ಯಕ್ಷ ಸಾಧಕರು 289

"ಯಕ್ಷ ಪ್ರಣವ"

ಯಕ್ಷಗಾನವು ಸಂಗೀತ ಮತ್ತು ಸಾಹಿತ್ಯಿಕ ನೃತ್ಯದ ಪರಿಪೂರ್ಣ ಭಾಗವಾಗಿದೆ. ನಟನೆಯ ಎಲ್ಲಾ ವಿಷಯಗಳು ಇದರಲ್ಲಿವೆ. ಯಕ್ಷಗಾನವು ಜನಸಾಮಾನ್ಯರ ಭಕ್ತಿ ಮತ್ತು ಧಾರ್ಮಿಕತೆಯಿಂದ ಜನಪ್ರಿಯವಾಗಿದೆ ಇಂತಹ ಭಕ್ತಿ ಹಾಗೂ ಜನಪ್ರಿಯ ಕಲೆಯಲ್ಲಿ ತಮ್ಮ ಪ್ರತಿಭ ಪ್ರದರ್ಶನ ನೀಡುತ್ತಿರುವ ಕಲಾವಿದ ಪ್ರಣವ ನಾರಾಯಣ ಭಟ್.

27.07.1995 ರಂದು ನಾರಾಯಣ ಭಟ್ ಹಾಗೂ ಸುಧಾ ಇವರ ಮಗನಾಗಿ ಜನನ. ಪಿಯುಸಿ ಇವರ ವಿದ್ಯಾಭ್ಯಾಸ. ಅಜ್ಜನಿಂದಲೇ ಪ್ರೇರಣೆಯಾಗಿ ಆನಂತರ ಯಕ್ಷಗಾನದ ಮೇಲೆ ಪ್ರೇರಣೆಯಾಯಿತು. ತಾಳ, ಹೆಜ್ಜೆಯ ಗುರುಗಳು ಹೊಸ್ತೋಟ ಮಂಜುನಾಥ್ ಭಾಗ್ವತ್ ಹಾಗೂ ಕೆಳಮನೆ ರಂಗ ಪ್ರವೇಶ ಮಾಡಿಸಿದ್ದು ಐನಬೈಲ್ ಪರಮೇಶ್ವರ ಭಾಗ್ವತ್.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗ ಪ್ರತಿಯನ್ನು ಒಮ್ಮೆ ಓದಿ, ತಿಳಿದವರಲ್ಲಿ ಕೇಳಿ, ಸಂಬಂಧ ಪಟ್ಟ ಪುಸ್ತಕ ಓದಿ, ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರಣವ ನಾರಾಯಣ ಭಟ್.

ನೆಚ್ಚಿನ ಪ್ರಸಂಗಗಳು:-
ಸುಧನ್ವ ಮೋಕ್ಷ, ಚಂದ್ರಹಾಸ, ಧರ್ಮಂಗದ, ಭೀಷ್ಮ ಪರ್ವ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು.
ನೆಚ್ಚಿನ ವೇಷಗಳು:-
ಸುಧನ್ವ, ಕೃಷ್ಣ, ವೀರಮಣಿ, ಚಂದ್ರಹಾಸ, ಧರ್ಮಾಂಗದ ಇನ್ನು ಹಲವು ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಶ್ರೀಮಂತ ಕಲೆ, ಹಲವಾರು ಜನರಿಗೆ ಅನ್ನ, ಆಶ್ರಯ, ಜೀವನ ಎಲ್ಲವೂ ಕೊಟ್ಟಿದೆ, ಹೇಗೆ ಇರಬೇಕು ಎನ್ನುವುದು ನಮ್ಮ ಆಶಯ..




ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕ ಒಬ್ಬ ಗುರುವೂ ಹೌದು, ದೇವರೂ ಹೌದು. ಕಾರಣ ತಪ್ಪಿದ್ದದ್ದನ್ನು ಬಂದು ಹೇಳುವ ಹಲವು ಪ್ರೇಕ್ಷಕರನ್ನು ನಾನು ಕಂಡೆ. ಅಲ್ಲಿಂದ ತಪ್ಪನ್ನು ಸರಿ ಮಾಡಿಕೊಂಡೆ. ಹಾಗಾಗಿ ಗುರುವಾದರೆ, ಕಲಾವಿದನನ್ನು ಕಂಡು ಹರಸುವ ಪ್ರೋತ್ಸಾಹಿಸುವ ದೇವರನ್ನು ನಾನು ಕಂಡೆ.
ಆದರೆ ಒಂದು ಬೇಸರದ ಸಂಗತಿ, ಈಗೀಗ ಕೆಲವು ಪ್ರೇಕ್ಷಕರು ಕಲಾವಿದರ ಅಭಿಮಾನಿ ಆಗುತ್ತಿದ್ದಾರೆ... ಅದು ಬದಲಾಗಿ ಕಲೆಯ ಅಭಿಮಾನಿ ಆದ್ರೆ ಒಳ್ಳೆಯದು ಅಂತ ಅನಿಸಿಕೆ. ಅದು ಎಲ್ಲ ಕಲಾವಿದರ ಬೆಳವಣಿಗೆಗೆ ಅನುಕೂಲ. ಯಾಕಂದರೆ ಒಬ್ಬ ಕಲಾವಿದನಿಂದ ಆಟ ಆಗುವುದಿಲ್ಲ ಎಲ್ಲಾ ಕಲಾವಿದರ ಪರಿಶ್ರಮ ಅಗತ್ಯ, ಅನಿವಾರ್ಯ. ಚಂದ್ರಹಾಸ, ದುಷ್ಟಬುದ್ಧಿ, ವಿಷಯ ಮಾತ್ರ ಒಳ್ಳೆಯದಿದ್ರೆ ಆಗೋಲ್ಲ, ಕುಳಿಂದ, ಕಪ್ಪದ ದೂತನು ಒಳ್ಳೆಯದು ಮಾಡಿದ್ರೆ ಆಟ ಚಂದಕಾಣುತ್ತೆ...

ಬದುಕು ಕೊಟ್ಟ ಕ್ಷೇತ್ರದಲ್ಲಿ ಇನ್ನೂ ಸಾಧಿಸಬೇಕು ಎನ್ನುವ ಛಲ ಇದೆ ಇದುವೇ ಮುಂದಿನ ಯೋಜನೆ ಎಂದು ಹೇಳುತ್ತಾರೆ ಪ್ರಣವ.

1 ವರ್ಷ ಮಂದಾರ್ತಿ ಮೇಳ, 7 ವರ್ಷ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡಿ 4 ವರ್ಷದಿಂದ ಅತಿಥಿ ಕಲಾವಿದರಾಗಿ ಹೋಗಿ ಮುಂದಿನ ತಿರುಗಾಟವನ್ನು ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡಲಿದ್ದಾರೆ ಪ್ರಣವ.
ತಾಳಮದ್ದಲೆ ಕೇಳುವುದು, ಪುಸ್ತಕ ಓದುವುದು, ಯಕ್ಷಗಾನ ನೋಡುವುದು ಇವರ ಹವ್ಯಾಸಗಳು.

ಪ್ರಣವ ನಾರಾಯಣ ಭಟ್ ಅವರು 17.02.2021ರಂದು ಕವನ ಅವರನ್ನು ಮದುವೆಯಾಗಿ ಮಗ ಶಮನ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.


ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರಣವ ನಾರಾಯಣ ಭಟ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395