ಯಕ್ಷ ಸಾಧಕರು ೧೧೩
ಯುವ ಚೆಂಡೆ,ಮದ್ದಳೆ ವಾದಕರು ಸಮರ್ಥ್ ಎಸ್ ಉಡುಪ ಕತ್ತಲ್ ಸಾರ್.
ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ.ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಲಾವಿದರು ನಮಗೆ ನೋಡಲು ಸಿಗುತ್ತಾರೆ ಅದರಲ್ಲಿ ಒಬ್ಬರು ಯುವ ಚೆಂಡೆ, ಮದ್ದಳೆ ವಾದಕರು ಸಮರ್ಥ್ ಎಸ್ ಉಡುಪ ಕತ್ತಲ್ ಸಾರ್.
೩೧.೦೩.೨೦೦೭ ರಂದು ಶ್ರೀನಿವಾಸ ಉಡುಪ ಹಾಗೂ ಮೈತ್ರಿ ಉಡುಪ ದಂಪತಿಯರ ಸುಪುತ್ರನಾಗಿ ಜನನ. ೧೦ನೇ ತರಗತಿಯ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಯಕ್ಷಗಾನ ವೀಕ್ಷಣೆಯಿಂದ ಚಂಡೆ ಹಾಗೂ ಮದ್ದಳೆಯಲ್ಲಿ ಆಸಕ್ತಿ ಬೆಳೆಯಿತು. ಶ್ರೀ ಹರಿನಾರಾಯಣ ಬೈಪಡಿತ್ತಾಯರು ಇವರ ಗುರುಗಳು. ಯಕ್ಷಗಾನ ರಂಗದಲ್ಲಿ ಒಟ್ಟು ೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಮುರಾರಿ ಕಡಂಬಳಿತ್ತಾಯರು, ಹರಿನಾರಾಯಣ ಬೈಪಡಿತ್ತಾಯರು,ಸೂರಜ್ ಆಚಾರ್ಯ ಮೂಲ್ಕಿ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ಲೀಲಾವತಿ ಬೈಪಡಿತ್ತಾಯ, ಸತೀಶ್ ಶೆಟ್ಟಿ ಬೋಂದೆಲ್, ಗಿರೀಶ್ ಕಕ್ಕೆಪದವು, ದೇವಿಪ್ರಕಾಶ್ ಕಟೀಲು ಇವರ ನೆಚ್ಚಿನ ಭಾಗವತರು.
ಕೃಷ್ಣ ಲೀಲೆ, ಮಹಿಷ ವಧೆ, ಶಾಂಭವಿ ವಿಲಾಸ ಇವರ ನೆಚ್ಚಿನ ಪ್ರಸಂಗಗಳು. ಯಕ್ಷಗಾನ ರಂಗದಲ್ಲಿ ವೇಷ ಮಾಡುವ ಆಸಕ್ತಿ ಇದೆ ಎಂದು ಹೇಳುತ್ತಾರೆ ಸಮರ್ಥ್ ಎಸ್ ಉಡುಪ.
ಗುರುಗಳಂತೆ ಯಕ್ಷರಂಗದಲ್ಲಿ ಸಮರ್ಥ ಚಂಡೆ ಮದ್ದಳೆ ವಾದಕರಾಗಬೇಕೆಂಬ ಬಯಕೆ ಎಂದು ಹೇಳುತ್ತಾರೆ ಸಮರ್ಥ್ ಎಸ್ ಉಡುಪ.
ತಲಕಳ ಮೇಳ, ಉಳ್ಳಾಲ ಮೇಳ, ಸರಯೂ ಬಾಲವೃಂದ ಕೋಡಿಕಲ್ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಸಮರ್ಥ್ ಎಸ್ ಉಡುಪ.
ಯಕ್ಷಗಾನದ ಹಿಮ್ಮೇಳದ ವೀಕ್ಷಣೆ, ಕ್ರೀಡೆ ಇವರ ಹವ್ಯಾಸಗಳು. ಊರಿನ ಫ್ರೆಂಡ್ಸ್ ಸರ್ಕಲ್ ಅವರಿಂದ ಗೌರವ ಸನ್ಮಾನ ಇವರಿಗೆ ದೊರೆತಿರುತ್ತದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment