ಯಕ್ಷ ಸಾಧಕರು 286

"ಯಕ್ಷ ಕೇಸರಿ"

ದಕ್ಷಿಣ ಕನ್ನಡ ಜಿಲ್ಲೆಯ ಕೆಮ್ರಾಲ್ ಗ್ರಾಮದ ಹೊಸಕಾಡಿನ ಶ್ರೀನಿವಾಸ್ ಮಡಿವಾಳ ಹಾಗೂ ಪದ್ಮಾವತಿ ಇವರ ಮಗನಾಗಿ 4.11.1997 ರಂದು ದುರ್ಗಾಪ್ರಸಾದ್ ಹೊಸಕಾಡು ಅವರ ಜನನ. ಡಿಪ್ಲೊಮಾ ಇವರ ವಿದ್ಯಾಭ್ಯಾಸ. ಪ್ರಾಥಮಿಕ ಹೆಜ್ಜೆ ಕೃಷ್ಣಮೂರ್ತಿ ರಾವ್ ಅವರ ಬಳಿ ಕಲಿತು ನಂತರ ಪ್ರಸಾದ್ ಚೇರ್ಕಾಡಿ ಹಾಗೂ ಅಜಿತ್ ಕೆರೆಕಾಡು ಅವರ ಬಳಿ ಕಲಿತಿರುತ್ತಾರೆ.




ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಬಾಲ್ಯದಿಂದಲೇ ಯಕ್ಷಗಾನ ಆಸಕ್ತಿಯನ್ನು ಹೊಂದಿದಂತಹ ನಾನು ತಂದೆ ತಾಯಿಗಳ ಜೊತೆಗೆ ಯಕ್ಷಗಾನ ನೋಡಲು ಹೋಗುತ್ತಿದ್ದೆ ಆದ್ದರಿಂದ ತಂದೆ ತಾಯಿ ನನಗೆ ಪ್ರೇರಣೆ,

ನೆಚ್ಚಿನ ಪ್ರಸಂಗಗಳು:-
ದೇವಿ ಮಹಾತ್ಮೆ, ಹಿರಣ್ಯಾಕ್ಷ ವಧೆ, ಕರ್ಣಾರ್ಜುನ ಕಾಳಗ, ದಕ್ಷಯಜ್ಞ, ನಳದಮಯಂತಿ.
ನೆಚ್ಚಿನ ವೇಷಗಳು:-
ದೇವಿ ಮಹಾತ್ಮೆಯ ಶುಂಭ, ರಕ್ತ ಬೀಜ, ಅರ್ಜುನ, ವೀರಭದ್ರ, ದಕ್ಷ, ಹಿರಣ್ಯಾಕ್ಷ.





ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಹಾಗೂ ಪದ್ಯವನ್ನು ನೋಡಿ, ವೇಷದ ಬಗ್ಗೆ ಗುರುಗಳಲ್ಲಿ ರಂಗ ಮಾಹಿತಿಯನ್ನು ಪಡೆದು ತಯಾರಿಯನ್ನು ಮಾಡಿಕೊಳ್ಳುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಬಯಲಾಟ ಮೇಳದ ಯಕ್ಷಗಾನ ಕಾಲಮಿತಿ ಆದುದರಿಂದ ಕಲಾವಿದರಿಗೂ ಹಾಗೂ ಪ್ರೇಕ್ಷಕರಿಗೂ ಅನುಕೂಲ. ಯಾವನೇ ಒಬ್ಬ ಕಲಾವಿದ ಯಾವುದೇ ಪಾತ್ರವನ್ನು ಮಾಡುವಾಗಲೂ ಆ ಪಾತ್ರದ ಬಗ್ಗೆ ಪೂರ್ವ ತಯಾರಿಯನ್ನು ಮಾಡಿ ರಂಗಕ್ಕೆ ಹೋಗುವುದು ಉತ್ತಮ. ಅನುಭವ ಕಲಾವಿದರಲ್ಲಿ ಕೇಳಿ ತಿಳಿದು ರಂಗ ಪ್ರವೇಶ ಮಾಡುವುದು ಉತ್ತಮ. ಯಾವುದೋ ಗುರುಗಳ ಬಳಿಯಲ್ಲಿ ಕಲಿತ ವಿದ್ಯಾರ್ಥಿಗಳನ್ನು ತನ್ನೆಡೆಗೆ ಎಳೆದು ತಾನು ಗುರು ಆಗುವುದು ಬೇಸರದ ಸಂಗತಿ ಎಂದು ಹೇಳುತ್ತಾರೆ ದುರ್ಗಾಪ್ರಸಾದ್ ಹೊಸಕಾಡು.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಾಲಮಿತಿ ಆದುದರಿಂದ ಪ್ರೇಕ್ಷಕರು ಯಕ್ಷಗಾನದ ಮೇಲೆ ಆಸಕ್ತಿಯನ್ನು ಹೊಂದಿರುತ್ತಾರೆ. ವಿಮರ್ಶಕರು ಕಡಿಮೆಯಾದರೆ ಉತ್ತಮ.




ಇದೇ ರೀತಿ ಯಕ್ಷಗಾನದಲ್ಲಿ ಮುಂದುವರಿದು ದೇವರು ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಮುಂದುವರಿಸುತ್ತಾರೋ ಅಲ್ಲಿಯವರೆಗೆ ಮುಂದುವರಿದು ದೇವರ ಸೇವೆಯನ್ನು ಮಾಡಬೇಕೆಂಬುದೆ ಆಶಯ ಇದುವೇ ಮುಂದಿನ ಯೋಜನೆ ಎಂದು ಹೇಳುತ್ತಾರೆ ದುರ್ಗಾಪ್ರಸಾದ್ ಹೊಸಕಾಡು.

15 ವರ್ಷಗಳಿಂದ ಶ್ರೀ ವಿನಾಯಕ ಯಕ್ಷಕಲಾತಂಡ ಕೆರೆಕಾಡು ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಹಾಗೂ ಸೇವಾ ರೂಪದಲ್ಲಿ ಕಟೀಲು ಮೇಳ, ಬಪ್ಪನಾಡು ಮೇಳದಲ್ಲಿ ವೇಷ ಮಾಡಿದ ಅನುಭವ ದುರ್ಗಾಪ್ರಸಾದ್ ಹೊಸಕಾಡು ಅವರದು.
ಹಲವು ಸಂಘ - ಸಂಸ್ಥೆಗಳು, ಹುಟ್ಟೂರ ಸನ್ಮಾನ ಹಾಗೂ 'ಯಕ್ಷ ಕೇಸರಿ' ಏನ್ನುವಂತಹ ಬಿರುದನ್ನು ನೀಡಿ ಗೌರವಿಸಿದ್ದಾರೆ.




ತಂದೆ, ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ದುರ್ಗಾಪ್ರಸಾದ್ ಹೊಸಕಾಡು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395