ಯಕ್ಷ ಸಾಧಕರು ೧೧೨

ಸ್ವರವಾರಿಧಿ ಕಾವ್ಯಶ್ರೀ ಗುರುಪ್ರಸಾದ್ ಆಜೇರು.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮದಲ್ಲಿ ಶ್ರೀಮತಿ ಉಮಾ ನಾಯಕ್ ಹಾಗೂ ಶ್ರೀಪತಿ ನಾಯಕ್ ದಂಪತಿ ಸುಪುತ್ರಿಯಾಗಿ ೧೬.೦೪.೧೯೯೪ ರಂದು ಇವರ ಜನನ. MSC, BED ಇವರ ವಿದ್ಯಾಭ್ಯಾಸ. ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ತಂದೆ ಹಾಗೂ ಮನೆಯಲ್ಲಿ ಯಕ್ಷಗಾನದ ವಾತಾವರಣ. ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹರೀಶ್ ಬಳಂತಿಮೊಗರು ಇವರ ಯಕ್ಷಗಾನ ಗುರುಗಳು. ತಮ್ಮ ೯ನೇ ವಯಸ್ಸಿನಲ್ಲಿ ಯಕ್ಷಗಾನ ಭಾಗವತಿಕೆ ಅಭ್ಯಾಸ ಪ್ರಾರಂಭ ಮಾಡಿ ಇಂದಿಗೆ ಯಕ್ಷಗಾನ ರಂಗದಲ್ಲಿ ಒಟ್ಟು ೧೮ ವರ್ಷಗಳಿಂದ ಸೇವೆಯನ್ನು ಇವರು ಮಾಡುತ್ತಿದ್ದಾರೆ.




ದೇವೀ ಮಹಾತ್ಮೆ, ಜಾಂಬವತಿ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳು.ಚಾರುಕೇಶಿ, ಹಿಂದೋಳ, ಅಹಿರ್ ಭೈರವ್ ಇವರ ನೆಚ್ಚಿನ ರಾಗಗಳು. ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ ಇವರ ನೆಚ್ಚಿನ ಭಾಗವತರು. ಭಾಗವತರ ಮನೋಧರ್ಮ ಅರಿತು ನುಡಿಸುವ ಹಿಮ್ಮೇಳ ವಾದಕರು ಎಲ್ಲರೂ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು ಎಂದು ಹೇಳುತ್ತಾರೆ ಕಾವ್ಯಶ್ರೀ ಅವರು.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಸ್ಥಿತಿ ಒಳ್ಳೆದಿದೆ. ಯಕ್ಷಗಾನದ ಪರಂಪರೆಗೆ ಧಕ್ಕೆ ಆಗದಂತೆ ಬದಲಾವಣೆ ಆಗಿದೆ ಎಂದು ಹೇಳುತ್ತಾರೆ ನಾಯಕ್ ಅವರು.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಲಾವಿದರಿಗೆ ಯಕ್ಷಾಭಿಮಾನಿಗಳ ಪ್ರೋತ್ಸಾಹ ತುಂಬಾ ಮುಖ್ಯವಾದದ್ದು. ಒಳ್ಳೆಯ ಪ್ರೇಕ್ಷಕರು, ವಿಮರ್ಶಕರು ಇದ್ದಾರೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಸದ್ಯಕ್ಕೆ ಯಕ್ಷಗಾನವನ್ನು ಹವ್ಯಾಸವಾಗಿ ತಗೊಂಡಿದ್ದೇನೆ . ಮೇಳಗಳಿಗೆ ಅತಿಥಿ ಭಾಗವತರಾಗಿ ಹೋಗ್ತುತ್ತಿದ್ದೇನೆ. ಸದ್ಯಕ್ಕೆ ಬೇರೆ ಯೋಜನೆಗಳ ಬಗ್ಗೆ ಯೋಚನೆಯಿಲ್ಲ.  ಆದರೆ ಮುಂದಕ್ಕೆ ಯಕ್ಷಗಾನ ಭಾಗವತಿಕೆಯನ್ನು ಕಲಿಸುವ ಆಕಾಂಕ್ಷೆ ಇದೆ.

ಯಕ್ಷಗಾನ ರಂಗದಲ್ಲಿ ಇವರು ಮಾಡಿರುವ ಸಾಧನೆ ಹಾಗೂ ಇವರ ಪಡೆದಿರುವ ಪ್ರಶಸ್ತಿ ಹಾಗೂ ಪುರಸ್ಕಾರಗಳು:-
◆ ಇದುವರೆಗೆ ಸುಮಾರು 600ಕ್ಕೂ ಅಧಿಕ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರೆ.
◆ ಮಂಗಳೂರು ಆಕಾಶವಾಣಿಯಲ್ಲಿ ಯಕ್ಷಗಾನ ಭಾಗವತಿಕೆಯ "ಬಿ" ಗ್ರೇಡ್ ಕಲಾವಿದೆ.
◆ ದೂರದರ್ಶನ ಚಂದನ ವಾಹಿನಿಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಸಿರುವುದು.
◆ ದಕ್ಷಿಣ ಕನ್ನಡ, ಕಾಸರಗೋಡು ತೆಂಕುತಿಟ್ಟು ಹಿಮ್ಮೇಳ ಸ್ಪರ್ಧೆಯಲ್ಲಿ " ತೃತೀಯ ಸ್ಥಾನ".
◆ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ನಿರಂತರ ಮೂರು ವರ್ಷಗಳ ಕಾಲ ಭಾಗವತಿಕೆಯ ವಿಶೇಷ ಬಹುಮಾನ.
◆ ಮುಂಬೈ, ಹರಿದ್ವಾರ, ಪೂನ, ಚೆನ್ನೈ, ದುಬೈ ಹೀಗೆ ಹಲವಾರು ಕಡೆ ಕಾರ್ಯಕ್ರಮವನ್ನು ನೀಡಿರುತ್ತಾರೆ.
◆ ಸುಮಸೌರಭ ರಾಜ್ಯ ಪ್ರಶಸ್ತಿ.
◆ ಕಲಾ ಸಂಗಮ ಪ್ರಶಸ್ತಿ ಮಂಗಳೂರು.
◆ ಯಕ್ಷ ಕೌಮುದಿಯವರ "ನಾದಶ್ರೀ" ಪ್ರಶಸ್ತಿ.
◆ ಆದಿಗ್ರಾಮೋತ್ಸವ ಸಮಿತಿಯ "ಗ್ರಾಮೋತ್ಸವ ಯುವ ಗೌರವ ಪ್ರಶಸ್ತಿ".
◆ ಕೊಂಕಣಿ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ.
◆ "ಯಕ್ಷಕಲಾತರಂಗ ಮುಂಬೈ" ಗೌರವ ಪ್ರಶಸ್ತಿ.
◆ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ " ಕರ್ನಾಟಕ ಪ್ರತಿಭಾ ರತ್ನ" ಪ್ರಶಸ್ತಿ.
◆ ಶ್ರೀ ಭಾರತೀತೀರ್ಥ ಸಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ (ರಿ) ಶೃಂಗೇರಿ ಇವರು ಆಯೋಜಿಸುವ “ಮಲೆನಾಡು ಉತ್ಸವ" ಕಾರ್ಯಕ್ರಮದಲ್ಲಿ
“ಕಾಳಿಂಗ ನಾವಡ ಯುವ ರಂಗ ಸನ್ಮಾನ ಪುರಸ್ಕಾರ" ನೀಡಿ ಗೌರವಿಸಿದ್ದಾರೆ.
ಹೀಗೆ ಇನ್ನೂ ಹಲವಾರು ಪ್ರತಿಭಾ ಪುರಸ್ಕಾರಗಳು ಇವರಿಗೆ ಸಿಕ್ಕಿರುತ್ತದೆ.




ಕೆರೆಕಾಡು ವಿನಾಯಕ ಮೇಳ 10 ವರ್ಷಗಳಿಂದ.ಅತಿಥಿ ಭಾಗವತರಾಗಿ - ಕಟೀಲು ಮೇಳ ,ಇರುವೈಲು ಮೇಳ, ತಳಕಳ, ಬೆಂಕಿನಾಥೇಶ್ವರ, ಸಾಲಿಗ್ರಾಮ, ಪೆರ್ಡೂರು ,ಸೌಕೂರು ಮೇಳ ಸದ್ಯಕ್ಕೆ ದೆಂತಡ್ಕ ಮೇಳದಲ್ಲಿ ತಿರುಗಾಟ ಮಾಡಿರುವ ಇವರಿಗೆ ಯಕ್ಷಗಾನ ರಂಗದಲ್ಲಿ ಒಟ್ಟು ೧೮ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದರೆ.

ಕಾವ್ಯ ವಾಚನ, ಸುಗಮ ಸಂಗೀತ, ಪುಸ್ತಕಗಳನ್ನು ಓದುವುದು ಇವರ ಹವ್ಯಾಸಗಳು. ಶಾಸ್ತ್ರೀಯ ಸಂಗೀತವನ್ನು ಜೂನಿಯರ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.

೦೩.೧೧.೨೦೧೯ ರಂದು ಗುರುಪ್ರಸಾದ್ ಆಜೇರು ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photo Click:- Ashok Donderangadi, Praveen Perdoor, Sudarshan Mandarthi, Prasanna B S Photography.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395