ಯಕ್ಷ ಸಾಧಕರು ೧೧೦

ಸತ್ವ ಸಂಪನ್ನ ಭಾಗವತ ಲಂಬೋದರ ಹೆಗಡೆ.

ಯಕ್ಷಗಾನವು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಇಂತಹ ಒಂದು ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವ ಭಾಗವತರು ಲಂಬೋದರ ಹೆಗಡೆ.

೨೨.೦೨.೧೯೭೬ ರಂದು ವಾರಿಜಾಕ್ಷಿ ಹಾಗೂ ಸುಬ್ಬರಾವ್ ಇವರ ಮಗನಾಗಿ ಜನನ. ಪಿಯುಸಿ ಇವರ ವಿದ್ಯಾಭ್ಯಾಸ. ಹೆಗಡೆಯವರ ತಂದೆ ಭಾಗವತರು ನಾರಾಯಣ ಉಪ್ಪೂರರ ಶಿಷ್ಯ. ದೊಡ್ಡಪ್ಪ ಚಿಕ್ಕಪ್ಪ ಎಲ್ಲರೂ ಯಕ್ಷಗಾನ ಕಲಾವಿದರು, ಅಜ್ಜ ಸಣ್ಣಜ್ಜ ಕೂಡ ಯಕ್ಷಗಾನ ಕಲಾವಿದರಾಗಿದ್ದರು ಹೀಗೆ ಇವರ ಯಕ್ಷಗಾನ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಹೆಗಡೆ. ಪ್ರೊ.ಕೆ.ಪಿ.ಹೆಗಡೆ ಇವರ ಯಕ್ಷಗಾನ ಗುರುಗಳು.


ಆರಭಿ, ಕಲ್ಯಾಣಿ, ಅಭೇರಿ ಇವರ ನೆಚ್ಚಿನ ರಾಗಗಳು. ಶ್ರೀಕೃಷ್ಣ ಸಂಧಾನ, ಸುದರ್ಶನ ವಿಜಯ, ಪಂಚವಟಿ ಇವರ ನೆಚ್ಚಿನ ಪ್ರಸಂಗಗಳು.
ಶಂಕರ ಭಾಗವತ, ಎನ್ ಜಿ ಹೆಗಡೆ, ರಾಘವೇಂದ್ರ ಹೆಗಡೆ, ಸುನಿಲ್ ಭಂಡಾರಿ ಇವರ ನೆಚ್ಚಿನ ಮದ್ದಳೆ ವಾದಕರು.
ರಾಮಕೃಷ್ಣ ಮಂದಾರ್ತಿ, ಶಿವಾನಂದ ಕೋಟ, ಶ್ರೀನಿವಾಸ ಪ್ರಭು (ಗುಂಡ) ನೆಚ್ಚಿನ ಚೆಂಡೆ ವಾದಕರು.
ಕೆ.ಪಿ.ಹೆಗಡೆ, ವಿ.ಗಣಪತಿ ಭಟ್, ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ ಇವರ ನೆಚ್ಚಿನ ಭಾಗವತರು.
ಕೇಂದ್ರದಲ್ಲಿ ಇರುವಾಗ ಗುರುಗಳಾದ ಶ್ರೀ ವೈಕುಂಠ ನಾಯ್ಕ ಕೋಟ ಇವರ ಜೊತೆಯಲ್ಲಿ ವೇಷ ಮಾಡಿದ್ದೆ. ಈಗ ವೇಷ ಮಾಡುವ ಆಸಕ್ತಿ ಇಲ್ಲ ಎಂದು ಹೇಳುತ್ತಾರೆ ಹೆಗಡೆ.

ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ನೋಡಿದ್ದೆಲ್ಲವನ್ನು, ಕೇಳಿದ್ದೆಲ್ಲವನ್ನು ಸೂಪರ್, ಅದ್ಭುತ ಅಂತ ಹೊಗಳಿ ಅವರು ಕಲೆಯನ್ನು ಕಡೆಗಣಿಸುತ್ತಿದ್ದಾರೆ.

ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಆಸಕ್ತರಿಗೆ ಸಾಧ್ಯವಾದಷ್ಟು ನಾನು ಕಲಿತದ್ದನ್ನು ಕಲಿಸುವ ಆಸೆ. ಅಲ್ಲದೆ ಇವತ್ತಿನ ಯುವಕಲಾವಿದರು ಪ್ರಜ್ಞಾವಂತರಿದ್ದಾರೆ. ಅವರನ್ನು ಹುರಿದುಂಬಿಸಬೇಕು. ರಂಗಭೂಮಿ ಮತ್ತಷ್ಟು ಅವರನ್ನು ಅವರಿಂದ ಪ್ರಯೋಗಗಳನ್ನು ನಿರೀಕ್ಷಿಸುತ್ತೇನೆ.

ಶಿರಸಿ, ಸಿಗಂದೂರು, ಬಚ್ಚೆಗಾರು ಮೇಳಗಳಲ್ಲಿ ತಿರುಗಾಟ ಮಾಡಿ ಪ್ರಸ್ತುತ ಬೆಂಗಳೂರಿನ ಯಕ್ಷದೇಗುಲ ಸಂಸ್ಥೆಯಲ್ಲಿ ೨೩ ವರ್ಷದಿಂದ ಸಂಸ್ಥೆಯ ಪ್ರಧಾನ ಭಾಗವತನಾಗಿದ್ದೇನೆ. ಅಲ್ಲದೆ ಯಶಸ್ವಿ ಯಕ್ಷಗಾನ ಕಲಿಕಾ ಕೇಂದ್ರ ತೆಕ್ಕಟ್ಟೆ, ಕುಂದಾಪುರ ಇದರಲ್ಲಿ ಭಾಗವತಿಕೆಯಲ್ಲಿ ಗುರುಗಳಾಗಿ ಕೆಲಸ ಮಾಡುತ್ತಿದ್ದಾರೆ.
ಹಿಂದುಸ್ತಾನಿ ಸಂಗೀತ ಕೇಳುವುದು, ಪುಸ್ತಕ ಓದುವುದು ಇವರ ಹವ್ಯಾಸಗಳು.


ಶ್ರೀ ಸಂತೋಷ್ ಕುಮಾರ್ ಇವರ “ಸಂಗಮ ವೇದಿಕೆ ನಿಟ್ಟೂರು" ಇವರಿಂದ ಹುಟ್ಟೂರಿನಲ್ಲಿ ನಡೆದ ಸನ್ಮಾನ ಮರೆಯುವಂತಿಲ್ಲ ಎಂದು ಹೇಳುತ್ತಾರೆ ಲಂಬೋದರ ಹೆಗಡೆ.

೧೯.೧೧.೨೦೧೧ ರಂದು ರೇವತಿ ಇವರನ್ನು ವಿವಾಹವಾಗಿ ಮಗಳು ಆರಭಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395