ಯಕ್ಷ ಸಾಧಕರು 247

"ನಾದ ವಿಹಾರಿ"

ಯಕ್ಷಗಾನ ಕರ್ನಾಟಕದ ಒಂದು ಸಾಂಪ್ರದಾಯಿಕ ಅನನ್ಯ ಕಲೆ. ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಭಾಷಣೆ ಇತ್ಯಾದಿ ಎಲ್ಲ ಕಲೆಗಳನ್ನು ಒಳಗೊಂಡಿರುವ ‘ಸಮಗ್ರ ರಂಗಭೂಮಿ’ ಎಂದು ಪರಿಗಣಿಸಲ್ಪಟ್ಟಿದೆ. ಇಂತಹ ಒಂದು ಸಮಗ್ರ ಕಲೆಯಲ್ಲಿ ತಮ್ಮ ಛಾಪನ್ನು ಹಾಗೂ ಶ್ರೀಪ್ರಭಾ ಸ್ಟುಡಿಯೋದ ಮೂಲಕ ಯಕ್ಷಗಾನ ಸಂಘಟನೆ ಹಾಗೂ ಯಕ್ಷಗಾನ ಕಾರ್ಯಕ್ರಮದ ಮೂಲಕ ಕಲೆಯನ್ನು ಜನರ ಬಳಿಗೆ ಪಸರಿಸುತ್ತಿರುವವರು ಪ್ರಸನ್ನ ಭಟ್ ಹೆಗ್ಗಾರ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೆಗ್ಗಾರಿನ ವೆಂಕಟ್ರಮಣ ಭಟ್ ಹಾಗೂ ಸವಿತಾ ಭಟ್ ಇವರ ಮಗನಾಗಿ 04.04.1993ರಂದು ಜನನ.  B.A ಇವರ ವಿದ್ಯಾಭ್ಯಾಸ. ಯಕ್ಷಗಾನ ಕಲೆಯ ಮೇಲಿನ ಅಪಾರ ಆಸಕ್ತಿ ಹಾಗೂ ಚಿಕ್ಕ ವಯಸ್ಸಿನಲ್ಲಿ ನೋಡಿದ ಚಿಟ್ಟಾಣಿಯವರ ವೇಷಗಳು ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆಯಾಯಿತು. ಶಂಕರ ಭಾಗವತರು ಮತ್ತು ಸತೀಶ್ ಉಪಾಧ್ಯಾಯ ಅಂಬಲಪಾಡಿ ಯಕ್ಷಗಾನ ಗುರುಗಳು. ಯಕ್ಷರಂಗದಲ್ಲಿ ಒಟ್ಟು 13 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಪ್ರಸನ್ನ ಭಟ್ಟ ಹೆಗ್ಗಾರ.



ಎಲ್ಲಾ ಪೌರಾಣಿಕ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು. ವಿದ್ವಾನ್ ಗಣಪತಿ ಭಟ್ ಹಾಗೂ ಗೋಪಾಲ್ ಗಾಣಿಗ ಹೇರಂಜಾಲು ನೆಚ್ಚಿನ ಭಾಗವತರು. ರಾಮಕೃಷ್ಣ ಮಂದಾರ್ತಿ ಹಾಗೂ ಶಂಕರ ಭಾಗವತ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು.

ಶ್ರೀಪ್ರಭಾ ಸ್ಟುಡಿಯೋ ಪ್ರಾರಂಭ ಮಾಡಲು ಪ್ರೇರಣೆ:-
ನೂತನ ತಾಂತ್ರಿಕತೆಯನ್ನು ಯಕ್ಷಗಾನಕ್ಕೆ ಅಳವಡಿಸಿ , ಉತ್ತಮ ಗುಣಮಟ್ಟದ  ಆಡಿಯೋ, ವೀಡಿಯೋ ಚಿತ್ರೀಕರಿಸುವ ಉದ್ದೇಶದಿಂದ ಪ್ರಾರಂಭ.

ಶ್ರೀಪ್ರಭಾ ಸ್ಟುಡಿಯೋದಲ್ಲಿ ನಡೆಯುವ ಲೈವ್ ಕಾರ್ಯಕ್ರಮದ ಬಗ್ಗೆ ಜನರ ಅಭಿಪ್ರಾಯ:-
ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಯಕ್ಷಗಾನ ಅಷ್ಟೇ ಅಲ್ಲದೆ ಶಾಸ್ತ್ರೀಯ ಸಂಗೀತ, ಭರತನಾಟ್ಯ ಹಾಗೂ ಎಲ್ಲಾ ಕಲಾ ಪ್ರಕಾರದ ಪ್ರೇಕ್ಷಕರೂ ಸಹ ನಮ್ಮ ಚಾನೆಲ್ subscribers ಆಗಿದ್ದಾರೆ, ಇದರಿಂದ ಸಾಮಾಜಿಕವಾಗಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳೂ ನಮ್ಮನ್ನು ಅರಸಿ ಬರುತ್ತಿದೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಿದೆ, ಆದರೆ ಯಕ್ಷಗಾನದಲ್ಲಿ ಸಾವಿರಕ್ಕೂ ಹೆಚ್ಚು ಪೌರಾಣಿಕ ಪ್ರಸಂಗಗಳಿದ್ದು ಸೀಮಿತ ಪ್ರಸಂಗಗಳು ಮಾತ್ರ ಪ್ರದರ್ಶನ ಕಾಣುತ್ತಿದೆ. ಕಲಾವಿದರಲ್ಲಿ ಆಳವಾದ ಅಧ್ಯಯನದ ಕೊರತೆ ಕಾಣುತ್ತಿದೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಯಕ್ಷಗಾನ ಬದಲಾದಂತೆ ಪ್ರೇಕ್ಷಕರೂ ಸಹ ಬದಲಾಗಿದ್ದಾರೆ. ಯಕ್ಷಗಾನದಲ್ಲಿ ಹೇಗೆ ಒಳ್ಳೆಯ ಬದಲಾವಣೆಗಳಾಗಿದೆಯೋ ಹಾಗೆ ಪ್ರೇಕ್ಷಕರೂ ಸಹ ಒಳ್ಳೆಯ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಡಿಜಿಟಲ್ ಮಾಧ್ಯಮಗಳಾದ T.V cinema ಗಳ ಹೊರತಾಗಿಯೂ ಯಕ್ಷಗಾನದ ಸೆಳೆತ ಯುವ ಕಲಾವಿದರು ಮತ್ತು ಹೊಸ ಪ್ರೇಕ್ಷಕರ ಉಗಮಕ್ಕೆ ಕಾರಣವಾಗುತ್ತಿದೆ. ಹವ್ಯಾಸಿ ಕಲಾವಿದರ ಕೊರತೆ ಹಾಗೂ ಹವ್ಯಾಸಿ ಕಲಾವಿದರ ಪ್ರದರ್ಶನಗಳಿಗೆ ಪ್ರೇಕ್ಷಕರ ಕೊರತೆ ಇವೆರಡೂ ಅಂಶಗಳು ಯಕ್ಷಗಾನದ ಬೆಳವಣಿಗೆಗೆ ಮಾರಕವಾಗುತ್ತಿದೆ.

ಶ್ರೀಪ್ರಭಾ ಸ್ಟುಡಿಯೋದ ಮುಖಾಂತರ ಮುಂದೆ ಯಾವ ರೀತಿಯ ಕಾರ್ಯಕ್ರಮ ಮಾಡುವ ಯೋಜನೆ ಇದೆ:- ಯಕ್ಷಗಾನದ ಎಲ್ಲಾ ವಿಭಾಗಗಳ ಸಾಕ್ಷ್ಯಚಿತ್ರ ಮತ್ತು ಯಕ್ಷಗಾನದ ಮೂಲತನವನ್ನು ಇರಿಸಿಕೊಂಡು  ಸಿನಿಮಾಟೋಗ್ರಾಫಿಯನ್ನು ಯಕ್ಷಗಾನಕ್ಕೆ ಪರಿಚಯಿಸುವುದು. ಯಕ್ಷಗಾನವನ್ನು ಹೊರತು ಪಡಿಸಿ ಎಲ್ಲಾ ಕ್ಷೇತ್ರಕ್ಕೂ ವಿಸ್ತರಿಸುವ ಯೋಜನೆ ಇದೆ.
ಶ್ರೀಪ್ರಭಾ ಸ್ಟುಡಿಯೋದ ಮೂಲಕ ಸುಮಾರು 300ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳುತ್ತಾರೆ ಪ್ರಸನ್ನ ಭಟ್ಟ ಹೆಗ್ಗಾರ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:- ಯಕ್ಷಗಾನದ ಮೂಲ ಸ್ವರೂಪವನ್ನು ಕಾಯ್ದಿರಿಸಿಕೊಂಡು ಅದರ ಸೌಗಂಧವನ್ನು ದೇಶದ ಉದ್ದಗಲಕ್ಕೂ ಪಸರಿಸುವುದು ನಮ್ಮೆಲ್ಲರ ಕರ್ತ್ಯವಾಗಿದೆ.



ಸನ್ಮಾನ ಹಾಗೂ ಪ್ರಶಸ್ತಿ:-
♦ ರಂಗಬಳಗ ಮತ್ತಿಘಟ್ಟ ನೀಡುವ ಪುರಸ್ಕಾರ.
♦ ಮಿಯಾರ್ಡ್ಸ್ ರಂಗ ಅಧ್ಯಯನ ಕೇಂದ್ರ ಶಿರಸಿಯಿಂದ ಸನ್ಮಾನ.
♦ಸಾಹಿತ್ಯ ಚಿಂತಕರ ಚಾವಡಿ ನೀಡುವ ವಾರ್ಷಿಕ ಸನ್ಮಾನ.

ಕೆರೆಮನೆ, ಪೆರ್ಡೂರು, ಜಲವಳ್ಳಿ ಮೇಳಗಳಲ್ಲಿ ಪೂರ್ಣಾವಧಿ ತಿರುಗಾಟ ಮತ್ತು ಸಾಲಿಗ್ರಾಮ , ಮಂದಾರ್ತಿ ಮೇಳಗಳಲ್ಲಿ ಅರೆಕಾಲಿಕ ತಿರುಗಾಟ ಮಾಡಿದ ಅನುಭವ. ಸಂಗೀತ ಆಲಿಸುವುದು, ಕ್ರಿಕೆಟ್ ವೀಕ್ಷಿಸುವುದು ಹಾಗೂ ಆಡುವುದು ಇವರ ಹವ್ಯಾಸಗಳು.

ಪ್ರಸನ್ನ ಭಟ್ ಹೆಗ್ಗಾರ 18.04.2019ರಂದು ಶ್ರೀಕಲಾ ಭಟ್ ಇವರನ್ನು ಮದುವೆಯಾಗಿ ಮಗಳು ಧನ್ವಿ ಭಟ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿ, ಹೆಂಡತಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರಸನ್ನ ಭಟ್ಟ ಹೆಗ್ಗಾರ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395