ಯಕ್ಷ ಸಾಧಕರು ೧೫೧

ವಿದ್ವತ್ ಪೂರ್ಣ ಕಲಾಸಿರಿ

೧೧.೦೭.೧೯೮೦ ರಂದು ಶ್ರೀ ವಿಜಯೇಂದ್ರ ಟಿ.ಎನ್ ಹಾಗೂ  ಶ್ರೀಮತಿ ವೇದಾವತೀ ಇವರ ಮಗನಾಗಿ ಟಿ.ವಿ.ಅಜಿತ್ ಕಾರಂತ ಅವರ ಜನನ. ಎಸ್.ಎಸ್.ಎಲ್.ಸಿ ಹಾಗೂ ವೇದಾಧ್ಯಯನ ಇವರ ವಿದ್ಯಾಭ್ಯಾಸ. ತಂದೆ ಹಾಗೂ ಅಜ್ಜ ಕಲಾವಿದರಾಗಿದ್ದುದೇ ಕಾರಂತರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಶ್ರೀ ಹಳ್ಳದಾಚೆ ಪುಟ್ಟಶಾಮಯ್ಯ, ಕೇದಿಗೆಮನೆ ಚನ್ನಯ್ಯ, ಶ್ರೀಕಂಠಭಟ್, ಶಿವಶಂಕರ ಭಾಗವತರು ಇವರ ಯಕ್ಷಗಾನ ಗುರುಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗದ ಅಧ್ಯಯನ ಹಾಗೂ ಅದಕ್ಕೆ ಮೂಲವಾಗಿರುವ ಪುರಾಣ ಅವಲೋಕನ ಮಾಡಿ ತಯಾರಿಯಾಗುತ್ತೇನೆ ಎಂದು ಹೇಳುತ್ತಾರೆ ಕಾರಂತ್.




ಯಕ್ಷಗಾನದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ವಿಷ್ಣು, ಸಂಜಯ, ಅಕ್ರೂರ, ವಿದುರ, ರಾಮ ನೆಚ್ಚಿನ ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಬೇಸರವಿದೆ,ಅವಕಾಶಗಳು ವಿಪುಲವಾಗಿದ್ದರೂ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಬಹಳ ಬೇಸರವಿದೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ವ್ಯಕ್ತಿನಿಷ್ಠರಾಗಿಯೇ (ಕೆಲವು ಕಲಾವಿದರನ್ನು ಮಾತ್ರ ಬೆಂಬಲಿಸಿ) ಯಕ್ಷಗಾನವನ್ನು ನೋಡುತ್ತಾರೆಯೇ ಹೊರತು ವಸ್ತುನಿಷ್ಠರಾಗಿಲ್ಲ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಹೌದು ಇದೆ. ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಸಂಸ್ಥೆಯ ಎಲ್ಲಾ ಕಾರ್ಯಗಳಲ್ಲೂ ಸಕ್ರಿಯನಾಗಿರುವುದು ಹಾಗೂ ಪ್ರಸಂಗರಚನೆ, ಪ್ರಸಂಗಾವಲೋಕನ, ಪುಸ್ತಕ ಬರೆಯಯವುದು.




ಶ್ರೀ ಚನ್ನಕೇಶವ ಯಕ್ಷಗಾನ ಮಂಡಳಿ,ಬಾಳೆಹೊಳೆ ಹಾಗೂ ಶ್ರೀ.ವೆಂಕಟೇಶ್ವರ ಕಲಾಸಂಘ ಹೊನ್ನವಳ್ಳಿ, ಶೃಂಗೇರಿ  ಮೇಳಗಳಲ್ಲಿ ಹವ್ಯಾಸಿಯಾಗಿ ವೇಷ ಮಾಡಿದ್ದಾರೆ.( ನಿರಂತರ ತಿರುಗಾಟವಿಲ್ಲ). ಶ್ರೀ ವೆಂಕಟೇಶ್ವರ ಕಲಾಸಂಘದ ಸನ್ಮಾನ, ಹೇರೂರಿನಲ್ಲಿ ತಾಳಮದ್ದಲೆ ಕೂಟದಲ್ಲಿ  ಸನ್ಮಾನ ಹೀಗೆ ಕೆಲವು ಸಂಘ  ಸಂಸ್ಥೆ ಇವರ ಸಾಧನೆ ಗುರುತಿಸಿ ಸನ್ಮಾನಿಸಿದ್ದಾರೆ. ಪುರಾಣಗಳನ್ನು ಓದುವುದು, ಪುಸ್ತಕ ಬರಹ, ಯಕ್ಷಗಾನ ಕೇಳುವುದು ಇವರ ಹವ್ಯಾಸಗಳು.

ಟಿ.ವಿ.ಅಜಿತ್ ಕಾರಂತ ಅವರು ಸೌ.ಅನು ಇವರನ್ನು ಮದುವೆಯಾಗಿ ಮಗ ಅನುಜಿತ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395