಕ್ಷ ಸಾಧಕರು ೧೧೧

ಯುವ ಮದ್ದಳೆ ವಾದಕ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ.

ದಿನಾಂಕ ೧೩/೦೪/೨೦೦೨ರಂದು ಸದಾನಂದ ಆಚಾರ್ಯ ಹಾಗೂ ಸುಮ ಆಚಾರ್ಯ ದಂಪತಿಯರ ಸುಪುತ್ರನಾಗಿ ಶಶಾಂಕ್ ಆಚಾರ್ಯರ ಜನನ. ಕುಂದಾಪುರದ ಡಾ. ಬಿ. ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಅಪ್ಪ ಅಮ್ಮ ಹಾಗೂ ಅಣ್ಣ ದಿನೇಶ್ ಆಚಾರ್ಯ, ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.

ಗಣೇಶ್ ಹೆಬ್ಬಾರ್ ಇವರ ಮೊದಲ ಗುರುಗಳು, ನಂತರದ ದಿನಗಳಲ್ಲಿ ಗೋಪಾಲ ಗಾಣಿಗ ಹೇರಂಜಾಲು, ಎನ್. ಜಿ. ಹೆಗಡೆ ಇವರ ಗುರುಗಳು.

೨ನೇ ತರಗತಿಯಿಂದ ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಒಟ್ಟು ೧೩ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹವ್ಯಾಸಿ ಕಲಾವಿದರಾಗಿರುವ ಇವರು ಮೇಳದಲ್ಲಿ ರಜೆಯ ಕಲಾವಿದರ ಬದಲಿಗೆ ಕರೆದಾಗ ಮೇಳಕ್ಕೆ ಸೇವೆ ಸಲ್ಲಿಸಲು ಹೋಗುತ್ತಾರೆ. ಪೆರ್ಡೂರು, ಮಾರಣಕಟ್ಟೆ, ಮಂದಾರ್ತಿ, ಹಟ್ಟಿಯಂಗಡಿ, ಸಿಗಂದೂರು, ಬೋಳಂಬಳ್ಳಿ, ಕಮಲಶಿಲೆ, ಶನೀಶ್ವರ, ನೀಲಾವರ ಮೇಳದಲ್ಲಿ ಸೇವೆ ಮಾಡಿದ ಅನುಭವ ಇವರಿಗಿದೆ.


ಪ್ರಭಾಕರ್ ಭಂಡಾರಿ, ಹುಂಚದ್ ಕಟ್ಟೆ ಶ್ರೀನಿವಾಸ ಆಚಾರ್, ದುರ್ಗಪ್ಪ ಗುಡಿಗಾರ್,  ಶಂಕರ್ ಭಾಗವತರು, ಎನ್. ಜಿ. ಹೆಗಡೆ, ಸುನಿಲ್ ಭಂಡಾರಿ ಇವರ ನೆಚ್ಚಿನ ಮದ್ದಳೆ ವಾದಕರು.

ಮಂದಾರ್ತಿ ರಾಮಣ್ಣ, ರಾಕೇಶ್ ಮಲ್ಯ ಇವರ ನೆಚ್ಚಿನ ಚೆಂಡೆ ವಾದಕರು.
ಗೋಪಾಲ ಗಾಣಿಗ ಹೇರಂಜಾಲು, ಸುಬ್ರಹ್ಮಣ್ಯ ಧಾರೇಶ್ವರ, ರಾಘವೇಂದ್ರ ಮಯ್ಯ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸನ್ನ ಭಟ್ ಬಾಳ್ಕಲ್ ಇವರ ನೆಚ್ಚಿನ ಭಾಗವತರು.
ಇವರು ಮೊದಲು ವೇಷ ಮಾಡುತ್ತಿದ್ದರು, ನಂತರ ಮದ್ದಳೆ ನುಡಿಸುವ ಆಸಕ್ತಿ ಜಾಸ್ತಿ ಅದ ಮೇಲೆ ವೇಷದ ಆಸಕ್ತಿ ಕಡಿಮೆ ಆಯ್ತು.

ಯಕ್ಷಗಾನದ ಇಂದಿನ ಸ್ಥಿತಿಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಹೆಚ್ಚಿದ ಪ್ರದರ್ಶನ , ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಪ್ರೇಕ್ಷಕರನ್ನು ತಲುಪುವುದು ಸಾಧ್ಯ ಆಗಿದೆ ಎಂದು ಶಶಾಂಕ್ ಅವರು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಎಂಟರ್ಟೈನ್ಮೆಂಟ್ ಗಾಗಿ ಬರುವ ಪ್ರೇಕ್ಷಕರು ಹೆಚ್ಚಾಗಿದ್ದಾರೆ ಎಂದು ಶಶಾಂಕ್ ಅವರು ಹೇಳುತ್ತಾರೆ.


ಯಕ್ಷಗಾನ ರಂಗದ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ನನ್ನದೇ ಆದಂತಹ ಯೂಟ್ಯೂಬ್ ಚಾನೆಲ್ ಮಾಡಿ, ಯಕ್ಷಗಾನದ ಕ್ವಾಲಿಟಿ ವಿಡಿಯೋಗಳನ್ನು ಹಾಕಲು ಇಷ್ಟ ಪಡುತ್ತೇನೆ ಎಂದು ಶಶಾಂಕ್ ಅವರು ಹೇಳುತ್ತಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395