ಯಕ್ಷ ಸಾಧಕರು 305

"ಯಕ್ಷಕಲಾಪ್ರೇಮದ ಯುಗಳ ತಿಟ್ಟಿನ ಪ್ರತಿಭೆ"

ಯಕ್ಷಗಾನ ಗಂಡು ಮೆಟ್ಟಿದ ಕಲೆ ಎಂದು ಲಾಗಾಯ್ತಿನಿಂದಲೂ ಕರೆಸಿಕೊಂಡು ಮೆರೆದ ಕಮನೀಯ ಕಲೆ. ಇದರಲ್ಲಿ ಹೆಂಗಳೆಯರು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದಿದ್ದಾರೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಸರ್ವಾಂಗ ಸುಂದರವಾದ ಸಮಷ್ಟಿ ಕಲೆ, ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ ಯಕ್ಷಗಾನ ರಂಗದಲ್ಲಿ ತಮ್ಮ   ಪ್ರತಿಭೆಯ ಮೂಲಕ ಮಿಂಚುತ್ತಿರುವ ಕಲಾವಿದೆ ಪ್ರೇಮಾ ಹೆಗಡೆ.


22.05.1974ರಂದು ಪರಮೇಶ್ವರ ಹೆಗಡೆ ಹಾಗೂ ರೇಣುಕಾ ಹೆಗಡೆ ಇವರ ಮಗಳಾಗಿ ಜನಸಿದ ಇವರು ಬಿ.ಕಾಂ ಹಾಗೂ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ. ಕೆರೆಮನೆ ಶ್ರೀ ಶಂಭು ಹೆಗಡೆಯವರು ಹಾಗೂ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಅವರ ವೇಷಗಳನ್ನು ನೋಡಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಪ್ರೇಮಾ.
              
ಯಕ್ಷಗಾನ ಗುರುಗಳು:-
ಶ್ರೀಮತಿ ಆರತಿ ಪಟ್ರಮೆ (ತೆಂಕುತಿಟ್ಟು)
ಶ್ರೀ ವೆಂಕಟ್ರಮಣ ಭಟ್ ಗುಡ್ಡೇಮನೆ (ಬಡಗು)
ಶ್ರೀ ಉಮೇಶ ಹೆಗಡೆ ಹೊಂಕಣಕೇರಿ (ಬಡಗು)

ಗದಾಯುದ್ಧ, ಗೀತಾನುಸಂಧಾನ ನೆಚ್ಚಿನ ಪ್ರಸಂಗಗಳು. ಈಶ್ವರ, ವಿಷ್ಣು, ಕೃಷ್ಣ, ಭಸ್ಮಾಸುರ, ಕಂಸ, ಮೋಹಿನಿ ನೆಚ್ಚಿನ ವೇಷಗಳು.





ರಂಗಕ್ಕೆ ಹೋಗುವ ಮೊದಲು ಇಡೀ ಪ್ರಸಂಗದ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ನನ್ನ ಪಾತ್ರದ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಿ ಪುಸ್ತಕಗಳನ್ನು ಓದಿ ತಯಾರಿ ಮಾಡಿಕೊಳ್ಳುತ್ತೇನೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಒಳ್ಳೆಯ ಪೌರಾಣಿಕ ಪ್ರಸಂಗಗಳನ್ನು ಮಾಡಿದರೆ ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಸ್ವಾದಿಸುವ ಪ್ರೇಕ್ಷಕರಿದ್ದಾರೆ.

ಸುದರ್ಶನ ಯಕ್ಷಕಲಾ ಬಳಗ, ಯಕ್ಷಸುರಭಿ, ಯಕ್ಷದೀವಿಗೆ, ಯಕ್ಷಗೆಜ್ಜೆ ತಂಡಲ್ಲಿ ಭಾಗವಹಿಸಿ ವೇಷವನ್ನು ಮಾಡಿದ ಅನುಭವ ಪ್ರೇಮಾ ಹೆಗಡೆಯವರದು.
ಪುಸ್ತಕಗಳನ್ನು ಓದುವುದು, ಪೇಂಟಿಂಗ್, ಕಸೂತಿ ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುವುದು ಇವರ ಹವ್ಯಾಸಗಳು.






ಪ್ರೇಮಾ ಹೆಗಡೆ ಅವರು 17.02.1997ರಂದು ಮಹಾಬಲೇಶ್ವರ ಹೆಗಡೆ (ಖಾಸಗಿ ಕಂಪನಿಯಲ್ಲಿ ಡೈರೆಕ್ಟರ್) ಅವರನ್ನು ಮದುವೆಯಾಗಿ ಮಗ ಸಂಜಯ್ ಹೆಗಡೆ Senior software engineer ಆಗಿ ಕೆಲಸ ಮಾಡಿ ಪ್ರಸ್ತುತ MBA ವ್ಯಾಸಂಗ ಮಾಡುತ್ತಿದ್ದಾರೆ.

ತಂದೆ ತಾಯಿ ಪತಿಯ ಪ್ರೋತ್ಸಾಹ ಹಾಗೂ ಗುರು-ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ ಪ್ರೇಮಾ ಹೆಗಡೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 897127565
1

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395