ಯಕ್ಷ ಸಾಧಕರು ೧೫೫
ಯಕ್ಷ ಪ್ರತಿಭಾ ಚೈತನ್ಯ
ಯಕ್ಷಗಾನವೆಂಬ ಗಂಡುಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಿದ್ದರೆ ಅದು ಭಾಗ್ಯವೇ ಹೌದು. ತಾನು ಈ ಮೇರು ಕಲೆಯ ಒಂದು ಅಂಗವಾಗಿದ್ದೇನೆ ಎಂಬ ಸಂತೋಷ ಖಂಡಿತ ಕಲಾವಿದನಿಗೆ ಆಗಿಯೇ ಆಗುತ್ತದೆ. ಎಲ್ಲರಿಗೂ ಈ ಅವಕಾಶ ಸಿದ್ಧಿಸದು. ಅವಕಾಶ ಸಿದ್ಧಿಸಿದವರೆಲ್ಲರೂ ಕಾಣಿಸಿಕೊಳ್ಳಲಾರರು. ಕಲಾಮಾತೆಯ ಅನುಗ್ರಹವೂ ಬೇಕು. ಕಲಾವಿದನು ಆಲಸಿ ಆಗಿರದೆ ಸತತಾಭ್ಯಾಸಿ ಆಗಿರಬೇಕು. ಜೊತೆಗೆ ಯೋಗ ಭಾಗ್ಯಗಳು ಬೇಕು ಹೀಗೆ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಪ್ರತಿಭೆ ನಿತಿನ್ ಆಚಾರ್ಯ ಪಡುಬಿದ್ರಿ.
ಉಡುಪಿ ಜಿಲ್ಲೆಯ ಪಡುಬಿದ್ರಿಯ ರತ್ನಕರ ಆಚಾರ್ಯ ಹಾಗೂ ಸುನಂದ ಇವರ ಮಗನಾಗಿ ೦೬.೧೨.೧೯೯೩ ರಂದು ಜನನ. ೧೦ನೇ ತರಗತಿ ವರೆಗೆ ವಿದುಭ್ಯಾಸ. ತಂದೆ ರತ್ನಕರ ಆಚಾರ್ಯ ಇವರು ನಿತಿನ್ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಯಕ್ಷಗಾನವನ್ನು ಹೆಚ್ಚಾಗಿ ನೋಡಿಯೇ ಕಲಿತದ್ದು ಪರಿಪೂರ್ಣವಾಗಿ ಯಾರಿಂದಲು ಕಲಿತಿಲ್ಲ ಅಲ್ಪ ಸ್ವಲ್ಪ ರಾಮಕೃಷ್ಣ ಆಚಾರ್ಯ ನಂದಿಕೂರು ಮತ್ತು ಶಿವರಾಮ ಪಂಜ, ದಿನಕರ್ ಪಚನಾಡಿ ಇವರಲ್ಲಿ ಕಲಿತೆ ಎಂದು ಹೇಳುತ್ತಾರೆ ನಿತಿನ್ ಆಚಾರ್ಯ ಪಡುಬಿದ್ರಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲಿಗೆ ಭಾಗವತರಲ್ಲಿ ಕೇಳಿ ಮತ್ತೆ ದೊಡ್ಡ ಕಲಾವಿದರಲ್ಲಿ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ನಿತಿನ್ ಆಚಾರ್ಯ ಪಡುಬಿದ್ರಿ ಹೇಳುತ್ತಾರೆ.
ಪುರಾಣದ ಎಲ್ಲಾ ಹಾಗೂ ತುಳು ಪ್ರಸಂಗ ಎಲ್ಲಾ ಇವರ ನೆಚ್ಚಿನ ಪ್ರಸಂಗಗಳು. ಸುದರ್ಶನ, ಸುದನ್ವ, ಬಬ್ರುವಾಹನ, ಪರಶುರಾಮ, ಕಿರೀಟ ವೇಷ, ಹಾಸ್ಯ, ಹೆಣ್ಣು ಬಣ್ಣ, ಎಲ್ಲಾ ಪುಂಡು ವೇಷ ಇವರ ನೆಚ್ಚಿನ ವೇಷಗಳು.
ಅಪ್ಪ ಮತ್ತೆ ನಂಗೆ ಒಟ್ಟಿಗೆ ಸನ್ಮಾನ ಕಳೆದ ವರ್ಷ ಬಜ್ಪೆಯಲ್ಲಿ ದೊರೆತೀತು ಅದು ಜೀವನದ ಒಂದು ಅವಿಸ್ಮರಣೀಯ ಕ್ಷಣ ಎಂದು ಹೇಳುತ್ತಾರೆ ನಿತಿನ್ ಆಚಾರ್ಯ ಪಡುಬಿದ್ರಿ.
ಸುರತ್ಕಲ್ ಮಹಾಗಣಪತಿ ಮೇಳ, ಬಪ್ಪನಾಡು ಮೇಳ, ಚಿರುಂಬ ಭಗವತಿ ಮೇಳ, ಬಪ್ಪನಾಡು ಮೇಳ, ಎಲ್ಲಾ ಮೇಳದಲ್ಲಿ ಅತಿಥಿ ಕಲಾವಿದನಾಗಿ ಪ್ರಸ್ತುತ ಸಸಿಹಿತ್ಲು ಮೇಳದಲ್ಲಿ ೬ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.
ಮೊದಲಿಗಿಂತ ಈಗ ಯಕ್ಷಗಾನ ಸ್ಥಿತಿ ಉತ್ತಮವಾಗಿದೆ. ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಕಲಾವಿದರನ್ನು ಗೌರವಿಸಿ ಸಹಕರಿಸಿ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
೨ ಕಡೆಯಲ್ಲಿ ನಾಟ್ಯ ತರಬೇತಿ ಕೊಡ್ತಾ ಇದೇನೆ ಇನ್ನು ತುಂಬಾ ಮಕ್ಕಳನ್ನು ತಯಾರು ಮಾಡ್ಬೇಕು. ಮೇಳದಲ್ಲಿ ಒಳ್ಳೆ ವೇಷ ಕೊಡ್ತಾ ಇದಾರೆ ಕೊಡುವ ಪಾತ್ರಕ್ಕೆ ನ್ಯಾಯ ಕೊಟ್ಟು ಮೇಳಕ್ಕೆ ಹೆಸರು ಭರಿಸುವ ಆಸೆ, ಅಪ್ಪನಿಗೂ ಕೀರ್ತಿ ತಂದು ಕೊಡ್ಬೇಕು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment