ಯಕ್ಷ ಸಾಧಕರು 288

"ಭರವಸೆಯ ಪ್ರತಿಭೆ"

ಕರಾವಳಿ ಜಿಲ್ಲೆಯ ಗಂಡು ಕಲೆಯಾಗಿ ಪ್ರಸಿದ್ಧಿ ಪಡೆದ ಯಕ್ಷಗಾನ ವಿಶ್ವಮಾನ್ಯತೆಯನ್ನು ಪಡೆದುಕೊಂಡಿದೆ. ಯಕ್ಷಗಾನ ಕಲೆಯು ಪರಿಪೂರ್ಣ ಸರ್ವಾಂಗ ಸುಂದರ ಕಲೆ. ಈ ಸುಂದರ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿರುವ ಕಲಾವಿದ ಗುರು ಪ್ರಸಾದ್.

ಉಡುಪಿ ಜಿಲ್ಲೆಯ ಮಂದಾರ್ತಿಯ ನೀರ್ಜೆಡ್ಡಿನ ಕೃಷ್ಣ ಹಾಗೂ ರುಕ್ಮಿಣಿ ದಂಪತಿಯರ ಮಗನಾಗಿ 25.04.1998ರಂದು ಗುರು ಪ್ರಸಾದ್ ಅವರ ಜನನ. ಪಿಯುಸಿ ಇವರ ವಿದ್ಯಾಭ್ಯಾಸ. ಹಾರಾಡಿ ರಮೇಶ್ ಗಾಣಿಗ ಇವರ ಯಕ್ಷಗಾನ ಗುರುಗಳು. ಯಕ್ಷಗಾನ ಬಯಲಾಟ ನೋಡಿ ಪ್ರೇರಣೆಯಾಗಿ ಯಕ್ಷಗಾನ ರಂಗಕ್ಕೆ ಬಂದೆ ಎಂದು ಹೇಳುತ್ತಾರೆ ಗುರು ಪ್ರಸಾದ್.


ನೆಚ್ಚಿನ ಪ್ರಸಂಗಗಳು:-
ಕರ್ಣಾರ್ಜುನ, ರಾಮ ನಿರ್ಯಾಣ, ಸುಧನ್ವ ಕಾಳಗ, ಕೃಷ್ಣಾರ್ಜುನ, ಶ್ರೀಕೃಷ್ಣ ಪರಂಧಾಮ.

ನೆಚ್ಚಿನ ವೇಷಗಳು:-
ಮೀನಾಕ್ಷಿ, ರತಿ, ವಿಶಯೆ, ಅಸಿಕೆ, ಸುಭದ್ರೆ, ಕೌಸವಿ, ರುಕ್ಮಿಣಿ, ಪದ್ಮಾವತಿ, ಭ್ರಮರಕುಂತಳೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ವೇಷದ ಹಿನ್ನೆಲೆ ಪಾತ್ರದ ಗರಿಷ್ಟತೆ ಕಾಪಿಡುವಲ್ಲಿ ಪುರಾಣ ಅಧ್ಯಯನ ಮಾಡಿ ಹಾಗೂ ಸಹ ಕಲಾವಿದರ ಬಳಿ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಗುರು ಪ್ರಸಾದ್.



ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಮೊದಲಿನ ಯಕ್ಷಗಾನ ನೋಡಿಲ್ಲ; ಹೀಗಿದೆ ಅನ್ನೋದನ್ನ ಕೇಳಿದ್ದೆ. ಯಕ್ಷಗಾನ ನಾನು ನೋಡುವ ಮಟ್ಟಿಗೆ ಈಗಿನ ಯಕ್ಷಗಾನ ಜನರನ್ನು ರಂಜಿಸುವಲ್ಲಿ ಪರಿಷ್ಕರಣೆ ಹೊಂದುತ್ತಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗ ಒಟ್ಟು 3 ವಿಧದ ಪ್ರೇಕ್ಷಕರು
೧. ಯಕ್ಷಗಾನದ ಬಗ್ಗೆ ಏನು ಗೊತ್ತಿಲ್ಲದೆ ಟೀಕಿಸುವುದು.
೨. ಮೊಬೈಲ್ನಲ್ಲಿ ನೋಡಿ ಕಲಾವಿದರನ್ನು ದೂಶಿಸುವುದು.
೩. ಸಭ್ಯ ಪ್ರೇಕ್ಷಕರು ಕಲಾ ಪೋಷಕರು.

ಮಂದಾರ್ತಿ ಮೇಳ 4 ವರ್ಷ, ಅಮೃತೇಶ್ವರಿ ಮೇಳ 1 ವರ್ಷ, ಮಡಾಮಕ್ಕಿ ಮೇಳ 1 ವರ್ಷ, ಮಾರಣಕಟ್ಟೆ ಮೇಳದಲ್ಲಿ 4 ವರ್ಷಗಳ ತಿರುಗಾಟ ಮಾಡಿ ಪ್ರಸ್ತುತ ಹಾಲಾಡಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 11 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.
ಎಲ್ಲಾ ಮೇಳದಲ್ಲಿಯೂ ಹೊಸ, ಹೊಸ ಅನುಭವ ಪಡೆದುಕೊಂಡೆ ಎಂದು ಹೇಳುತ್ತಾರೆ ಗುರು ಪ್ರಸಾದ್.

ಪುಸ್ತಕ ಓದುವುದು, ಯಕ್ಷಗಾನ ತಾಳಮದ್ದಳೆ ನೋಡುವುದು ಇವರ ಹವ್ಯಾಸ.

ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಗುರು ಪ್ರಸಾದ್.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395