ಯಕ್ಷ ಸಾಧಕರು 271
"ಯಕ್ಷ ಪ್ರತೀಕ್ಷ"
ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಮಹಿಳಾ ಕಲಾವಿದರು ಇತ್ತೀಚಿನ ದಿನಗಳಲ್ಲಿ ನಮಗೆ ಕಾಣಲು ಸಿಗುತ್ತಾರೆ. ಅಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದೆ ಪ್ರತೀಕ್ಷ ಎಸ್ ಪೂಜಾರಿ.
28.10.1997ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಕೃಷ್ಣ ಮತ್ತು ಗೀತಾ ಇವರ ಮಗಳಾಗಿ ಜನನ. B.Sc IT, Mumbai University ಇವರ ವಿದ್ಯಾಭ್ಯಾಸ. ಮುಂಬೈಯ ಉಜಿರೆ ನಾರಾಯಣ ಗುರುಗಳ ಬಳಿ ಹೆಜ್ಜೆಗಾರಿಕೆ ಕಲಿತು ಪ್ರಸ್ತುತ ರಾಕೇಶ್ ರೈ ಅಡ್ಕ ಅವರ ಬಳಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-ರಂಗಕ್ಕೆ ಹೋಗುವ ಮೊದಲು Practice makes man perfect ಎನ್ನುವ ಹಾಗೆ ಪಾತ್ರ ಯಾವುದೆಂದು ತಿಳಿದುಕೊಂಡು ಅದಕ್ಕೆ ಬೇಕಾದ ತಯಾರಿಯನ್ನು ಯಾವ ರೀತಿ ಮಾಡಬೇಕೆಂದು ಅರಿತುಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರತೀಕ್ಷ ಎಸ್ ಪೂಜಾರಿ.
ಶ್ರೀ ದೇವಿ ಮಹಾತ್ಮೆ, ಭಸ್ಮಾಸುರ ಮೋಹಿನಿ, ಅಸಿಕ ಪರಿಣಯ ಇವರ ನೆಚ್ಚಿನ ಪ್ರಸಂಗಗಳು.
ದೇವಿ, ಮೋಹಿನಿ, ಮಾಲಿನಿ, ಅಸಿಕೆ ಇತ್ಯಾದಿ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ದಿನಗಳಲ್ಲಿ ಈ ಕಲೆಗೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತೋಷದ ಸಂಗತಿ. ಮಹಿಳಾ ಯಕ್ಷಗಾನ ವಿಸ್ತೃತ ರೂಪದಲ್ಲಿ ಸ್ವೀಕರಿಸಲ್ಪಟ್ಟಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ನಾನು ನನ್ನ ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ ಮುಗಿಸಿರುವುದರಿಂದ ಕನ್ನಡದ ಉಚ್ಚಾರಣೆ ಸ್ವಲ್ಪ ಮಟ್ಟಿಗೆ ಕಷ್ಟ ಎನಿಸಿದರೂ ಕೂಡಾ ಕಲಾಮಾತೆಯ ಸೇವೆಯನ್ನು ಇನ್ನಷ್ಟು ಮುಂದುವರಿಸಬೇಕೆಂಬ ಹಂಬಲ. ಹಾಗಾಗಿ ತಕ್ಕ ಮಟ್ಟಿಗೆ ಕನ್ನಡದ ಪ್ರಯತ್ನದೊಂದಿಗೆ ನನ್ನ ಬಾಳ ಸಂಗಾತಿಯ ಪ್ರೇರಣೆ ನನ್ನನ್ನು ಇಲ್ಲಿಯವರೆಗೆ ತಂದುಕೊಟ್ಟಿತು ಎಂಬುವುದನ್ನು ಈ ಹೊತ್ತಿನಲ್ಲಿ ನಾನು ತಿಳಿಸಲೇ ಬೇಕು. ಅದೇ ರೀತಿ ಕಲಾಮಾತೆಯ ಶುಭಾಶೀರ್ವಾದ ನನ್ನ ಮೇಲಿರಲಿ ಎನ್ನುವ ಆಶಯದೊಂದಿಗೆ ಪ್ರೇಕ್ಷಕರ ಜನಮನ ಗೆದ್ದಿರುವೆನೆಂಬ ನಂಬಿಕೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ರಂಗದಲ್ಲಿ ಇನ್ನು ಅನೇಕ ಹೊಸ ರೀತಿಯ ವೇಷವನ್ನು ಮಾಡಬೇಕು ಹಾಗೂ ರಂಗದಲ್ಲಿ ಮುಂದುವರಿದುಕೊಂಡು ಹೋಗಬೇಕು ಎಂಬ ಬಯಕೆ.
ಭ್ರಾಮರೀ ಯಕ್ಷ ನೃತ್ಯ ಕಲಾ ಕೇಂದ್ರ ಮುಂಬಯಿ ಹಾಗೂ ಪ್ರಸ್ತುತ ಸನಾತನ ಯಕ್ಷಾಲಯ ಮಂಗಳೂರು ತಂಡದಲ್ಲಿ ತಿರುಗಾಟ ಮಾಡಿದ ಅನುಭವ ಪ್ರತೀಕ್ಷ ಎಸ್ ಪೂಜಾರಿ ಅವರದು.
ಸನ್ಮಾನ ಹಾಗೂ ಪ್ರಶಸ್ತಿ:-
♦ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
♦ ಕರ್ನಾಟಕ ಚೇತನ ಸ್ಟೇಟ್ ಅವಾರ್ಡ್.
♦ ಭರತನಾಟ್ಯಕ್ಕೆ ನಾಟ್ಯ ಮಯೂರಿ ಅನ್ನುವ ಪ್ರಶಸ್ತಿಗಳು ಲಭಿಸಿರುತ್ತದೆ.
ನೃತ್ಯ, ಅಭಿನಯ ಹಾಗೂ ಬಿಡುವು ಇರುವ ಸಮಯದಲ್ಲಿ ಸಂಗೀತ ಕೇಳುವುದು ಇವರ ಹವ್ಯಾಸ.
ಪ್ರತೀಕ್ಷ ಎಸ್ ಪೂಜಾರಿ ಅವರು ಸೌಪರ್ಣ ಪಿ.ಕೆ ಅವರನ್ನು 29.04.2016ರಂದು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ, ಪತಿಯ ಪ್ರೋತ್ಸಾಹದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರತೀಕ್ಷ ಎಸ್ ಪೂಜಾರಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
Comments
Post a Comment