ಯಕ್ಷ ಸಾಧಕರು ೧೬೦


ಯಕ್ಷಕಲೈಸಿರಿ

ಯಕ್ಷಗಾನ ಗಂಡು ಮೆಟ್ಟಿದ ಕಲೆ ಎಂದು ಲಾಗಾಯ್ತಿನಿಂದಲೂ ಕರೆಸಿಕೊಂಡು ಮೆರೆದ ಕಮನೀಯ ಕಲೆ. ಇದರಲ್ಲಿ ಹೆಂಗಳೆಯರು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದಿದ್ದಾರೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಸರ್ವಾಂಗ ಸುಂದರವಾದ ಸಮಷ್ಟಿ ಕಲೆ, ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಅದು ಚೆಂಡೆ, ಮದ್ದಳೆಯಿರಲಿ, ನಾಟ್ಯ, ಗಾಯನವಿರಲಿ, ಅರ್ಥಗಾರಿಕೆಯೇ ಇರಲಿ; ಇಲ್ಲಿ ಮಹಿಳಾ ಸ್ವಾತಂತ್ರ್ಯವಿದೆ ಮತ್ತು ಪ್ರೋತ್ಸಾಹವೂ ಇದೆ. ಲಿಂಗ ಸಮಾನತೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಸಾಧಿಸಿದ ಕಲಾಪ್ರಕಾರ ಯಕ್ಷಗಾನವೆಂದರೂ ತಪ್ಪಲ್ಲ. ಇಂತಹ ಒಂದು ಸುಂದರ ಕಲೆಯಲ್ಲಿ ನಾವು ಇಂದು ಪರಿಚಯ ಮಾಡುವ ಕಲಾವಿದೆ ಸಿಂಧುಶ್ರೀ ಹೆಬ್ಬಾರ್.

೨೬.೦೬.೧೯೯೫ ರಂದು ಶಂಕರನಾರಾಯಣ ಹೆಬ್ಬಾರ್ ಹಾಗೂ ಜಯಲಕ್ಷ್ಮೀ ಹೆಬ್ಬಾರ್ ಇವರ ಮಗಳಾಗಿ ಜನನ. M.A In English ಇವರ ವಿದ್ಯಾಭ್ಯಾಸ, ಪ್ರಸ್ತುತ ಇಂಗ್ಲೀಷ್ ನಲ್ಲಿ PhD ಮಾಡುತ್ತಿದ್ದಾರೆ ಹಾಗೂ ಬೆಂಗಳೂರಿನ RNS First Grade college ನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಂಧುಶ್ರೀ ಅವರ ತಂದೆಗೆ ಯಕ್ಷಗಾನದ ಕಲೆಯ ಮೇಲಿನ ಆಸಕ್ತಿ ಹಾಗೂ ಇವರ ಅಜ್ಜಿ ಮಾರ್ವಿ ಹೆಬ್ಬಾರರ ಕುಟುಂಬದವರು ಆದ ಕಾರಣ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ. ಪ್ರಭಾಕರ ಭಟ್, ಪ್ರಸಾದ್ ಮೊಗೆಬೆಟ್ಟು, ವಿಷ್ಣುಮೂರ್ತಿ ನಾಯಕ್ ಬೇಳೂರು, ಸುಬ್ರಾಯ ಹೆಬ್ಬಾರ್ ಇವರ ಯಕ್ಷಗಾನದ ಗುರುಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ನೀವು:-
ಹೆಬ್ಬಾರ್ ರವರ ಗಂಡ ಯಕ್ಷಗಾನ ಭಾಗವತರು ಹಾಗೂ ಯಕ್ಷಗಾನ ಗುರುಗಳು; ಹಾಗಾಗಿ ಅವರಲ್ಲಿ ಚರ್ಚಿಸಿಯೇ ಪ್ರಸಂಗ ಹಾಗೂ ವೇಷದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ಭಸ್ಮಾಸುರ ಮೋಹಿನಿ, ದಕ್ಷಯಜ್ಞ, ಭೀಷ್ಮ ವಿಜಯ, ಲವ ಕುಶ, ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಮೋಹಿನಿ, ಕೃಷ್ಣ, ವಿಷ್ಣು ನೆಚ್ಚಿನ ವೇಷಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯುವ ಪೀಳಿಗೆ ಯಕ್ಷಗಾನದ ಕಡೆಗೆ ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. ಶಾಲೆ ಕಾಲೇಜುಗಳಲ್ಲಿ ಯಕ್ಷಗಾನ ಪ್ರದರ್ಶನ ಹೆಚ್ಚುತ್ತಿರುವುದು ಖುಷಿಯ ಸಂಗತಿ.

ಇವತ್ತಿನ ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- 
ಪ್ರೇಕ್ಷಕರು ಪ್ರಜ್ಞಾವಂತರಿದ್ದಾರೆ,  ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ, ಇದೆಲ್ಲ ಒಳ್ಳೆಯ ಬೆಳವಣಿಗೆ.

ಭಾಷಣ ಹಾಗೂ ಚರ್ಚಾ ಸ್ಪರ್ಧೆ, ನೃತ್ಯದಲ್ಲಿ ಭಾಗವಹಿಸಿರುತ್ತಾರೆ ಇದರ ಕುರಿತಾಗಿ ಹಲವು ಪ್ರಶಸ್ತಿಗಳು ಬಂದಿರುತ್ತದೆ. ಚಂದನ ವಾಹಿನಿಯ ರಾಜ್ಯ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಇನ್ನಿತರ ಪ್ರಶಸ್ತಿಗಳು ಸಿಂಧುಶ್ರೀ ಹೆಬ್ಬಾರ್ ರವರಿಗೆ ದೊರೆತಿರುತ್ತದೆ.


ಸಿಂಧುಶ್ರೀ ಹೆಬ್ಬಾರ್ ಅವರು ಭಾಗವತರಾದ ಸುಬ್ರಾಯ ಹೆಬ್ಬಾರ್ ಬಲಗೋಣು ಇವರನ್ನು ೦೪.೦೬.೨೦೧೭ ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651


Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395