ಯಕ್ಷ ಸಾಧಕರು ೧೭೧

"ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಕಲಾವಿದ ನಿತ್ಯಾನಂದ ನಾಯಕ್."

ಉಡುಪಿ ಜಿಲ್ಲೆಯ ಪುತ್ತಿಗೆ ಗ್ರಾಮದ ಗಣೇಶ್ ನಾಯಕ್ ಹಾಗೂ ಸುಶೀಲಾ ನಾಯಕ್ ಇವರ ತೃತೀಯ ಪುತ್ರರಾಗಿ ೦೨.೦೭.೧೯೭೪ ರಂದು ನಿತ್ಯಾನಂದ ನಾಯಕ್ ಅವರ ಜನನ. ೬ ನೇ ತರಗತಿ ವರೆಗೆ ವಿದ್ಯಾಭ್ಯಾಸ. ಸ್ವಂತ ಆಸಕ್ತಿಯಿಂದ ಯಕ್ಷಗಾನ ರಂಗಕ್ಕೆ ಬಂದವರು ನಿತ್ಯಾನಂದ ನಾಯಕ್. ಸುಬ್ರಹ್ಮಣ್ಯ ಮುದ್ರಾಡಿ ಇವರ ಯಕ್ಷಗಾನ ಗುರುಗಳು.







ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :-
ಭಾಗವತರ ನಿರ್ದೇಶನದಂತೆ ತಮ್ಮ ಪಾತ್ರಕ್ಕೆ ತಕ್ಕಂತೆ ನಾವು ರಂಗ ಪ್ರದೇಶದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ ಎಂದು ನಾಯಕ್ ಅವರು ಹೇಳುತ್ತಾರೆ.

ಭಸ್ಮಾಸುರ ಮೋಹಿನಿ, ಮಹಿಷಮರ್ದಿನಿ, ಜಾಂಬವತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಪುಣ್ಯಕೋಟಿ, ಕಂಸವಧೆ, ದಕ್ಷ ಯಜ್ಞ, ಅಶೋಕ ಸುಂದರಿ, ಶನೀಶ್ವರ ಮಹಾತ್ಮೆ, ಹಿಡಿಂಬ ವಿವಾಹ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಭಸ್ಮಾಸುರ, ದೇವಿ, ಮಹಿಷಾಸುರ, ನಾರದ, ದೇವೇಂದ್ರ, ಪದ್ಮಗಂದಿನಿ, ಹುಲಿ, ಪಾರ್ವತಿ, ವೀರಭದ್ರ, ಚಾನುರರಮುಷ್ಟಿಕ ಇವರ ನೆಚ್ಚಿನ ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನವು ಅಳಿಯುತ್ತಿದೆ ಎನ್ನುವುದಕ್ಕಿಂತ ತನ್ನ ಹಳೆಯ ರೂಪುರೇಷೆಗಳನ್ನು ಬದಲಿಸಿಕೊಳ್ಳುತ್ತಿದೆ .






ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಲ್ಲಿ ನಾವು ಎರಡು ಪ್ರೇಕ್ಷಕರ ಗುಂಪನ್ನು ಮಾಡಬಹುದು ಒಂದು ಊರಿನ ಕಡೆಯಲ್ಲಿ ನಡೆಯುವ ಯಕ್ಷಗಾನ ಆಟದ ಪ್ರೇಕ್ಷಕರು ಮತ್ತು ನಗರ ಪ್ರದೇಶಗಳಲ್ಲಿರುವ ಯಕ್ಷಗಾನ ಪ್ರೇಕ್ಷಕರು. ಊರಿನ ಪ್ರೇಕ್ಷಕರಿಗೆ ಯಕ್ಷಗಾನವು ಯಕ್ಷಗಾನದ ರೀತಿಯಲ್ಲಿಯೇ ಬೇಕು ಆದರೆ ನಗರ ಪ್ರದೇಶದ ಪ್ರೇಕ್ಷಕರಿಗೆ ಆಧುನಿಕತೆಯ ಆಧುನಿಕ ತಂತ್ರಜ್ಞಾನದ ಸಂಗೀತದ ಯಕ್ಷಗಾನ ಬೇಕು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಉತ್ತಮ ಯಕ್ಷಗಾನ ವಿದ್ಯಾರ್ಥಿಗಳನ್ನು ಬೆಳೆಸುವುದು.

ಪರ್ಕಳದ ಮಹಾಲಿಂಗೇಶ್ವರ ಮಹಾಗಣಪತಿ ಸಂಘ, ಬೆಂಗಳೂರಿನ ಯಕ್ಷ ದೇಗುಲ, ಕರ್ನಾಟಕ ಕಲಾದರ್ಶಿನಿ, ಕಲಾಕದಂಬ ಆರ್ಟ್ ಸೆಂಟರ್, ಯಕ್ಷಶ್ರೀ ಮುಂತಾದ ಸಂಘ ಸಂಸ್ಥೆಗಳಲ್ಲಿ ತಿರುಗಾಟವನ್ನು ಮಾಡಿರುತ್ತಾರೆ.



ಕನ್ನಡ ಸೇವಾ ರತ್ನ ಪ್ರಶಸ್ತಿ, ಸೃಷ್ಟಿಕಲಾ ರತ್ನ ಪ್ರಶಸ್ತಿ, ಜೀವನಮಾನ ಸಾಧನ ಪ್ರಶಸ್ತಿ, ಸಮಾಜ ಸೇವಾ ರತ್ನ ,ಯುವಕಲಾ ರತ್ನ ಪ್ರಶಸ್ತಿ ಹೀಗೆ ಹಲವು ಸನ್ಮಾನ ಹಾಗೂ ಪ್ರಶಸ್ತಿಗಳು ನಿತ್ಯಾನಂದ ಅವರಿಗೆ ಸಿಕ್ಕಿರುತ್ತದೆ.

ಅಡುಗೆ ಮಾಡುವುದು, ಆಶ್ರಮಗಳಿಗೆ ಮತ್ತು ಕೆಂಗೇರಿ ಸುತ್ತಮುತ್ತಲಿನ ಸರಕಾರಿ ಶಾಲೆಗಳಿಗೆ ಉಚಿತವಾಗಿ ನೃತ್ಯ ಕಲಿಸುವುದು ಹಾಗೂ ಕೆಂಗೇರಿಯ ಸುತ್ತಮುತ್ತಲು ಯಾವುದೇ ಕಾರ್ಯಕ್ರಮದಲ್ಲಿ ಆಹಾರ ಮಿಕ್ಕರೆ ಅವುಗಳನ್ನು ಆಶ್ರಮಗಳಿಗೆ ಹಂಚುವುದು ಇತ್ಯಾದಿ ಇವರ ಹವ್ಯಾಸಗಳು

ನಿತ್ಯಾನಂದ ನಾಯಕ್ ಅವರು ರಾಧಿಕಾ ನಾಯಕ್ ಇವರನ್ನು ೦೯.೧೨.೨೦೧೦ ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395