ಯಕ್ಷ ಸಾಧಕರು 259

"ಯಕ್ಷ ದೀವಿತ್"

ಯಕ್ಷಗಾನ ಕರ್ನಾಟಕದ ಒಂದು ಸಾಂಪ್ರದಾಯಿಕ ಅನನ್ಯ ಕಲೆ. ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಭಾಷಣೆ ಇತ್ಯಾದಿ ಎಲ್ಲ ಕಲೆಗಳನ್ನು ಒಳಗೊಂಡಿರುವ ‘ಸಮಗ್ರ ರಂಗಭೂಮಿ’ ಎಂದು ಪರಿಗಣಿಸಲ್ಪಟ್ಟಿದೆ. ಮೂಲತಃ ಮಂಗಳೂರು, ಕರಾವಳಿ, ಉಡುಪಿ ನೆಲೆಯಲ್ಲಿ ಸೀಮಿತವಾಗಿ ಪ್ರದರ್ಶನಗೊಳ್ಳುತ್ತಿದ್ದ ಈ ಪ್ರಾದೇಶಿಕ ಕಲೆ ಕಾಲಕ್ರಮೇಣ ರಾಜ್ಯದ ಹಲವಾರು ಜಿಲ್ಲೆಗಳಲ್ಲೂ ವ್ಯಾಪಿಸಿ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ಇಂದು ಜಾಗತಿಕಮಟ್ಟದವರೆಗೂ ಬೆಳವಣಿಗೆ ಕಂಡಿದೆ. ಇಂತಹ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯ ಮೂಲಕ ಪ್ರಜ್ವಲಿಸುತ್ತಿರುವ ಪ್ರತಿಭೆ ದೀವಿತ್ ಎಸ್.ಕೆ ಪೆರಾಡಿ.

14.02.1994ರಂದು ಶ್ರೀಧರ ಕೋಟ್ಯಾನ್ ಹಾಗೂ ಲಲಿತಾ ಇವರ ಮಗನಾಗಿ ಜನನ. ಎಂ.ಎ (ಕನ್ನಡ), ಎಂ.ಎ (ತುಳು), ಎಂ.ಸಿ.ಜೆ (ಸಮೂಹ ಸಂವಹನ‌ ಮತ್ತು ಪತ್ರಕೋದ್ಯಮ), ಬಿ.ಇಡಿ ಪದವಿಯನ್ನು ಪಡೆದು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಸತತ 4 ವರ್ಷ ಕನ್ನಡ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಪದವೀಧರ ಪ್ರಾಥಮಿಕ ಸರಕಾರಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುವಿಕೆ. ಕಲೆಯ ಬಗೆಗಿನ ಕುತೂಹಲ ಮತ್ತು ಆಸಕ್ತಿ ದೀವಿತ್ ಎಸ್.ಕೆ ಪೆರಾಡಿ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.




ದೀವಿತ್ ಎಸ್.ಕೆ ಪೆರಾಡಿ ಅವರ ಶೈಕ್ಷಣಿಕ ಸಾಧನೆ:-
♦ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ೨೦೧೪ನೇ ಸಾಲಿನ ಬಿ.ಎ ಪದವಿಯಲ್ಲಿ ೪ ನೇ ರಾಂಕ್.
♦ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಮತ್ತು ಎರಡು ಚಿನ್ನದ ಪದಕ ಮತ್ತು ಎರಡು ನಗದು ಪುರಸ್ಕಾರ.

ದೀವಿತ್ ಎಸ್.ಕೆ ಪೆರಾಡಿ ಅವರ ಪ್ರಕಟಿತ ಕೃತಿಗಳು:-
♦ ಕವಿಯ ಕನಸು – ಕವನ ಸಂಕಲನ.
♦ ಸ್ನೇಹ ಸಂಪಿಗೆ-ಕಥಾ ಸಂಕಲನ.
♦ ಕಾವ್ಯಾಮೃತ- ಕವನ ಸಂಕಲನ.
♦ ಮುದ್ದು ಗುಮ್ಮ - ಮಕ್ಕಳಿಗಾಗಿ ಒಲವಿನ ಗೀತೆಗಳು.
♦ ಕಾಂತಾವರ ಕನ್ನಡ ಸಂಘದ ಮೂಲಕ “ಏಕವ್ಯಕ್ತಿ ಯಕ್ಷಗಾನ ಸಾಧಕ ಮಂಟಪ ಪ್ರಭಾಕರ ಉಪಾಧ್ಯ” ಮತ್ತು ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇವರನ್ನು ಕುರಿತಾದ ಜೀವನ ಚರಿತ್ರೆಯ ಕೃತಿ ಬಿಡುಗಡೆ.
♦ ಭಾರತದ  ಇತಿಹಾಸದಲ್ಲಿ ಉಲ್ಲೇಖವಾದ ಪದ್ಮಿನಿ ಪ್ರಕರಣಾಧಾರಿತ “ಪದ್ಮಿನಿ ಪದಸ್ಮೃತಿ “ ಎಂಬ ಯಕ್ಷಗಾನ ಪ್ರಸಂಗ ರಚನೆ.

ದೀವಿತ್ ಎಸ್.ಕೆ ಪೆರಾಡಿ ಅವರ ಸಾಂಸ್ಕೃತಿಕ ಸಾಧನೆ:-
♦ ಗುರು, ಛಾಂದಸ ಶ್ರೀ ಗಣೇಶ ಕೊಲಕಾಡಿ ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇವರಿಂದ ಯಕ್ಷಗಾನ ಪ್ರಸಂಗ ರಚನೆಯ ಅಭ್ಯಾಸ, ಸತತ ೧೪ ವರ್ಷದಿಂದ  ಶೇಖರ್ ಡಿ. ಶೆಟ್ಟಿಗಾರ್ ಸೇರಿದಂತೆ ವಿವಿಧ  ಗುರುಗಳಿಂದ  ತೆಂಕುತಿಟ್ಟು ಯಕ್ಷಗಾನಾಭ್ಯಾಸ  ಸೇರಿದಂತೆ ಮಂಟಪ ಪ್ರಭಾಕರ ಉಪಾಧ್ಯರಿಂದ ಬಡಗುತಿಟ್ಟು ನಾಟ್ಯ ಕಲಿಕೆ.
♦ ಸತತ ೧೦ ವರ್ಷಗಳಿಂದ ಮಂಗಳೂರು  ವಿಶ್ವ ವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಗುರು.
♦ ಮಂಟಪ ಪ್ರಭಾಕರ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಏಕವ್ಯಕ್ತಿ ಯಕ್ಷ ಪ್ರಯೋಗದ ಅನಾವರಣ. ೪೦ಕ್ಕೂ ಅಧಿಕ ಸ್ಥಳಗಳಲ್ಲಿ ಏಕವ್ಯಕ್ತಿ ಯಕ್ಷ ಪ್ರಯೋಗದ ಪ್ರದರ್ಶನ.
♦ ಡ್ರೀಮ್ ವರ್ಲ್ಡ್ ಪ್ರೊಡಕ್ಷನ್  ತಂಡದ  “ವ್ಯರ್ಥ..... ಸಾಧನೆ ಇಲ್ಲದ ಜೀವನ” ಟೆಲಿಚಿತ್ರಕ್ಕೆ ಸಾಹಿತ್ಯ ಮತ್ತು  ಸಂಭಾಷಣೆ ರಚನೆ.
♦ ಆಳ್ವಾಸ್ ಶಿಕ್ಷಣ  ಪ್ರತಿಷ್ಠಾನ ಆಶ್ರಯದಲ್ಲಿ ದುಬೈ, ಬಹರೈನ್ , ಅಬುಧಾಬಿ ಹಾಗೂ ವಿವಿಧ ರಾಜ್ಯಗಳಲ್ಲಿ, ರಾಜ್ಯದ  ಬಹುತೇಕ ಜಿಲ್ಲೆಗಳಲ್ಲಿ, ಯಕ್ಷಗಾನ ಕಾರ್ಯಕ್ರಮ ನೀಡುವಿಕೆ.
♦ ಮಂಗಳೂರು ಆಕಾಶವಾಣಿಯಲ್ಲಿ ವಿವಿಧ ಕಾರ್ಯಕ್ರಮ ನೀಡುವಿಕೆ.
♦ ೧೬ನೇ ಮಕ್ಕಳ ಧ್ವನಿಯೆಂಬ ಮಕ್ಕಳ ಸಾಹಿತ್ಯ ಸಮ್ಮೇಳನದ  ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವಿಕೆ.
♦ ೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ  ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವಿಕೆ.
♦ ೧೬ನೇ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ.
♦ ಜಿಲ್ಲೆಯ ವಿವಿಧೆಡೆ ೩೦೦ಕ್ಕೂ ಅಧಿಕ ನೃತ್ಯ ಕಾರ್ಯಕ್ರಮ ನೀಡುವಿಕೆ.
♦ ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯಿಕ ಸ್ಪರ್ಧೆಗಳಿಗೆ ತೀರ್ಪುಗಾರನಾಗಿ ಭಾಗವಹಿಸುವಿಕೆ.
♦ ಆಳ್ವಾಸ್ ಶಿಕ್ಷಣ  ಪ್ರತಿಷ್ಠಾನದ ಧೀಂಕಿಟ  ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಅಭ್ಯಾಸ ಮತ್ತು    ಯಕ್ಷ ರೂಪಕದ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುವಿಕೆ.
♦ ಜೆ.ಸಿ.ಐ ಸಪ್ತಾಹಗಳಲ್ಲಿ  ಕವನವಾಚನ, ಕಾರ್ಯಕ್ರಮ ನೀಡುವಿಕೆ.
♦ ವಿವಿಧ ಪತ್ರಿಕೆ ವಿಶೇಷಾಂಕ, ಮಾಸ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳ ಪ್ರಕಟ.
♦ ಜಿಲ್ಲೆಯ ವಿವಿಧೆಡೆ ಯಕ್ಷಗಾನ ತರಬೇತಿ ನೀಡುವಿಕೆ.



ಮಾನಿಷಾದ, ಸತ್ಯ ಹರಿಶ್ಚಂದ್ರ, ಇಂದ್ರಜಿತು ಕಾಳಗ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ದಾಕ್ಷಾಯಿಣಿ, ಹನೂಮಂತ, ಸೀತೆ, ಶ್ರೀದೇವಿ ಇತ್ಯಾದಿ ನೆಚ್ಚಿನ ವೇಷಗಳು.

ಪೂರ್ವಸೂರಿಗಳ ಅನುಭವಗಳ ಸಂಗ್ರಹ, ಓದು, ದೈಹಿಕ ಅಭ್ಯಾಸ, ಹಿರಿಯ ಕಲಾವಿದರಿಂದ ಪಾತ್ರ ಸ್ವಭಾವದ ಬಗೆಗಿನ ಮಾಹಿತಿ ಸಂಗ್ರಹ ಮಾಡಿ ರಂಗಕ್ಕೆ ಹೋಗುವ ಮೊದಲು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ದೀವಿತ್ ಎಸ್.ಕೆ ಪೆರಾಡಿ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪರಿವರ್ತನೆ ಮತ್ತು ಪುನರುಜ್ಜೀವನದ ಹಂತದಲ್ಲಿದೆ ಹಾಗೂ ಉತ್ತಮ ಯಕ್ಷಗಾನ ಪ್ರೇಕ್ಷಕರ ಸೃಷ್ಟಿಯ ಅನಿವಾರ್ಯತೆ ಇದೆ. ಪರಂಪರೆಯನ್ನು ಉಳಿಸಿಕೊಂಡು ಶಾಸ್ತ್ರೀಯ ಚೌಕಟ್ಟನ್ನು ಕೊಡುವ ಅನಿವಾರ್ಯತೆ ಇದೆ. ಸೃಜನಶೀಲತೆಯ ಸೋಗಿನಲ್ಲಿ ಯಕ್ಷಗಾನದ ಮೂಲ ಪರಂಪರೆ ನಶಿಸಕೂಡದು. ಯಕ್ಷಗಾನೀಯ ಸುಧಾರಣೆಗಳು ಅತೀ ಅಗತ್ಯವಿದೆ.

ದೀವಿತ್ ಎಸ್.ಕೆ ಪೆರಾಡಿ ಅವರಿಗೆ ಲಭಿಸಿರುವ ಪ್ರಶಸ್ತಿ ಮತ್ತು ಗೌರವ:-
♦ ಗೋವಾ ಕನ್ನಡ ಸಂಘದಿಂದ “ಕರುನಾಡ ಪದ್ಮಶ್ರೀ” ಪ್ರಶಸ್ತಿ.
♦ ಅಳಿಯೂರು ಗಣೇಶೋತ್ಸವ ಸಮಿತಿಯಿಂದ “ನಾಟ್ಯ ರತ್ನಾಕರ” ಬಿರುದು.
♦ ೫ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಪ್ರತಿಭಾ ಗೌರವ” ಪ್ರಶಸ್ತಿ.
♦ ದ.ಕ ಜಿಲ್ಲಾ ಮಕ್ಕಳ  ಸಾಹಿತ್ಯ ಸಂಗಮದ  ವತಿಯಿಂದ ಸ್ನೇಹ ಸಂಪಿಗೆ  ಕೃತಿಗೆ ಗೌರವ ಧನ.
♦ ಹಾಸನದ ಕನ್ನಡ ಸಾಹಿತ್ಯ ಪರಿಷತ್  ಭವನದಲ್ಲಿ ಸಾಹಿತಿ ಬಿ.ಬಿ ಶಿವಣ್ಣರವರ ನೇತೃತ್ವದಲ್ಲಿ  ರಾಜ್ಯಮಟ್ಟದ ಸನ್ಮಾನ.
♦ ರ‍್ಯಾಂಕ್ ಮತ್ತು  ಪ್ರತಿಭಾ ಸಾಧನೆಯನ್ನು ಗುರುತಿಸಿ ವ್ಯಾಸಂಗ  ಮಾಡಿದ ಪ್ರೌಢ ಶಾಲೆಯಲ್ಲಿ ಅಧ್ಯಾಪಕ ಮತ್ತು ವಿದ್ಯಾರ್ಥಿ ಬಳಗದಿಂದ, ಊರ ಮಹನೀಯರಿಂದ ಅಭಿನಂದನಾ ಕಾರ್ಯಕ್ರಮ.
♦ ಯಕ್ಷಗುರುವಿನ ನೆಲೆಯಲ್ಲಿ ವಿವಿಧೆಡೆ ಸನ್ಮಾನ.
♦ಜಿಲ್ಲಾ ಮಟ್ಟದ  ಪ್ರಬಂಧ ಸ್ಪಧೆಯಲ್ಲಿ ವಿಜೇತರಾದುದಕ್ಕೆ ಕ್ರಿಕೆಟಿಗ ಅನಿಲ್ ಕುಂಬ್ಳೆಯಿಂದ  ಪ್ರಶಸ್ತಿ ಸ್ವೀಕಾರ.
♦ ೨೦೧೧ರಲ್ಲಿ ನಡೆದ ರಾಜ್ಯಮಟ್ಟದ ಎನ್.ಎಸ್.ಎಸ್ ಶಿಬಿರದಲ್ಲಿ ಭಾಗಿ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ  ನೀಡಿದಕ್ಕಾಗಿ ಪ್ರಶಸ್ತಿ ಸ್ವೀಕಾರ.
♦ ಎನ್.ಎಸ್.ಎಸ್ ಶಿಬಿರದಲ್ಲಿ ನಾಯಕತ್ವ ಸೇರಿದಂತೆ ಉತ್ತಮ ಸ್ವಯಂ ಸೇವಕ ಪ್ರಶಸ್ತಿ ಪಡೆಯುವಿಕೆ.
♦ ಕಲ್ಲಚ್ಚು ವಿಂಶತಿ‌ ಪುರಸ್ಕಾರ-೨೦೨೦.
♦ ನ್ಯೂಸ್ ಕರ್ನಾಟಕ ವೆಬ್ ಸೈಟ್ ನಲ್ಲಿ ಯಕ್ಷವಿಹಂಗಮ ಅಂಕಣ ಬರೆಯುವಿಕೆ.
♦ ಮುದ್ದು ಗುಮ್ಮ ಕೃತಿಗೆ - ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೨೦೨೦ನೇ ಸಾಲಿನ ಜಿ.ಪಿ ರಾಜರತ್ನಂ ದತ್ತಿನಿಧಿ ಪ್ರಶಸ್ತಿ.
♦ ಶತಶೃಂಗ ಪ್ರಶಸ್ತಿ.


ದೀವಿತ್ ಎಸ್.ಕೆ ಪೆರಾಡಿ ಅವರ ಸಂಶೋಧನೆ ಹಾಗೂ ಕಾರ್ಯಗಾರ:-
♦ ಕರಾವಳಿ ಕರ್ನಾಟಕದಲ್ಲಿರುವ ಯಕ್ಷಗಾನ ಪತ್ರಿಕೆಗಳು : ಒಂದು ಅಧ್ಯಯನ  ವಿಷಯದ ಬಗ್ಗೆ  ಸಂಶೋಧನೆ.
♦ ಜಗತ್‌ಸೃಷ್ಠಿ: ಧಾರ್ಮಿಕ ಮತ್ತು ವೈಜ್ಞಾನಿಕ ಚಿಂತನೆಗಳು - ವಿಷಯದ ಕುರಿತು ಸಂಶೋಧನೆಯಲ್ಲಿ ನಿರತ.
♦ ವಿವಿಧ ಶಾಲೆ, ಸಂಸ್ಥೆಗಳಲ್ಲಿ ವೃತ್ತಿಪರ, ಶೈಕ್ಷಣಿಕ ಮಾರ್ಗದರ್ಶನ ನೀಡುವಿಕೆ.
♦ ಸಮಾಜ ಕಾರ್ಯ, ಕನ್ನಡ ವಿಭಾಗ ಸೇರಿದಂತೆ  ವಿವಿಧ ಅಧ್ಯಯನ ಕೇಂದ್ರಗಳ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪ್ರಬಂಧ ಮಂಡನೆ ಮತ್ತು ಭಾಗವಹಿಸುವಿಕೆ.
♦ ಬೊಟ್ಟಿಕೆರೆ ಪುರುಷೋತ್ತಮ ಪೂಂಜೆರ್ನ ತುಳು ಯಕ್ಷಗಾನ ಪ್ರಸಂಗಗಳ ವಿಶ್ಲೇಷಣೆ.

ಸಂಘಟನಾತ್ಮಕ ಕೆಲಸ:-
♦ ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ರಿ.) ಇದರ ಪ್ರಧಾನ ಕಾರ್ಯದರ್ಶಿ.
♦ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷಶಿಕ್ಷಣ ಯೋಜನೆಯ ಸಂಘಟಕ ಮತ್ತು ಯಕ್ಷಗಾನ ಶಿಕ್ಷಕ.


ತೆಂಕುತಿಟ್ಟು ಯಕ್ಷಮಾರ್ಗದ ಬಗ್ಗೆ ಸಂಶೋಧನೆ ಮಾಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ದೀವಿತ್ ಎಸ್.ಕೆ ಪೆರಾಡಿ.

ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ದೀವಿತ್ ಎಸ್.ಕೆ ಪೆರಾಡಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395