ಯಕ್ಷ ಸಾಧಕರು ೧೪೪
ಯಕ್ಷರಂಗದ ನವರಸ ಕಲಾವಿದ ಭಾಸ್ಕರ ಬಿಲ್ಲವ ತುಂಬ್ರಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಂಬ್ರಿ ಹತ್ತಿರ ಹೆಸಿಗೆ ಎನ್ನುವ ಹಳ್ಳಿಯಲ್ಲಿ ಬಸವನಾಯ್ಕ ಮತ್ತು ಮಂಜಮ್ಮ ದಂಪತಿಯರ ಆರನೇ ಪುತ್ರನಾಗಿ ಭಾಸ್ಕರ ಬಿಲ್ಲವ ತುಂಬ್ರಿ ಜನನ. ಪ್ರಸ್ತುತ ಕುಂದಾಪುರ ತಾಲೂಕಿನ ಕಾಳವರ ಗ್ರಾಮದ ಬಡಾಗುಡ್ಡೆ ಸಾಂತಾವರದಲ್ಲಿ ವಾಸ. ಗುರುಕುಲ ಪದ್ಧತಿಯಲ್ಲಿ ಕನ್ನಡ ಅಭ್ಯಾಸ.
ಮುಳ್ಳಿಕಟ್ಟೆ, ಕೊಪ್ಪರಿಗೆ ಮನೆ ರವಿರಾಜ ಶೆಟ್ಟಿ ಇವರಿಂದ ಅಕ್ಷರಾಭ್ಯಾಸ ಮತ್ತು ಯಕ್ಷಗಾನಕ್ಕೆ ರಂಗಕ್ಕೆ ಬರಲು ಪ್ರೇರಣೆ.
ನೆಚ್ಚಿನ ಪಾತ್ರಗಳು:
ಭೀಮ, ವಲಲ, ಕೌರವ, ವೀರಮಣಿ, ಶಲ್ಯ, ಬಲರಾಮ, ಚಂದಗೋಪ, ಸಂಪ್ರದಾಯದ ಎರಡು ಮುಂಡಾಸಿನ ಕಿರಾತ, ಕಂಸ, ಶತ್ರುಘ್ನ, ಸೀತಾ ಪರಿತ್ಯಾಗದ ಲಕ್ಷ್ಮಣ, ಸುಗ್ರೀವ, ಬಲರಾಮ, ದೇವೇಂದ್ರ, ಹಾಗೂ ಕಾಲ್ಪನಿಕ ಪ್ರಸಂಗದ ವಿಶಿಷ್ಟ ಪಾತ್ರಗಳು.
ಹಿರಿಯ ಕಲಾವಿದರ ಒಡನಾಟ:
ಮಹಾಬಲ ಹೆಗಡೆ ಕೆರೆಮನೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಕುಮಟಾ ಗೋವಿಂದ ನಾಯ್ಕರು, ಐರೋಡಿ ಗೋವಿಂದಪ್ಪ, ಆರ್ಗೋಡು ಮೋಹನದಾಸ ಶೆಣೈ, ವಾಸುದೇವ ಸಾಮಗರು, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ವಿಶ್ವನಾಥ ಶೆಟ್ಟಿ ಸಿದ್ಧಕಟ್ಟೆ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಕೊಳಗಿ ಅನಂತ ಹೆಗಡೆ, ಯಾಜಿ, ಕೊಂಡದಕುಳಿ.
ಸಹಪಾಠಿ ಕಲಾವಿದರು:-
ಚಂದ್ರಹಾಸ ಹುಡುಗೋಡು, ಗಣಪತಿ ಹೆಗಡೆ ಕಣ್ಣಿಮನೆ, ವಿದ್ಯಾಧರ ಜಲವಳ್ಳಿ, ಮಂಕಿ ಈಶ್ವರ ನಾಯ್ಕ್, ಕುಮಟಾ ಗಣಪತಿ ನಾಯ್ಕ್, ನಾಗೇಂದ್ರ ರಾವ್ ಉಪ್ಪುಂದ, ಥಂಡಿ ಶ್ರೀಪಾದ ಭಟ್.
ಒಡನಾಡಿದ ಸ್ತ್ರೀವೇಷಧಾರಿಗಳು:-
ಎಂ. ಕೆ.ರಮೇಶ್ ಆಚಾರ್ಯ, ಕೊಕ್ಕಡ ಈಶ್ವರ ಭಟ್, ಬೆಳಂಜೆ ಸುಂದರ್ ನಾಯ್ಕ್, ಭಾಸ್ಕರ ಜೋಷಿ ಶಿರಳಗಿ, ರಾಮ ನಾಯರಿ ಬ್ರಹ್ಮಾವರ, ಶಶಿಕಾಂತ ಶೆಟ್ಟಿ ಕಾರ್ಕಳ, ಯಲಗುಪ್ಪ, ನಿಲ್ಕೋಡು.
ಒಡನಾಡಿದ ಹಾಸ್ಯಗಾರರು:-
ಹಳ್ಳಾಡಿ, ಸೀತಾರಾಮ ಕುಮಾರ್ ಕಟೀಲ್, ರಮೇಶ್ ಭಂಡಾರಿ ಮುರೂರು, ಶ್ರೀಧರ ಭಟ್ ಕಾಸರಕೋಡು, ರವೀಂದ್ರ ದೇವಾಡಿಗ, ಕ್ಯಾದಗಿ ಮಹಾಬಲೇಶ್ವರ ಭಟ್, ಅರುಣ್ ಜಾರ್ಕಳ.
ಹಿಮ್ಮೇಳ ಕಲಾವಿದರ ಒಡನಾಟ:-
ಸುಬ್ರಹ್ಮಣ್ಯ ಧಾರೇಶ್ವರ, ಕೆ. ಪಿ ಹೆಗಡೆ, ಕೊಳಗಿ, ಸುರೇಶ್ ಶೆಟ್ಟಿ, ಹೆಮ್ಮನಬೈಲು ರಾಮಚಂದ್ರ, ರಾಘವೇಂದ್ರ ಮಯ್ಯ, ಹೊಸಾಳು ಉದಯ್, ರಾಘವೇಂದ್ರ ಆಚಾರ್ಯ, ಚಂದ್ರಕಾಂತ್ ಮೂಡುಬೆಳ್ಳೆ, ಶಂಕರ ಭಟ್ ಬ್ರಹ್ಮೂರು.
ದುರ್ಗಪ್ಪ ಗುಡಿಗಾರ್, ಗಜಾನನ ದೇವಾಡಿಗ, ಸುನಿಲ್ ಭಂಡಾರಿ, ಶ್ರೀಧರ ಭಂಡಾರಿ, ಪರಮೇಶ್ವರ ಭಂಡಾರಿ ಕರ್ಕಿ, ಶಿವಾನಂದ ಕೋಟ, ನಾಗರಾಜ ಭಂಡಾರಿ, ರಾಕೇಶ್ ಮಲ್ಯ.
ತೆಂಕುತಿಟ್ಟಿನ ಆತ್ಮೀಯ ಒಡನಾಡಿಗಳು:
ಪದ್ಯಾಣ ಗಣಪತಿ ಭಟ್, ಸಂಪಾಜೆ ಶೀನಪ್ಪ ರೈ, ಶಿವರಾಮ ಜೋಗಿ, ಪುತ್ತೂರು ಶ್ರೀಧರ ಭಂಡಾರಿ, ಉಮೇಶ್ ಶೆಟ್ಟಿ ಉಬರಡ್ಕ, ಚಂದ್ರಶೇಖರ ಧರ್ಮಸ್ಥಳ, ಅಮ್ಮಣ್ಣಾಯರು, ರಘುರಾಮ ಹೊಳ್ಳ, ಕನ್ನಡಿಕಟ್ಟೆ ರವಿಚಂದ್ರ, ಪಟ್ಲ ಸತೀಶ್ ಶೆಟ್ಟಿ, ಪುಣಿಚಿತ್ತಾಯ, ದಿವಾಕರ ರೈ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವಾಸುದೇವ ರಂಗಾಭಟ್, ರಾಧಾಕೃಷ್ಣ ನಾವಡ ಮಧೂರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಹೀಗೆ ಹೇಳುತ್ತಾರೆ:-
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹೀಗೆ ಹೇಳುತ್ತಾರೆ:-
ಕೆಲವರು ಯಕ್ಷಗಾನ ಕಲೆಯ ಪ್ರೇಕ್ಷಕರು ಆಗಿದ್ದು, ಕೆಲವರು ನಿರ್ದಿಷ್ಟ ಕಲಾವಿದನ ಅಭಿಮಾನಿಗಳಾಗಿ ವ್ಯಕ್ತಿನಿಷ್ಠ ಅಭಿಮಾನಿಗಳಾಗುತ್ತಾರೆ. ಇದು ಯಕ್ಷಗಾನಕ್ಕೆ ಮಾರಕ. ಹಾಗಾಗಿ ಒಬ್ಬ ಕಲಾವಿದನ ಅಭಿಮಾನಿ ಆಗದೆ ಯಕ್ಷಗಾನದ ಅಭಿಮಾನಿಯಾಗಿ ವಸ್ತುನಿಷ್ಠ ಅಭಿಮಾನ ತೋರುವುದು ಯಕ್ಷಗಾನಕ್ಕೆ ಪೂರಕ ಅನ್ನುವುದು ಇವರ ಅಭಿಪ್ರಾಯ.
ಕೋಡಂಗಿ ವೇಷಧಾರಿಯಾಗಿ ಸೌಕೂರು ಮೇಳದಲ್ಲಿ 1 ವರ್ಷ, ಗೋಳಿಗರಡಿ ಮೇಳದಲ್ಲಿ 1 ವರ್ಷ, ನಾಗರಕೊಡಿಗೆ ಮೇಳದಲ್ಲಿ 1 ವರ್ಷ, ಕಮಲಶಿಲೆ ಮೇಳದಲ್ಲಿ 1 ವರ್ಷ, ಬಚ್ಚಗಾರು (ಡೇರೆ) ಮೇಳದಲ್ಲಿ 2 ವರ್ಷ, ಕುಮಟಾ (ಡೇರೆ) ಮೇಳದಲ್ಲಿ 2 ವರ್ಷ, ಶಿರಸಿ ಮೇಳ (ಡೇರೆ) 3 ವರ್ಷ, ಪೆರ್ಡೂರು ಮೇಳ (ಡೇರೆ) 19 ವರ್ಷ, ಮತ್ತು ಸಾಲಿಗ್ರಾಮ (ಡೇರೆ) ಮೇಳದಲ್ಲಿ 9 ವರ್ಷ ತಿರುಗಾಟ ಮಾಡಿ ಪ್ರಸ್ತುತ ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಬಂಟರ ಹಾಗೂ ಬಿಲ್ಲವ ಸಂಘ ಮುಂಬೈ ಸೇರಿದಂತೆ ನೂರಾರು ಸಂಘ ಸಂಸ್ಥೆಗಳಿಂದ ಗೌರವ ಸಮರ್ಪಣೆ.
ಭಾಸ್ಕರ ಬಿಲ್ಲವ ತುಂಬ್ರಿ ಅವರು ಜಯಶ್ರೀ ಇವರನ್ನು ಮದುವೆಯಾಗಿ ಮಕ್ಕಳಾದ ಮಗಳು ಶ್ರುತಿ (Public Relation Officer), ಮಗ ಶಶಾಂಕ್ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- Deepak poojary kurady, Vijay Kumar Photography, Praveen Perdoor, Sudarshan Mandrathi, Uday Kairangala, Pradumana Somayaji.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment