ಯಕ್ಷ ಸಾಧಕರು 256

"ಚತುರ ಹಾಸ್ಯಪಟು"

ಯಕ್ಷಗಾನದ ವಿದೂಷಕ / ಹಾಸ್ಯಗಾರ ಪಾತ್ರ ನಿರ್ವಹಿಸುವುದು ತುಂಬ ಕಷ್ಟದ ಕೆಲಸ. ಯಕ್ಷಗಾನ ಪ್ರಸಂಗಗಳೆಲ್ಲ ಪುರಾಣ ಆಧಾರಿತವಾದವು. ಮೂಲ ಕಥೆಗೆ ಚ್ಯುತಿ ಬರದಂತೆ ಹಾಸ್ಯವನ್ನು ಅಡಿಗೆಗೆ ರುಚಿಗೆ ತಕ್ಕಂತೆ ಉಪ್ಪು, ಖಾರ ಮತ್ತೊಂದು ಹಾಕಿದಂತೆ ರಸಭಂಗವಾಗದಂತೆ ನಿರ್ವಹಿಸಬೇಕು. ಇಲ್ಲಾಂದ್ರೆ ಸರಿಯಾಗುವುದಿಲ್ಲ. ರುಚಿ ಕೆಟ್ಟು ಹೋಗುತ್ತದೆ. ಮತ್ತೆ ಹೆಂಗಸರು, ಮಕ್ಕಳು ಎಲ್ಲರೂ ಯಕ್ಷಗಾನ ನೋಡಲು ಬಂದಿರುತ್ತಾದ್ದರಿಂದ ಅಸಂಬದ್ಧವಾಗಿ ಅಶ್ಲೀಲವಾಗಿ ಮಾತಾಡುವಂತಿಲ್ಲ. ಇಂತದ್ದೆಲ್ಲ ಕಟ್ಟಳೆ, ಪರಿಮಿತಿಗಳ ನಡುವೆಯೇ ಯಕ್ಷರಂಗದಲ್ಲಿ ಹಾಸ್ಯರಸ ಹರಿಸಿ ಜನರನ್ನು ನಕ್ಕು ನಲಿಸುತ್ತಿರುವವರು ಯುವ ಹಾಸ್ಯ ಕಲಾವಿದ ಸುಕೇಶ್ ಕುಲಾಲ್.




24.11.1995ರಂದು ಶ್ರೀಮತಿ ಮುತ್ತು ಹಾಗೂ ಈಶ್ವರ ಮೂಲ್ಯ ದಂಪತಿಯರ ಮಗನಾಗಿ ಜನನ. ಸಬ್ಬಣಕೋಡಿ ರಾಮ ಭಟ್ಟ ಇವರ ಯಕ್ಷಗಾನ ಗುರುಗಳು ಹಾಗೂ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಪುರುಷೋತ್ತಮ ಪೂಂಜಾ, ಪೆಲತ್ತಡ್ಕ ಗೋಪಾಲಕೃಷ್ಣ ಮಯ್ಯ, ಅಂಡಾಲ ದೇವಿಪ್ರಸಾದ್ ಶೆಟ್ಟಿ ನನ್ನನ್ನು ಒಬ್ಬ ಯಕ್ಷಗಾನ ಕಲಾವಿದನನ್ನಾಗಿ ತಯಾರು ಮಾಡಿದವರು. ರಂಗದಲ್ಲಿ ಹಾಸ್ಯ ಮಾಡಲು ಗುರುಗಳಾಗಿ ಮಾರ್ಗದರ್ಶನ ನೀಡಿದವರು ಬಾಬು ಗೌಡ  ಚಾರ್ಮಾಡಿ.

ರಂಗಕ್ಕೆ ಹೋಗುವ ಮೊದಲು ಭಾಗವತರಲ್ಲಿ ಕೇಳಿ ಮತ್ತೆ ಹಿರಿಯ ಕಲಾವಿದರ ಹತ್ತಿರ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಸುಕೇಶ್ ಕುಲಾಲ್.
ಎಲ್ಲಾ ಪುರಾಣ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು ಹಾಗೂ ರಂಗದಲ್ಲಿ ಎಲ್ಲಾ ರೀತಿಯ ಪುಂಡು ವೇಷ ಹಾಗೂ ಹಾಸ್ಯ ವೇಷ ಇವರ ನೆಚ್ಚಿನ ವೇಷಗಳು. ಕಳೆದ ಹಲವು ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ‌ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.





ರಂಗದಲ್ಲಿ ಇರುವ ಸಾಕಷ್ಟು ಪ್ರಸಂಗಗಳ ಬಗ್ಗೆ ಅಧ್ಯಯನ ಮಾಡಬೇಕು ಹಾಗೂ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಸುಕೇಶ್ ಕುಲಾಲ್. ಪುಸ್ತಕ ಓದುವುದು ಇವರ ಹವ್ಯಾಸ.

ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸುಕೇಶ್ ಕುಲಾಲ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395