ಯಕ್ಷ ಸಾಧಕರು 267
"ನಾದಮಯಿ"
ಉತ್ತರ ಕೇರಳದ ಕಾಸರಗೋಡಿಂದ, ಉತ್ತರ ಕನ್ನಡದ ಗೋಕರ್ಣ, ಅತ್ತ ಕನ್ನಡದ ಮಲೆನಾಡಲ್ಲೂ ಪಸರಿಸಿರುವ ಸರ್ವಾಂಗ ಸುಂದರ ಕಲೆಯೇ ಯಕ್ಷಗಾನ. ಯಕ್ಷರಂಗದಲ್ಲಿ ತಮ್ಮದೇ ಆದ ಕೈಚಳಕದಿಂದ ಹಿಮ್ಮೇಳದಲ್ಲಿ ಮಿಂಚುತ್ತಿರುವ ಕಲಾವಿದರು ನಂದಳಿಕೆ ಕೃಷ್ಣರಾಜ ಭಟ್.
31.03.1978 ರಂದು ನಂದಳಿಕೆ ವಾಸುದೇವ ಭಟ್ ಹಾಗೂ ಲೀಲಾವತಿ ಭಟ್ ಇವರ ಮಗನಾಗಿ ಜನನ. BBM ಪದವೀಧರ ಆದ ಇವರು ತಂದೆಯವರು ಭಾಗವತರು ಹಾಗು ಮದ್ದಳೆಗಾರರು ಆದುದರಿಂದ ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು. ಶ್ರೀಯುತ ಮಾಂಬಾಡಿ ಸುಬ್ರಮಣ್ಯ ಭಟ್ ಇವರ ಯಕ್ಷಗಾನ ಗುರುಗಳು. 2 ವರ್ಷ ಸುಂಕದಕಟ್ಟೆ ಮೇಳ, 3 ವರ್ಷ ಬೆಂಕಿನಾಥೇಶ್ವೇರ ಮೇಳ, 3 ವರ್ಷಗಳಿಂದ ಹಿರಿಯಡ್ಕ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 26 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಗುರುಗಳು ಮಾಂಬಾಡಿ ಸುಬ್ರಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪಿ.ಟಿ ಜಯರಾಮ ಭಟ್, ಅಡೂರು ಗಣೇಶ್ ರಾವ್, ಪೆರುವಾಯಿ ನಾರಾಯಣ ಭಟ್, ಡಿ ಸುಬ್ರಮಣ್ಯ ಭಟ್ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು.
ಪುತ್ತಿಗೆ ರಘುರಾಮ ಹೊಳ್ಳ, ಕುಬಣೂರು ಶ್ರೀಧರ ರಾವ್, ಬಲಿಪ ಪ್ರಸಾದ್ ಭಟ್, ದಿನೇಶ್ ಅಮ್ಮಣ್ಣಾಯ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ದಿನೇಶ್ ಭಟ್ ಯಲ್ಲಾಪುರ, ಬಲಿಪ ಶಿವಶಂಕರ ಭಟ್ ನೆಚ್ಚಿನ ಭಾಗವತರು.
ಕೃಷ್ಣ ಸಂಧಾನ, ಗದಾಯುದ್ಧ, ರಾವಣ ವಧೆ, ಮಾನಿಷಾಧ, ಇಂದ್ರಜಿತು ಕಾಳಗ, ಅಂಗದ ಸಂಧಾನ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಚೆನ್ನಾಗಿದೆ. ಮುಂಚೆ ಯಕ್ಷಗಾನಕ್ಕೆ ಕಲಾವಿದರ ಕೊರತೆ ಇತ್ತು, ಈಗ ಆ ಪರಿಸ್ಥಿತಿ ಇಲ್ಲ. ಈಗ ಮಕ್ಕಳು ಯುವಕರು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂಚೆ 4 ವೇಷವನ್ನು ಒಬ್ಬ ಕಲಾವಿದ ಮಾಡುತ್ತಿದ್ದ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಹಿಮ್ಮೇಳದಲ್ಲಿ ಬೆಳಗ್ಗಿನವರೆಗೆ 3 ಜನ ಮಾತ್ರ ಇರುತ್ತಿದ್ದರೆ ಈಗ 8 ಜನ ಇದ್ದಾರೆ. ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಯಕ್ಷಗಾನ ತರಗತಿಗಳು ಮಾಡುವ ಕಾರಣ ತುಂಬಾ ಬೆಳೆದಿದೆ. ಆದರೆ ಯಕ್ಷಗಾನದ ಸಂಪ್ರದಾಯ ಮರೆಮಾಚಿದೆ. ಸಂಪ್ರದಾಯಬದ್ಧ ಹಿಮ್ಮೇಳ, ವೇಷ ಕಾಣಲು ಸಿಗುತ್ತಿಲ್ಲ. ಯಕ್ಷಗಾನದ ಕಾಲ ಪ್ರಮಾಣ ಇಲ್ಲವಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಅಭಿರುಚಿ ಇರುವ ಪ್ರೇಕ್ಷಕರು ಹೆಚ್ಚಾಗಿ ಇದ್ದಾರೆ. ಈಗಿನ ಪ್ರೇಕ್ಷಕರಿಗೆ ಯಕ್ಷಗಾನದ a to z ಗೊತ್ತಿರುವ ಕಾರಣ ಕಲಾವಿದರಿಗೆ ಒಳ್ಳೆಯ ಪ್ರೋತ್ಸಾಹ ಸಿಗುತ್ತದೆ. ಕಾಲಮಿತಿ ಯಕ್ಷಗಾನದಿಂದ ಪ್ರೇಕ್ಷಕರ ಸಂಖ್ಯೆ ಬೆಳೆದಿದೆ ಹಾಗೂ ಪ್ರೇಕ್ಷಕರು ಕೊನೆಯವರೆಗೆ ಇರುತ್ತಾರೆ, ಇದು ತುಂಬಾ ಒಳ್ಳೆಯ ವಿಷಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಗುರುಗಳ ಆಶೀರ್ವಾದದಿಂದ ಹಲವು ಕಡೆಗಳಲ್ಲಿ ಹಿಮ್ಮೇಳದ ತರಗತಿ ಮಾಡುತ್ತಾ ಬರುತ್ತಿದ್ದೇನೆ. ಕೆಲವು ಶಿಷ್ಯರು ತಯಾರಾಗಿದ್ದಾರೆ. ಇದನ್ನೇ ಮುಂದುವರೆಸಿ, ಯಕ್ಷಗಾನಕ್ಕೆ ಹಿಮ್ಮೇಳ ಕಲಾವಿದರನ್ನು ತಯಾರು ಮಾಡಿ ಕೊಡಬೇಕೆಂದು ಯೋಚಿಸಿದ್ದೇನೆ.
ಸನ್ಮಾನ ಹಾಗೂ ಪ್ರಶಸ್ತಿ:-
♦ ಕುರಿಯ ವಿಠ್ಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ಉಜಿರೆ ಸನ್ಮಾನ.
♦ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು ಶತಮಾನೋತ್ಸವ ಸನ್ಮಾನ.
♦ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ವತಿಯಿಂದ ಸನ್ಮಾನ.
ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುವುದು, ಹಾಡುವುದು, ಪಾಠ ಮಾಡುವುದು, ಪುಸ್ತಕ ಸಂಗ್ರಹ ಹಾಗೂ ಓದುವುದು, ಪ್ರಸಂಗ ಅಧ್ಯಯನ ಇವರ ಹವ್ಯಾಸಗಳು.
30.11.2008ರಂದು ನಂದಳಿಕೆ ಕೃಷ್ಣರಾಜ ಭಟ್ ಅವರು ಸೌಮ್ಯ ಅವರನ್ನು ಮದುವೆಯಾಗಿ ಮಕ್ಕಳಾದ ಅನ್ನೀಕ ಹಾಗೂ ಅಹನ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿಯ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ನಂದಳಿಕೆ ಕೃಷ್ಣರಾಜ ಭಟ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Comments
Post a Comment