ಯಕ್ಷ ಸಾಧಕರು ೧೫೦
ಯಶಸ್ವಿ ಯಕ್ಷಸಂಪನ್ನೆ
ಯಕ್ಷಗಾನ ಗೀತ - ವಾದ್ಯ- ನೃತ್ಯಗಳ ಸಮ್ಮಿಶ್ರ ಕಲೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಮಾತಾಗಿರುವ ಈ ಬಯಲಾಟದ ಕಲೆ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಇದು ಹವ್ಯಾಸಿ ಕಲೆಯಾಗಿರುವಂತೆ ವೃತ್ತಿಕಲೆಯೂ ಆಗಿದೆ. ಇಂತಹ ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವವರು ಕಿರಣ್ ಆರ್ ಪೈ ಶಿವಮೊಗ್ಗ.
ಕುಂದಾಪುರ ತಾಲೂಕು ಹಳ್ಳಾಡಿಯ ದಿ. ಶ್ರೀ ಹೆಚ್ ಸುಬ್ರಾಯ ಮಲ್ಯ ಹಾಗೂ ಶ್ರೀಮತಿ ಶೋಭಾ ಮಲ್ಯ ದಂಪತಿಯರ ಸುಪುತ್ರಿಯಾಗಿ ೧೭.೦೮.೧೯೬೮ ರಂದು ಜನನ. ಬಡಗುತಿಟ್ಟಿನ ಸುಪ್ರಸಿದ್ಧ ಚೆಂಡೆ ವಾದಕರು ಶ್ರೀಯುತ ಹೆಚ್ ರಾಕೇಶ್ ಮಲ್ಯ ಇವರ ತಮ್ಮ. ತಂದೆ ಸುಬ್ರಾಯ ಮಲ್ಯ ಇವರ ಮೊದಲ ಯಕ್ಷಗಾನದ ಗುರುಗಳು, ನಂತರ ಪರಮೇಶ್ವರ ಹೆಗ್ಡೆ ಇವರ ಯಕ್ಷಗಾನದ ಗುರುಗಳು. ಬಿಕಾಂ, ಎಂ ಎ ಕನ್ನಡ ಇವರ ವಿದ್ಯಾಭ್ಯಾಸ.
ಚಿಕ್ಕವಳಿದ್ದಾಗ ತಂದೆಯಿಂದ ಕಲಿತ ಯಕ್ಷಗಾನ. ನಂತರ ಕಾಲೇಜ್ ದಿನಗಳಲ್ಲಿ ಅದು ಮುಂದುವರೆದು ಈಗ ಫಲ ಕೊಡುತ್ತಿದೆ. ಸದ್ಯಕ್ಕೆ ಅತಿಥಿ ಕಲಾವಿದೆಯಾಗಿ ಭಾಗವಹಿಸುತ್ತಿದ್ದೇನೆ. ಸುಮುಖ ಕಲಾಕೇಂದ್ರ ವನ್ನು ಸ್ಥಾಪಿಸಿ ಸುಮಾರು 25- 30 ಮಕ್ಕಳಿಗೆ, ಮಹಿಳೆಯರಿಗೆ ಯಕ್ಷಗಾನ ಕಲಿಸಿಕೊಟ್ಟು ಪ್ರದರ್ಶನ ನೀಡಿದ್ದಾರೆ .ಕಲಾಕೇಂದ್ರದ ವಾರ್ಷಿಕೋತ್ಸವ ಸಂದರ್ಭದಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ "ದಿವಂಗತ ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿಯನ್ನು" ಯಕ್ಷಗಾನ ಕ್ಷೇತ್ರದಲ್ಲಿ ದುಡಿದ ಹಿರಿಯ ವ್ಯಕ್ತಿ ಗಳಿಗೆ ಕೊಡುತ್ತಾ ಬಂದಿದ್ದಾರೆ.
ರೇಡಿಯೋ, ಶಂಕರ ಚಾನೆಲ್, ಚಂದನ ವಾಹಿನಿಯಲ್ಲಿ ಯಕ್ಷಗಾನ ಕಾರ್ಯಕ್ರಮ ಕೊಟ್ಟಿದ್ದೇನೆ ಮತ್ತು ಮಕ್ಕಳಿಂದ ಕೊಂಕಣಿ ಯಕ್ಷಗಾನ ಕಾರ್ಯಕ್ರಮ ಕೊಟ್ಟಿದ್ದೇನೆ.
೬ ಪ್ರಸಂಗಗಳನ್ನು ಕೊಂಕಣಿ ಭಾಷೆಗೆ ತರ್ಜುಮ ಮಾಡಿಸಿದ್ದೇನೆ. ಮುಖ್ಯವಾಗಿ ಚಕ್ರವ್ಯೂಹ, ಸುಧನ್ವಾರ್ಜುನ, ಸೀತಾ ಸ್ವಯಂವರ, ಜಾಂಬವತಿ ಕಲ್ಯಾಣ, ಉತ್ತರನ ಪೌರುಷ, ಕಾಲಯವನ ಸಂಹಾರ, ಇತ್ಯಾದಿ. ಕೊಂಕಣಿ ಯಕ್ಷಗಾನ c.d ಅಮೆರಿಕಾದಲ್ಲಿಯೂ ಬಿಡುಗಡೆಗೊಂಡಿದೆ. ಯಕ್ಷಗಾನ ರಂಗದಲ್ಲಿ ಯಾವ ಪಾತ್ರ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಪೈ ಅವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಹೀಗೆ ಹೇಳುತ್ತಾರೆ:-
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹೀಗೆ ಹೇಳುತ್ತಾರೆ:-
ಕೆಲವರು ಯಕ್ಷಗಾನ ಕಲೆಯ ಪ್ರೇಕ್ಷಕರು ಆಗಿದ್ದು, ಕೆಲವರು ನಿರ್ದಿಷ್ಟ ಕಲಾವಿದನ ಅಭಿಮಾನಿಗಳಾಗಿ ವ್ಯಕ್ತಿನಿಷ್ಠ ಅಭಿಮಾನಿಗಳಾಗುತ್ತಾರೆ. ಇದು ಯಕ್ಷಗಾನಕ್ಕೆ ಮಾರಕ. ಹಾಗಾಗಿ ಒಬ್ಬ ಕಲಾವಿದನ ಅಭಿಮಾನಿ ಆಗದೆ ಯಕ್ಷಗಾನದ ಅಭಿಮಾನಿಯಾಗಿ ವಸ್ತುನಿಷ್ಠ ಅಭಿಮಾನ ತೋರುವುದು ಯಕ್ಷಗಾನಕ್ಕೆ ಪೂರಕ ಅನ್ನುವುದು ಇವರ ಅಭಿಪ್ರಾಯ.
ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಯಕ್ಷಗಾನ ಹೇಳಿಕೊಡುತ್ತಿದ್ದೇನೆ ಹಾಗೂ ಕೊಂಕಣಿ ಮತ್ತು ಕನ್ನಡ ಭಾಷೆಯಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ. ತಬಲಾದಲ್ಲಿ ಸೀನಿಯರ್ ಕೋರ್ಸ್ ಮಾಡುತ್ತಿದ್ದು ಸುಮಾರು ಮಕ್ಕಳಿಗೆ ಭಜನೆಗೆ ನುಡಿಸಲು ತಬಲಾ ಹೇಳಿಕೊಡುತ್ತಿದ್ದೇನೆ. ಈ ಎಲ್ಲಾ ಕಾರ್ಯಕ್ಕೂ ಪತಿ ಹಾಗೂ ಮಕ್ಕಳ ಸಹಕಾರ ಇದ್ದ ಕಾರಣ ನಾನು ಈ ಕ್ಷೇತ್ರದಲ್ಲಿ ಇಷ್ಟು ಸಾಧನೆ ಮಾಡಲು ಸಹಾಯವಾಯಿತು. ಎಲ್ಲವೂ ಶ್ರೀ ಕೃಷ್ಣಾನುಗ್ರಹ ಎಂಬುದು ಕಿರಣ್ ಪೈಯವರ ಮನದಾಳದ ಮಾತುಗಳು.
ಜಿಲ್ಲಾ ಧಾರ್ಮಿಕ ಪರಿಷತ್ ( ಮುಜರಾಯಿ ಇಲಾಖೆ) ಸದಸ್ಯೆ ಹಾಗೂ ಹಲವು ಮಂಡಳಿಗಳಲ್ಲಿ ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಆಗಿ ಪೈಯವರು ಕೆಲಸ ಮಾಡುತ್ತಿದ್ದಾರೆ.
ಕಿರಣ್ ಆರ್ ಪೈ ಇವರಿಗೆ ದೊರೆತಿರುವ ಸನ್ಮಾನ ಹಾಗೂ ಪ್ರಶಸ್ತಿಗಳು:-
೧. ರಂಗರತ್ನ ಪ್ರಶಸ್ತಿ ( ಕೊಂಕಣಿ ಸಾಹಿತ್ಯ ಸಮ್ಮೇಳನ) ಉಪ್ಪುಂದ 11.04.2015.
೨. ಶ್ರೀ ಕೃಷ್ಣ ನೃಸಿಂಹಾನುಗ್ರಹ ಪ್ರಶಸ್ತಿ (ಉಡುಪಿ ಪಲಿಮಾರು ಮಠ) 20.02.2015.
೩. ಕುಂದಶ್ರೀ ಯಕ್ಷ ಕಲಾ ರತ್ನ ಪ್ರಶಸ್ತಿ - ದೊಂಬಿವಿಲಿ.
೪. ಸಪ್ತ ಸ್ವರ ಸಂಗೀತಾ ಸಭಾ ಸನ್ಮಾನ - ಶಿವಮೊಗ್ಗ.
೫. ತುಳು ಕನ್ನಡಿಗರು - ಮುಂಬಯಿ.
೬. ಕುಂದ ಕನ್ನಡ ಬಳಗ - ಮುಂಬಯಿ.
೭. Inner wheel ಶಿವಮೊಗ್ಗ - ರೋಟರಿ ಕ್ಲಬ್.
೮. ಕಲಾಕುಂಚ ದಾವಣಗೆರೆ.
೯. ಜಿ. ಎಸ್.ಬಿ. ವೆಲ್ಫೇರ್ ಸೆಂಟರ್ ಮುಂಬಯಿ.
೧೦. ಜಿ. ಎಸ್.ಬಿ. ಕಾಶಿಮಠ ಬೆಂಗಳೂರು.
೧೧. ಲಕ್ಷ್ಮೀನಾರಾಯಣ ಮಹಮಾಯಿ ದೇವಸ್ಥಾನ ಅಂಕೋಲಾ.
೧೨. ಹರಕೆರೆ ಟೆಂಪಲ್ ಅವಾರ್ಡ್ ಶಿವಮೊಗ್ಗ.
೧೩. ಯಕ್ಷ ಮಹಿಳಾ ರತ್ನ ಅವಾರ್ಡ್ ಹೈದರಾಬಾದ್.
೧೪. ಜಿ. ಎಸ್. ಬಿ. ಸಮಾಜ ಚೆನ್ನೈ.
ಕಿರಣ್ ಆರ್ ಪೈ ಅವರು ಡಾ.ಎಂ.ಬಿ ರವಿ ಪೈ ಇವರನ್ನು ಮದುವೆಯಾಗಿ ಮಕ್ಕಳಾದ ನಿವೇದಿತಾ ಪೈ ಎಂ.ಆರ್ ಹಾಗೂ ಅರ್ಜುನ್ ಪೈ ಎಂ.ಆರ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment