ಯಕ್ಷ ಸಾಧಕರು ೧೬೨

ಯಕ್ಷ ಪಾದರಸ ಶಿವಮೂರ್ತಿ ರಾವ್ ತಾರೆಕೊಡ್ಲು.

ಯಕ್ಷಗಾನ ಎಂಬುದೊಂದು ಜನಪದ ಕಲೆ. ಇದರಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲ. ಶಾಸ್ತ್ರೀಯ ಅಂಶಗಳನ್ನೊಳಗೊಂಡ ಜನಪದ ಕಲೆ ಯಕ್ಷಗಾನ. ಇಂತಹ ಶಾಸ್ತ್ರೀಯ ಕಲೆಯಲ್ಲಿ ಮಿಂಚುತ್ತಿರುವ ಕಲಾವಿದ ಶಿವಮೂರ್ತಿ ರಾವ್ ತಾರೆಕೊಡ್ಲು.

ಉಡುಪಿ ಜಿಲ್ಲೆಯ ಸಿದ್ದಾಪುರ ಸನಿಹ ತಾರೆಕೊಡ್ಲುನ ಮಂಜುನಾಥ್ ರಾವ್ ಹಾಗೂ ವೇದಾವತಿ ರಾವ್ ಇವರ ಮಗನಾಗಿ ೩೦.೧೧.೧೯೯೧ ರಂದು ಜನನ. ಹೊಸಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ. ಸಹೋದರ ಉದಯ್ ಕುಮಾರ ರಾವ್ ತಾರೆಕೊಡ್ಲು ಶಿವಮೂರ್ತಿಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಆನಂದ ದೇವಾಡಿಗ ಕಮಲಶಿಲೆ ಹಾಗೂ ದಿ.ದಿನೇಶ್ ಮಡಿವಾಳ ಹೆನ್ನಾಬೈಲ್ ಇವರ ಯಕ್ಷಗಾನದ ಗುರುಗಳು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ತೀರಾ :-
ಹಿರಿಯ ಕಲಾವಿದರಲ್ಲಿ ಪಾತ್ರದ ವಿವರ ಹಾಗೂ ವ್ಯಾಪ್ತಿ ಆಳವಾಗಿ ತಿಳಿದು, ಪಾತ್ರಕ್ಕೆ ಬೇಕಾಗುವುದನ್ನು ಹಿರಿಯ ಕಿರಿಯ ಕಲಾವಿದರಲ್ಲಿ  ಸಮಾಲೋಚಿಸಿ, ಮುಂದಿನ ದಿನಗಳಲ್ಲಿ ಆ ಪಾತ್ರಕ್ಕೆ ಬೇಕಾಗುವ ಮೌಲ್ಯವನ್ನು ಹೆಚ್ಚು ತಿಳಿಯುವುದಕ್ಕೆ ಪುಸ್ತಕದ ಮೊರೆ ಹೋಗುತ್ತೇನೆ ಎಂದು ಶಿವಮೂರ್ತಿ ಅವರು ಹೇಳುತ್ತಾರೆ.

ಗದಾಯುದ್ಧ, ಕಂಸ ವಧೆ, ಶ್ರೀ ದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಆಯಾಯ ಮೇಳದ ಕ್ಷೇತ್ರ ಮಹಾತ್ಮೆ, ಶ್ರೀ ರಾಮ ನಿರ್ಯಾಣ, ಶ್ರೀ ಕೃಷ್ಣ ಪರಂಧಾಮ ನೆಚ್ಚಿನ ಪ್ರಸಂಗಗಳು.
ದೇವಿ ಮಹಾತ್ಮೆಯ ಬ್ರಹ್ಮ, ಮನ್ಮಥ, ರವಿಕೀರ್ತಿ,ಕೃಷ್ಣ, ಶ್ರೀನಿವಾಸ, ಅಭಿಮನ್ಯು, ಬಬ್ರುವಾಹನ, ವೃಷಸೇನ, ರುದ್ರಕೋಪ, ಸಿತಾಕೇತ, ಲೋಹಿತಾನೇತ್ರ, ವಿದ್ಯುನ್ಮಾಲಿ ನೆಚ್ಚಿನ ವೇಷಗಳು. ಸಿಗಂದೂರು ಮೇಳದಲ್ಲಿ ಅನಿವಾರ್ಯತೆಗೆ ಮಹಿಷಾಸುರ ವೇಷವನ್ನು ಮಾಡಿರುತ್ತಾರೆ ಶಿವಮೂರ್ತಿ.



ಯಕ್ಷಗಾನದ ಇಂದಿನ ಸ್ಥಿತಿ ಗತಿ:-
"ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಭಗೂ" ಎಂಬ ಹಾಗೆ ಯಕ್ಷಗಾನಕ್ಕೆ ಹೊಸತನ ಬೇಕು ಹಾಗಂತ ಔಚಿತ್ಯಕ್ಕೆ ಕುಂದಾಗಬಾರದು. ಔಚಿತ್ಯ ಪೂರ್ಣವಾಗಿ ಯಕ್ಷಗಾನ ಇರಲಿ. ಯಾವುದೊ ಹೊಸ ಪ್ರಸಂಗಕ್ಕೆ ಸಿನಿಮೀಯ ಹಾಡುಗಳನ್ನು ತರುವುದು, ಇವಾಗಿನ ವರ್ತಮಾನ ಕಾಲದಲ್ಲಿ ನಡೆದ ರಾಜಕೀಯ ವಿಷಯ ತರುವುದೋ ಹಾಗೂ ಕೋಮುಗಲಭೆಗೆ ಅವಕಾಶ ಕೊಡುವ ಸಂಭಾಷಣೆ ಮಾಡುವುದನ್ನು ನಿಷೇಧಿಸಬೇಕು & ಕಾಲಮಿತಿ ಯಕ್ಷಗಾನದಿಂದ ಯುವ ಕಲಾವಿದರಿಗೆ ತುಂಬಾ ಆಘಾತ ಉಂಟು ಮಾಡಿದೆ, ಈ ಕಾಲಮಿತಿ ಯಕ್ಷಗಾನ ಎನ್ನುವುದು ಯುವ ಕಲಾವಿದರಿಗೆ ಹಾಗೂ ಹಳೆಯ ಕಲಾವಿದರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಸರಿ. ಇನ್ನಾದರೂ ಕಲಾವಿದರು ಹಾಗೂ ಸರಕಾರದವರು ಎಚ್ಚೆತ್ತುಕೊಳ್ಳಬೇಕು ಎಂದು ಶಿವಮೂರ್ತಿ ರಾವ್ ತಾರೆಕೊಡ್ಲು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಮೊದಲಿನ ಹಾಗೆ ಯಕ್ಷಗಾನ ಅಲ್ಲ. ಈ ಬದಲಾದ ಕಾಲದಲ್ಲಿ ಯಕ್ಷಗಾನ ಬದಲಾಗಿದೆ. ಪ್ರೇಕ್ಷಕರು ಬದಲಾಗುತ್ತ ಇದ್ದಾರೆ. ಸಂತೋಷ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನ ರಂಗದಲ್ಲಿ ಸಮರ್ಥ ಕಲಾವಿದನಾಗಬೇಕೆನ್ನುವುದೇ ಯೋಜನೆ, ಯೋಜನೆ ಹಾಕೊಳ್ಳುವಂತ ದೊಡ್ಡ ಕಲಾವಿದನೂ ನಾನಲ್ಲ ಎಂದು ಶಿವಮೂರ್ತಿ ರಾವ್ ತಾರೆಕೊಡ್ಲು ಹೇಳುತ್ತಾರೆ.

ಯಕ್ಷಗಾನ ರಂಗದಲ್ಲಿ ಭಾಷಾ ಪಾಂಡಿತ್ಯ ಹೆಚ್ಚಿಸಿಕೊಳ್ಳುವ ಹಾಗೂ ಪ್ರಸಂಗದಲ್ಲಿನ ವೇಷದ ವ್ಯಾಪ್ತಿಯಾ ಆಳ ತಿಳಿಯುದಕ್ಕೆ ತಾಳ ಮದ್ದಳೆ ನೋಡುವುದರ ಜೊತೆಗೆ ತಾಳಮದ್ದಳೆಯಲ್ಲಿ ಭಾಗವಹಿಸಿದ್ದಾರೆ. ಕೊಂಡದಕುಳಿ ರಾಮಚಂದ್ರ ಹೆಗ್ಗಡೆ, ಯಕ್ಷ ಕವಿ ಶಿವ ಕುಮಾರ ಅಳಗೊಡು, ಎಂ.ಕೆ.ರಮೇಶ್  ಆಚಾರ್, ಸತೀಶ್ ಶೆಟ್ಟಿ ಮೂಡುಬಗೆ, ಡಾ.ಜಗದೀಶ್ ಶೆಟ್ಟಿ ಸಿದ್ದಾಪುರ, ಆದಿತ್ಯ ಭಟ್ ಯಡೂರು ಇವರು ಎಲ್ಲರ ಜೊತೆಗೆ ತಾಳಮದ್ದಳೆಯಲ್ಲಿ ಪಾತ್ರವನ್ನು ಮಾಡಿರುತ್ತಾರೆ.


ಶನೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಅಜ್ರಿ ಚೋನಮನೆ ಮೇಳ, ಕಮಲಶಿಲೆ ಮೇಳ, ಸಿಗಂದೂರು ಮೇಳ, ಪ್ರಸ್ತುತ  ಮಾರಣಕಟ್ಟೆ A ಮೇಳದಲ್ಲಿ ಯಕ್ಷಗಾನ ತಿರುಗಾಟ ಮಾಡುತ್ತಿದ್ದಾರೆ.

ಕಲಾ ಸಂಗಮ ಪುರಸ್ಕಾರ, ಯಕ್ಷ ಪಾದರಸ, ಯಕ್ಷ ರಂಗದ ಸೆಳೆ ಮಿಂಚು ಅಂತ ಬಿರುದು.
ಪುಸ್ತಕ ಓದುವುದು, ಯಕ್ಷಗಾನ ತಾಳಮದ್ದಳೆ ನೋಡುವುದು, ಕೇಳುವುದು, ಯಕ್ಷಗಾನ ವಿಡಿಯೋ ನೋಡುವುದು ಇವರ ಹವ್ಯಾಸಗಳು.

ಶಿವಮೂರ್ತಿ ರಾವ್ ತಾರೆಕೊಡ್ಲು ಅವರು ನಾಗಶ್ರೀ ಇವರನ್ನು ೧೮.೦೫.೨೦೨೦ ರಂದು ಮದುವೆಯಾಗಿ ಮಗ ಬ್ರಾಹ್ಮಿನ್ ರಾವ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395