ಯಕ್ಷ ಸಾಧಕರು ೧೩೫
ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸೋದರಿಯರು.
ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಅನೇಕ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಮಹಿಳಾ ಕಲಾವಿದೆಯರು ನಂದನ ಮಾಲೆಂಕಿ ಹಾಗೂ ವಂದನ ಮಾಲೆಂಕಿ.
ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ತಾಲೂಕಿನ ಬೆಳ್ಳೂರಿನ ರಾಘವೇಂದ್ರ ಮಾಲೆಂಕಿ ಹಾಗೂ ಮಾಧವಿ ದಂಪತಿಯ ಪುತ್ರಿಯರು ನಂದನ ಮಾಲೆಂಕಿ ಹಾಗೂ ವಂದನಾ ಮಾಲೆಂಕಿ.
ನಂದನ ಮಾಲೆಂಕಿ ಅವರು ಭಾಗವತಿಕೆಯಲ್ಲಿ ಮಿಂಚುತ್ತಿರುವ ಪ್ರತಿಭೆ ಹಾಗೂ ವಂದನ ಮಾಲೆಂಕಿ ಚಂಡೆ ಮದ್ದಳೆಯಲ್ಲಿ ಮಿಂಚುತ್ತಿರುವ ಪ್ರತಿಭೆ.
ನಂದನ ಮಾಲೆಂಕಿ :-
೨೩.೦೪.೨೦೦೩ರಂದು ನಂದನ ಮಾಲೆಂಕಿ ಅವರ ಜನನ. ದ್ವಿತೀಯ ವರ್ಷದ ಪದವಿ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ರಾಘವೇಂದ್ರ ಮಾಲೆಂಕಿ ನಂದನ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ೨ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ದೇವಿ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು. ಹಿಂದೋಳ ಇವರ ನೆಚ್ಚಿನ ರಾಗ. ಬಲಿಪ ನಾರಾಯಣ ಭಾಗವತರು, ಶ್ರೀಮತಿ ಲೀಲಾವತಿ ಬೈಪಡಿತ್ತಾಯರು, ಅಮೃತಾ ಅಡಿಗ ಇವರ ನೆಚ್ಚಿನ ಭಾಗವತರು. ಕು.ವಂದನ ಮಾಲೆಂಕಿ, ಕೌಶಿಕ್ ರಾವ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ರಾಮಪ್ರಕಾಶ ಕಲ್ಲೂರಾಯ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ಸಂಗೀತ, ಯಕ್ಷಗಾನ ಇವರ ಹವ್ಯಾಸಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯುವ ಜನಾಂಗಕ್ಕೆ ಪ್ರೇರಣೆ ಆಗುವಂತಹ, ಅವಕಾಶ ಇರುವಂತಹ ಕಲೆ ನಮ್ಮ ಯಕ್ಷಗಾನ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ತುಂಬಾ ಪ್ರೋತ್ಸಾಹ ನೀಡಿ ಕಲಾವಿದರ ಪ್ರತಿಭೆಯನ್ನು ಗುರುತಿಸುವಂತಹ ಪ್ರೇಕ್ಷಕರು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಅನೇಕ ಯಕ್ಷ ಸಾಧಕರ ಸಾಧನೆಯನ್ನು ಅನುಸರಿಸಿ ಚಿಗುರೆಲೆ ಆಗಿರುವಂತಹ ನಾನು ಯಕ್ಷರಂಗದಲ್ಲಿ ವೃಕ್ಷವಾಗಿ ಬೆಳೆಯಬೇಕೆಂದು ಆಸೆ.
ವಂದನ ಮಾಲೆಂಕಿ:-
೧೭.೦೭.೨೦೦೯ ರಂದು ವಂದನ ಅವರ ಜನನ. ೮ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ರಾಘವೇಂದ್ರ ಮಾಲೆಂಕಿ ಅವರು ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ೩ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ದೇವೀ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು. ಅಮೃತ ಅಡಿಗ, ಭವ್ಯಶ್ರೀ ಮಂಡೆಕ್ಕೋಲು, ಪದ್ಯಾಣ ಗಣಪತಿ ಭಟ್ ಇವರ ನೆಚ್ಚಿನ ಭಾಗವತರು. ದಿವ್ಯಶ್ರೀ ನಾಯಕ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ರಾಮಪ್ರಕಾಶ ಕಲ್ಲೂರಾಯ, ಕೌಶಿಕ್ ರಾವ್, ಚೈತನ್ಯ ಕೃಷ್ಣ ಪದ್ಯಾಣ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಅನೇಕ ಯಕ್ಷಸಾಧಕರ ಸಾಧನೆಯನ್ನು ಅನುಸರಿಸಿ ಚಿಗುರೆಲೆ ಆಗಿರುವಂತಹ ನಾನು ಯಕ್ಷರಂಗದಲ್ಲಿ ವೃಕ್ಷವಾಗಿ ಬೆಳೆಯಬೇಕೆಂದು ಆಸೆ.
ಕಟೀಲು, ಕೊಲ್ಲಂಗಾನ ಮೇಳ ( ಹವ್ಯಾಸಿ ಕಲಾವಿದೆ ಆಗಿ) ತಿರುಗಾಟ ಮಾಡಿದ್ದಾರೆ. ಪೇಂಟಿಂಗ್ ಹಾಗೂ Pencil Sketching ಇವರ ಹವ್ಯಾಸಗಳು. ‘ಗಡಿನಾಡ ಪ್ರತಿಭೆ’ ಎಂಬ ಪ್ರಶಸ್ತಿ ಇವರಿಗೆ ದೊರೆತಿರುತ್ತದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment