ಯಕ್ಷ ಸಾಧಕರು ೧೩೮
ಯಕ್ಷ ನಾದದ ಸಂಪನ್ನ ಪ್ರತಿಭೆ
ಕರಾವಳಿಯ ಗಂಡು ಕಲೆ ಎಂದೇ ಪ್ರಖ್ಯಾತಿ ಪಡೆದ ಯಕ್ಷಗಾನ ಕಲೆ ಸಾಧಿಸುವ ಛಲ ಇದ್ದರೆ ಯಾರಿಗೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಭರತ್ ಚಂದನ್ ಕೋಟೇಶ್ವರ.
೧೮.೦೬.೧೯೯೯ ರಂದು ಸುಶೀಲ ಹಾಗೂ ದಿ| ಗೋವಿಂದ ಮೋಗವೀರ ಇವರ ಮಗನಾಗಿ ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಅತ್ತೆಯ ಮಗ, ಹಿಮ್ಮೇಳದ ಸವ್ಯಸಾಚಿಯಾಗಿದ್ದ ದಿ| ರವಿರಾಜ್ ಕೋಟೇಶ್ವರ ಅವರು ಭರತ್ ಚಂದನ್ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ.
ತಾಳಭ್ಯಾಸ - ಡಾ| ರವಿಕುಮಾರ್ ಸೂರಾಲು , ಶ್ರೀ ರವಿ ಬಾಳ್ಕುದ್ರು ನಂತರ ಯಶಸ್ವಿ ಕಲಾವೃಂದದ ಆಶ್ರಯದಲ್ಲಿ ಶ್ರೀ ದೇವದಾಸ್ ರಾವ್ ಕೂಡ್ಲಿಯವರು, ಶ್ರೀ ಎನ್.ಜಿ ಹೆಗಡೆ ಹಾಗೂ ಶ್ರೀ ಎ.ಪಿ ಫಾಟಕ್ ಇವರ ಯಕ್ಷಗಾನ ಗುರುಗಳು. ಯಕ್ಷಗಾನ ರಂಗದಲ್ಲಿ ಒಟ್ಟು ೬ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ ಭರತ್ ಚಂದನ್ ಕೋಟೇಶ್ವರ.
ರಾಕೇಶ್ ಮಲ್ಯ, ರಾಮಕೃಷ್ಣ ಮಂದಾರ್ತಿ ,ದಿ| ರವಿರಾಜ್ ಕೋಟೇಶ್ವರ , ಗಣೇಶ್ ಗಾಂವ್ಕರ್ ಇವರ ನೆಚ್ಚಿನ ಚೆಂಡೆ ವಾದಕರು.
ದೇವದಾಸ್ ರಾವ್ ಕೂಡ್ಲಿ, ಶಂಕರ್ ಭಾಗ್ವತ್ ,ರಾಘವೇಂದ್ರ ಹೆಗಡೆ ಯಲ್ಲಾಪುರ , ಎನ್.ಜಿ ಹೆಗಡೆ , ಎ.ಪಿ ಫಾಟಕ್ ಇವರ ನೆಚ್ಚಿನ ಮದ್ದಳೆ ವಾದಕರು.
ರಾಘವೇಂದ್ರ ಮಯ್ಯ,ನಗರ ಸುಬ್ರಹ್ಮಣ್ಯ ಆಚಾರ್, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಸುರೇಶ್ ಶೆಟ್ಟಿ ಶಂಕರನಾರಾಯಣ ಇವರ ನೆಚ್ಚಿನ ಭಾಗವತರು.
ಪಂಚವಟಿ, ವಾಲಿವಧೆ, ಸುದರ್ಶನ ವಿಜಯ, ಪಾಪಣ್ಣವಿಜಯ ಗುಣಸುಂದರಿ ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಾಲಕ್ಕೆ ತಕ್ಕಂತೆ ಎಲ್ಲಾ ಬದಲಾಗುವುದು ಅನಿವಾರ್ಯ, ಆದರೆ ಮೂಲವನ್ನೆ ಮರೆಸುವಂತೆ ಹೊಸತನದ ಆಕ್ರಮಣ ಆಗಬಾರದು. ಯಕ್ಷಗಾನ ಅಂದರೆ ಹೀಗೆ ಇತ್ತು ...ಈಗ ಹೀಗಾಗಿದೆ ಎನ್ನುವ ಕಲ್ಪನೆ ಕಲಾವಿದರಾದವರೆಲ್ಲರೂ ತಿಳಿದಿರಬೇಕಾದ ವಿಷಯ. ಹೆಚ್ಚುಹೆಚ್ಚಾಗಿ ಸಾಂಪ್ರದಾಯ ಬದ್ಧ ಕಾರ್ಯಕ್ರಮ , ಪ್ರಾತ್ಯಕ್ಷಿಕೆ ನಡೆಯಬೇಕು ಅದಕ್ಕೆ ಪ್ರೇಕ್ಷಕರಾಗಿ ಕಲಾವಿದರೂ ಸಹ ಭಾಗವಹಿಸಬೇಕು...
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಲೆಯ ಬಗ್ಗೆ ತಿಳಿದಿರುವವರು ವೀಕ್ಷಕರಾಗಿ ಬರುವುದು ಕಡಿಮೆ... ಕೇವಲ ಆಕರ್ಷಣೆಗೆ ಒಳಗಾಗದೆ ಪ್ರಾಮಾಣಿಕವಾಗಿ ಕಲಾವಿದರನ್ನು ಹುರಿದುಂಬಿಸುವ ಪ್ರೇಕ್ಷಕರು ಯಕ್ಷಗಾನಕ್ಕೆ ಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ತಬಲಾ ,ಮೃದಂಗದಂತೆ ಮದ್ದಳೆಯನ್ನೂ ಸಹ ಸೋಲೋ ಪ್ರದರ್ಶನಕ್ಕೆ ಸಿದ್ಧಪಡಿಸಬೇಕೆಂಬ ಒಂದು ವಿಭಿನ್ನ ಕಲ್ಪನೆ ಇದೆ.
ಕಲೆ , ಕಲಾವಿದರಿಗಾಗಿ kalajeevi official ಎಂದು ಈಗಾಗಲೇ ರಚಿಸಿದ ಯೂಟ್ಯೂಬ್ ಚಾನೆಲ್ ಅಲ್ಲಿ ಯಕ್ಷಗಾನದ ಇನ್ನೂ ಉತ್ತಮ ದೃಶ್ಯಗಳನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ.
ಹಾಡುವುದು, Thread art, ಸಂಗೀತ ಕೇಳುವುದು ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment