ಯಕ್ಷ ಸಾಧಕರು ೧೪೭
ಚಂಡೆಯ ಚತುರ
ಕರಾವಳಿಯ ಗಂಡು ಕಲೆ ಎಂದೇ ಪ್ರಖ್ಯಾತಿ ಪಡೆದ ಯಕ್ಷಗಾನ ಕಲೆ ಸಾಧಿಸುವ ಛಲ ಇದ್ದರೆ ಯಾರಿಗೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ರವಿ ಆಚಾರ್ಯ ಕಾಡೂರು.
ಶ್ರೀಯುತ ಚಂದ್ರ ಆಚಾರ್ ಹಾಗೂ ಗಿರಿಜಾ ದಂಪತಿಯ ಮಗನಾಗಿ ೨೦.೦೬.೧೯೭೬ ರಂದು ಜನನ. ೭ ನೇ ತರಗತಿ ವರೆಗೆ ವಿದ್ಯಾಭ್ಯಾಸ. ರಾಮಕೃಷ್ಣ ಮಂದಾರ್ತಿ ಇವರು ಯಕ್ಷಗಾನ ಚೆಂಡೆ ಕಲಿಯಲು ಪ್ರೇರಣೆ. ಅಣ್ಣಪ್ಪ ಗಾಣಿಗ ಹಾರಾಡಿ ಇವರ ಗುರುಗಳು.
ರಾಮಕೃಷ್ಣ ಮಂದಾರ್ತಿ, ರಾಕೇಶ್ ಮಲ್ಯ, ಶಿವಾನಂದ ಕೋಟ, ರಾಘವೇಂದ್ರ ಹೆಗಡೆ ಯಲ್ಲಾಪುರ, ಪರಮೇಶ್ವರ ಭಂಡಾರಿ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ನಗರ ಸುಬ್ರಹ್ಮಣ್ಯ ಆಚಾರ್, ಪ್ರಸನ್ನ ಭಟ್ ಬಾಳ್ಕಲ್, ಹಿಲ್ಲೂರು ರಾಮಕೃಷ್ಣ ಹೆಗಡೆ, ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಇವರ ನೆಚ್ಚಿನ ಭಾಗವತರು. ಬಹುತೇಕ ಎಲ್ಲ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದಲ್ಲಿ ವೇಷ ಮಾಡುವ, ಭಾಗವತಿಕೆ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರಾರಂಭದಲ್ಲಿ ವೇಷಕ್ಕಾಗಿ ಮೇಳಕ್ಕೆ ಸೇರಿದ್ದು, ಹಾಗೆ ಭಾಗವತಿಕೆಯಲ್ಲಿ ಆಸಕ್ತಿ ಇದ್ದು ಕೆಲವೊಮ್ಮೆ ಸಂಗೀತ ಮಾಡಿದ್ದು ಉಂಟು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಹೀಗೆ ಹೇಳುತ್ತಾರೆ:-
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹೀಗೆ ಹೇಳುತ್ತಾರೆ:-
ಕೆಲವರು ಯಕ್ಷಗಾನ ಕಲೆಯ ಪ್ರೇಕ್ಷಕರು ಆಗಿದ್ದು ಕೆಲವರು ನಿರ್ದಿಷ್ಟ ಕಲಾವಿದನ ಅಭಿಮಾನಿಗಳಾಗಿ ವ್ಯಕ್ತಿನಿಷ್ಠ ಅಭಿಮಾನಿಗಳಾಗುತ್ತಾರೆ ಇದು ಯಕ್ಷಗಾನಕ್ಕೆ ಮಾರಕ ಹಾಗಾಗಿ ಒಬ್ಬ ಕಲಾವಿದನ ಅಭಿಮಾನಿ ಆಗದೆ ಯಕ್ಷಗಾನದ ಅಭಿಮಾನಿಯಾಗಿ ವಸ್ತುನಿಷ್ಠ ಅಭಿಮಾನ ತೋರುವುದು ಯಕ್ಷಗಾನಕ್ಕೆ ಪೂರಕ ಅನ್ನುವುದು ಇವರ ಅಭಿಪ್ರಾಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಆಸಕ್ತ ಮಕ್ಕಳಿಗೆ ಚಂಡೆ ಕಲಿಸಿ ಯಕ್ಷಗಾನಕ್ಕೆ ಉತ್ತಮ ಕಲಾವಿದರನ್ನು ಕೊಡುವ ಯೋಜನೆ ಇದೆ.
ಮಂದಾರ್ತಿ, ಅಮೃತೇಶ್ವರಿ, ಹಾಲಾಡಿ, ಪೆರ್ಡೂರು, ಗೋಳಿಗರಡಿ, ಸೌಕೂರು ಮೇಳದಲ್ಲಿ ತಿರುಗಾಟ ಮಾಡಿರುವ ಇವರು ಯಕ್ಷಗಾನ ರಂಗದಲ್ಲಿ ಒಟ್ಟು ೩೫ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ಮರದ ಕೆಲಸ, ಕೃಷಿ ಇವರ ಹವ್ಯಾಸಗಳು.
ರವಿ ಆಚಾರ್ಯ ಕಾಡೂರು ಅವರು ಜಯ ಇವರನ್ನು ಮದುವೆಯಾಗಿ ಮಕ್ಕಳಾದ ಪ್ರೀತಮ್ & ಪೃಥ್ವಿನ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment