ಯಕ್ಷ ಸಾಧಕರು 303
"ಸತ್ವಪೂರ್ಣ ಯಕ್ಷಗಾನ ವೇಷಧಾರಿ"
ರತ್ನ ಗಾಣಿಗ ಹಾಗೂ ಅಂತ ಗಾಣಿಗ ಇವರ ಮಗನಾಗಿ 12-02-1979 ರಂದು ಜಗನ್ನಾಥ ಗಾಣಿಗ ಸಿಪಾಯಿ ಮನೆ ಅವರ ಜನನ. SSLC ಇವರ ವಿದ್ಯಾಭ್ಯಾಸ. ಇವರು ಕೆಲಸ ಮಾಡುತ್ತಿದ್ದ NGO ಸಂಸ್ಥೆಯಾದ ನಮ್ಮ ಭೂಮಿ ಸಂಸ್ಥೆ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಹಾಗೂ ಪ್ರಸಂಗಕರ್ತರಾಗಿ, ಭಾಗವತರಾಗಿ, ಯಕ್ಷ ಗುರುಗಳಾಗಿ ಅನೇಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಶ್ರೀಯುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ ಅಧ್ಯಯನ ಮಾಡಿಕೊಂಡು, ಹಿರಿಯ, ಅನುಭವಿ ಕಲಾವಿದರಲ್ಲಿ ಮಾರ್ಗದರ್ಶನ ಪಡೆದು, ಸಾಂದರ್ಭಿಕವಾಗಿ, ಸಕಾಲಿಕವಾಗಿ, ಸ್ವಂತ ನಿಲುವನ್ನು ಸೇರಿಸಿಕೊಂಡು ರಂಗವನ್ನು ಪ್ರವೇಶಿಸುತ್ತೇನೆ.
ನೆಚ್ಚಿನ ಪ್ರಸಂಗಗಳು:-
ಕಂಸ ವಧೆ, ಶ್ರೀ ದೇವಿ ಮಹಾತ್ಮೆ, ರತ್ನಾವತಿ ಕಲ್ಯಾಣ, ಸುಂದೋಪಸುಂದ ಕಾಳಗ, ಶ್ವೇತ ಕುಮಾರ ಚರಿತ್ರೆ, ಜಾಂಬವತಿ ಕಲ್ಯಾಣ.
ನೆಚ್ಚಿನ ವೇಷಗಳು:-
ಕಂಸ, ಜಾಂಬವ, ದುರ್ಜಯ, ಭಧ್ರಸೇನ, ಮಧು, ಕೈಟಭ, ಚಂಡ, ಮುಂಡ, ಅರ್ಜುನ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಇಂದಿನ ಸ್ಥಿತಿ ಉತ್ತಮವಾಗಿದೆ. ಯುವ ಜನಾಂಗ ಯಕ್ಷಗಾನದತ್ತ ಆಕರ್ಷಿಸುತ್ತಿದ್ದಾರೆ. ಅಲ್ಲದೇ ಯುವ ಜನಾಂಗ ಹವ್ಯಾಸಿಯಾಗಿಯೋ ಅಥವಾ ವೃತ್ತಿ ಕಲಾವಿದರಾಗಿ ತಯಾರಾಗುತ್ತಿದ್ದಾರೆ. ಇತ್ತೀಚಿನ ಹೊಸ ಪ್ರಸಂಗಗಳು ಯಕ್ಷಗಾನ ಚೌಕಟ್ಟು ಮೀರಿ ಪ್ರದರ್ಶನಗೊಳ್ಳುತ್ತಿವೆ. ಯುವ ಕಲಾವಿದರು ಹೊಸತನದೊಂದಿಗೆ ಪರಂಪರೆಯನ್ನು ಉಳಿಸುವಲ್ಲಿ ಮನಸ್ಸು ಮಾಡಬೇಕು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇತ್ತೀಚಿಗೆ ಯಕ್ಷಗಾನಕ್ಕೆ ಪ್ರೇಕ್ಷಕರ ಸಂಖ್ಯೆ ಅಧಿಕವಾಗಿದೆ. ವಿದ್ಯಾವಂತ ಯುವ ಜನಾಂಗವೂ ಕೂಡ ಅಧಿಕ ಸಂಖ್ಯೆಯಲ್ಲಿ ಯಕ್ಷಗಾನಕ್ಕೆ ಆಕರ್ಷಿಸುತ್ತಿದ್ದಾರೆ. ಪ್ರೇಕ್ಷಕ ವರ್ಗ ಯಾವುದೇ ಒಬ್ಬ ಕಲಾವಿದನ ಅಭಿಮಾನಿ ಆಗಿರದೆ ಯಕ್ಷಗಾನ ಕಲೆಯ ಅಭಿಮಾನಿಯಾದರೆ ಯಕ್ಷಗಾನ ಬೆಳವಣಿಗೆಗೆ ಪೂರಕ.
ಯಕ್ಷಗಾನದ ಕಲೆಯಂದರೆ ನಮ್ಮ ಹೆಮ್ಮೆ ಮತ್ತು ಉಸಿರು. ಈ ಶ್ರೀಮಂತ ಕಲೆಯಲ್ಲಿ ಇನ್ನು ಅನೇಕ ಯುವ ಕಲಾವಿದರನ್ನು ತಯಾರು ಮಾಡಬೇಕು ಹಾಗೂ ಮಕ್ಕಳಿಗೆ ಯಕ್ಷಗಾನ ಹೆಜ್ಜೆ ಹೇಳಿಕೊಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಜಗನ್ನಾಥ ಗಾಣಿಗ.
ಪುಸ್ತಕ ಓದುವುದು, ಕೃಷಿ ಇವರ ಹವ್ಯಾಸಗಳು. ಹಲವು ಕಡೆಯಲ್ಲಿ ಹವ್ಯಾಸಿಯಾಗಿ ವೇಷ ಮಾಡಿದ ಅನುಭವ ಇವರದು.
ಜಗನ್ನಾಥ ಗಾಣಿಗ ಅವರು 7.04.2010ರಂದು ಲೀಲಾವತಿ ಗಾಣಿಗ ಅವರನ್ನು ಮದುವೆಯಾಗಿ ಮಕ್ಕಳಾದ ಅನನ್ಯ, ಅಭಿನವ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಮಕ್ಕಳು ಯಕ್ಷಗಾನದಲ್ಲಿ ಕೆಲವು ವೇಷವನ್ನು ಮಾಡಿದ್ದಾರೆ.
ತಂದೆ, ತಾಯಿ ಹಾಗೂ ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಜಗನ್ನಾಥ ಗಾಣಿಗ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +918317463705
Comments
Post a Comment