ಯಕ್ಷ ಸಾಧಕರು ೧೪೩
ಬಡಗಿನ ಭರವಸೆಯ ಯುವ ಚಂಡೆಗಾರ.
ಕರಾವಳಿಯ ಗಂಡು ಕಲೆ ಎಂದೇ ಪ್ರಖ್ಯಾತಿ ಪಡೆದ ಯಕ್ಷಗಾನ ಕಲೆ ಸಾಧಿಸುವ ಛಲ ಇದ್ದರೆ ಯಾರಿಗೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಕುಮಾರ್ ಅಮೀನ್.
೨೦.೧೦.೧೯೯೧ ರಂದು ರಾಮ ಮರಕಾಲ ಹಾಗೂ ಜಲಜ ಅಮೀನ್ ಇವರ ಮಗನಾಗಿ ಜನನ. ೮ನೇ ತರಗತಿವರೆಗೆ ವಿದ್ಯಾಭ್ಯಾಸ. ತಾಯಿ ಹಾಗು ಅಕ್ಕ - ಅಣ್ಣಂದಿರ ಪ್ರೇರಣೆಯಿಂದ ಇವರು ಯಕ್ಷಗಾನ ರಂಗಕ್ಕೆ ಬಂದರು.
ಬಸವ ಮರಕಾಲ ಮುಂಡಾಡಿ ಇವರ ಚೆಂಡೆ ಗುರುಗಳು. ಹಾರಡಿ ರಮೇಶ್ ಗಾಣಿಗ ಇವರ ಹೆಜ್ಜೆಗಾರಿಕೆ ಗುರುಗಳು.
ನಗರ ಸುಬ್ರಮಣ್ಯ ಆಚಾರ್ಯ, ರವೀಂದ್ರ ಶೆಟ್ಟಿ ಹೊಸಂಗಡಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಗಣೇಶ್ ನಾಯ್ಕ್ ಯಾಡಮೊಗೆ, ನಗರ ಅಣ್ಣಪ್ಪ ಶೆಟ್ಟಿ ಇವರ ನೆಚ್ಚಿನ ಭಾಗವತರು.
ರಾಕೇಶ್ ಮಲ್ಯ, ರಾಘವೇಂದ್ರ ಹೆಗಡೆ ಯಲ್ಲಾಪುರ, ನಾಗರಾಜ್ ನಾಯಕ್ ಯಡಮೊಗೆ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.
ಅಭಿಮನ್ಯು ಕಾಳಗ, ರಾಮಾಯಣ ಮಹಾಭಾರತ, ಚಂದ್ರಮುಖಿ ಸೂರ್ಯಸಖಿ ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ:-
ಅನೇಕ ಬದಲಾವಣೆಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದೆ.
ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ:-
ಪ್ರೇಕ್ಷಕರಿಂದ ಉತ್ತಮವಾದ ಬೆಂಬಲ ಸಿಗುತ್ತಿದೆ. ವಿಮರ್ಶೆ ಮಾಡುವ, ಅಭಿಪ್ರಾಯ ತಿಳಿಸುವ ಅಧಿಕಾರ ಅವರಿಗಿದೆ.
ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಪರಿಪೂರ್ಣ ಉತ್ತಮ ಕಲಾವಿದನಾಗಿ ಬೆಳೆದು ಯಕ್ಷರಂಗದಲ್ಲಿ ಮುಂದುವರಿಯಬೇಕೆಂಬ ಬಯಕೆ ಇದೆ.
ತಿರುಗಾಟ ಮಾಡಿದ ಮೇಳಗಳು:-
ಮಂದಾರ್ತಿ ಮೇಳದಲ್ಲಿ ೨ ವರ್ಷ (ವೇಷ), ಮಾರಣಕಟ್ಟೆ ಮೇಳದಲ್ಲಿ ೧ ವರ್ಷ (ವೇಷ), ಸೌಕೂರು ಮೇಳದಲ್ಲಿ ಚಂಡೆ ಹಾಗೂ ವೇಷ ೧ ವರ್ಷ, ಸಿಗಂದೂರು ಮೇಳದಲ್ಲಿ ೧ ವರ್ಷ ಪ್ರಧಾನ ಚಂಡೆವಾದಕರಾಗಿ, ಕಮಲಶಿಲೆ ಮೇಳದಲ್ಲಿ ೮ ವರ್ಷ ಚಂಡೆವಾದಕರಾಗಿ, ಪ್ರಸ್ತುತ ೨೦೨೨ಕ್ಕೆ ಪೆರ್ಡೂರು ಮೇಳದಲ್ಲಿ ಚೆಂಡೆವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು ೧೪ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಯಕ್ಷಗಾನ, ಪುಸ್ತಕ ಓದುವುದು, ದೇವಸ್ಥಾನಕ್ಕೆ ಭೇಟಿ ಇವರ ಹವ್ಯಾಸಗಳು. ಇವರಿಗೆ ಹೆನ್ನಾಬೈಲ್ ಫ್ರೆಂಡ್ಸ್ ವತಿಯಿಂದ ಸನ್ಮಾನ ದೊರೆತಿರುತ್ತದೆ.
ಕುಮಾರ್ ಅಮೀನ್ ಅವರು ರಮ್ಯ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment