ಯಕ್ಷ ಸಾಧಕರು 260
"ಯಕ್ಷ ಪವನ"
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪಾಣಾಜೆಯ ಜಯರಾಮ್ ರೈ ಹಾಗೂ ಬೇಬಿ ರೈ ಇವರ ಮಗನಾಗಿ 28.01.1997ರಂದು ಪವನ್ ರೈ ಅವರ ಜನನ. BBM ಇವರ ವಿದ್ಯಾಭ್ಯಾಸ.
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು, ಗೋವಿಂದ ನಾಯಕ್ ಪಾಲೆಚ್ಚಾರ್, ಅಂಡಾಲ ದೇವಿಪ್ರಸಾದ್ ಶೆಟ್ಟಿ, ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ಯಕ್ಷಗಾನ ಗುರುಗಳು. ವಿದ್ವಾನ್ ವಸಂತ ಕುಮಾರ್ ಗೋಸಾಡ ಹಾಗೂ ಸುಮನಾ ರಾವ್ ಪುತ್ತೂರು ಕರ್ನಾಟಕ ಶಾಸ್ತ್ರೀಯ ಸಂಗೀತ ಗುರುಗಳು.
ದೇವಿ ಮಹಾತ್ಮೆ, ರಂಗನಾಯಕ, ಕಟೀಲು ಕ್ಷೇತ್ರ ಮಹಾತ್ಮೆ, ಮಾನಿಷಾದ ನೆಚ್ಚಿನ ಪ್ರಸಂಗಗಳು.
ಬಲಿಪ ನಾರಾಯಣ ಭಾಗವತರು, ಪಟ್ಲ ಸತೀಶ್ ಶೆಟ್ಟಿ, ಅಂಡಾಲ ದೇವಿಪ್ರಸಾದ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ನೆಚ್ಚಿನ ಭಾಗವತರು.
ಶ್ರೀಧರ್ ಪಡ್ರೆ, ಪ್ರಶಾಂತ್ ಶೆಟ್ಟಿ ವಗೆನಾಡು, ಕೃಷ್ಣ ಪ್ರಕಾಶ್ ಉಳಿತ್ತಾಯರು, ಶ್ರೀನಿವಾಸ್ ಸೋಮಯಾಜಿ, ಸುಮಿತ್ ಆಚಾರ್ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.
ಅಭೇರಿ, ಹಿಂದೋಳ, ಮೋಹನ, ಶುದ್ಧಸಾವೇರಿ, ಕಲ್ಯಾಣಿ ನೆಚ್ಚಿನ ರಾಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಬಹಳ ಬೆಳೆದಿದೆ, ಯಾವತ್ತು ನಮ್ಮ ಯಕ್ಷಗಾನ ಅಳಿದು ಹೋಗಲ್ಲ. ಯುವ ಸಮೂಹ ಹೆಚ್ಚು ಯಕ್ಷಗಾನಕ್ಕೆ ಒಲವು ತೋರಿಸುತ್ತ ಇದ್ದಾರೆ, ವಿಶ್ವದೆಲ್ಲೆಡೆ ಯಕ್ಷಗಾನವನ್ನು ನಮ್ಮ ಹಿರಿಯರು ಪಸರಿಸಿದ್ದಾರೆ. ನಮ್ಮಂತಹ ಯುವ ಕಲಾವಿದರು ಅದನ್ನು ಉಳಿಸಿ ಬೆಳೆಸಬೇಕು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಯಕ್ಷಗಾನದ ಮೇಲೆ ಜನರಿಗೆ ಯಾವುದೇ ರೀತಿಯ ಆಸಕ್ತಿ ಕುಂದಿಲ್ಲ. ಹಿಂದಿನ ಕಾಲದ ಹಾಗೆ ಈಗಲೂ ಇದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸುತ್ತಾರೆ (ಪರಂಪರೆ ಬಿಡಬಾರದು). ಯುವ ಸಮೂಹ ಗಂಡು ಹೆಣ್ಣು ಎಂಬ ಭೇದ ಇಲ್ಲದೆ ಯಕ್ಷಗಾನದತ್ತ ಒಲವು ತೋರುತ್ತಾ ಇದ್ದಾರೆ.
ಯಕ್ಷರಂಗದಲ್ಲಿ ಮುಂದಿನ ಯೋಜನೆಗಳು:-
ಒಂದು ಒಳ್ಳೆಯ ಭಾಗವತ ಆಗಬೇಕು ಅನ್ನೋ ಅಸೆ ಗುರಿ ಇದೆ. ಯಕ್ಷಗಾನದಲ್ಲಿ ನನ್ನ ಹೆಸರು ಕೂಡ ಜನ ಗುರುತಿಸಬೇಕು ಎಂಬ ಆಸೆ ಇದೆ. ನಿಮ್ಮಂತವರ ಪ್ರೋತ್ಸಾಹ ಆಶೀರ್ವಾದದಿಂದ ಪ್ರಯತ್ನ ಮಾಡುತ್ತೇನೆ.
ನನ್ನ ಯಕ್ಷರಂಗದಲ್ಲಿ ಸದಾ ಪ್ರೋತ್ಸಾಹ ನೀಡಿ ಬೆಂಬಲಿಸಿದವರು ತಂದೆ, ತಾಯಿ, ಚೇತನ್ ರೈ (ಅಣ್ಣ), ಶಶಿ ಕುಮಾರ್ ರೈ (ತಮ್ಮ), ಕೃಷ್ಣ ಪ್ರಕಾಶ್ ಭಟ್ ಪಾಣಾಜೆ, ಸಬ್ಬಣಕೋಡಿ ರಾಮ್ ಭಟ್, ಅಂಡಾಲ ದೇವಿ ಪ್ರಸಾದ್ ಶೆಟ್ಟಿ (ಗುರುಗಳು), ದೇವಿಪ್ರಸಾದ್ ಶೆಟ್ಟಿ (ಕಟೀಲು ಮೇಳದ ಧನಿಗಳು), ಪಡ್ರೆ ಶ್ರೀಧರ್ ಅಣ್ಣ, ಬಾಲಕೃಷ್ಣ ಪೂಜಾರಿ (ನಾಟ್ಯ ಗುರುಗಳು) ಪ್ರಖ್ಯಾತ್ ಶೆಟ್ಟಿ ಅಳಿಕೆ, ಜಯರಾಮ್ ಅಡೂರು, ಚೇತನ್ ಆಚಾರ್ ಸಚ್ಚರಿಪೇಟೆ ಕಟೀಲು ಒಂದನೇ ಮೇಳದ ಪ್ರತೀ ಕಲಾವಿದರು ಹಾಗೂ ನನ್ನ ಯಕ್ಷಗಾನದ ಛಾಯಾಚಿತ್ರ ಹಾಗೂ ವಿಡಿಯೋ ಮೂಲಕ ಬೆಂಬಲ ನೀಡೋ ಧನು ಕುಂದರ್ ಅಣ್ಣ, ಸುನಿಲ್ ಅಣ್ಣ ಎಕ್ಕಾರ್, ಪ್ರದೀಪ್ ಪಾಣಾಜೆ, ಬಿ ಬಿ ಕ್ರಿಯೇಷನ್ ಪಾಣಾಜೆ ಹಾಗೂ ಪ್ರಸ್ತುತ ನನ್ನ ಬಗ್ಗೆ ಲೇಖನ ಬರೆಯುವ ನಿಮಗೆ ಹಾಗೂ ಸರ್ವರಿಗೂ ನಾನು ಚಿರಋಣಿ.
ಹಾಡುವುದು, ಕ್ರಿಕೆಟ್, ಸಂಗೀತ ಕೇಳುವುದು ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment