ಯಕ್ಷ ಸಾಧಕರು 311
"ಗಾನಸಿರಿ"
ಯಕ್ಷಗಾನ ಮೇಳದಲ್ಲಿ ಕೆಲಸಕ್ಕೆ ಸೇರಿ ಮುಂದೆ ಅಲ್ಲೇ ವೇಷ, ಚೆಂಡೆ, ಸಂಗೀತ, ಭಾಗವತಿಕೆ ಕಲಿತು ಇಂದು ಸಹ ಭಾಗವತನಾಗಿ ಬೆಳೆದು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದ ಮಧುಕರ್ ಹೆಗ್ಡೆ ಮಡಾಮಕ್ಕಿ.
8.10.1997 ರಂದು ತಿಮ್ಮಪ್ಪ ಹೆಗ್ಡೆ ಹಾಗೂ ನಾಗರತ್ನ ಹೆಗ್ಡೆ ಇವರ ಮಗನಾಗಿ ಮಧುಕರ್ ಹೆಗ್ಡೆ ಮಡಾಮಕ್ಕಿ ಅವರ ಜನನ. ದ್ವಿತೀಯ ಪಿಯುಸಿ ಇವರ ವಿದ್ಯಾಭ್ಯಾಸ. ಯಕ್ಷಗಾನ ಕಲೆಯ ಮೇಲೆ ಮನಸೋತು ಹಾಗೂ ಆರ್ಡಿ ಸಂತೋಷ್, ಹೆರಂಜಾಲು ಗೋಪಾಲ ಗಾಣಿಗರ ಭಾಗವತಿಕೆಯಿಂದ ಪ್ರೇರೇಪಣೆಗೊಂಡು ಇವರು ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಯಕ್ಷಗಾನ ಗುರುಗಳು:-
ಮುಖ್ಯ ಗುರುಗಳು ಹಿರಿಯವರಾದ ಕೃಷ್ಣಯ್ಯ ಆಚಾರ್ಯ ಬಿದ್ಕಲ್ಕಟ್ಟೆ, ಮಹೇಶ್ ಕುಮಾರ್ ಮಂದಾರ್ತಿ, ರಂಗದಲ್ಲಿ ಒಟ್ಟಿಗೆ ಸಿಕ್ಕಾಗ ನನ್ನ ಕೆಲವು ತಪ್ಪುಗಳನ್ನ ಹುಡುಕಿ ತಿದ್ದಿ ಸರಿ ಮಾಡಿ ಅತಿಯಾಗಿ ಪ್ರೋತ್ಸಾಹ ನೀಡಿದವರು ಎನ್.ಜಿ ಹೆಗಡೆ ಯಲ್ಲಾಪುರ ಹಾಗೂ ಶ್ರೀಕಾಂತ ಶೆಟ್ಟಿ ಯಾಡಮೊಗೆ.
ಯಕ್ಷಗಾನದ ಮೊದಲ ಗುರು ಮಡಾಮಕ್ಕಿ ವೀರಭದ್ರ ಸ್ವಾಮಿ. ಯಾಕೆಂದ್ರೆ ಮಡಾಮಕ್ಕಿ ಮೇಳದಲ್ಲಿ ಮೊದಲು ಕೆಲಸಕ್ಕೆ ಸೇರಿಕೊಂಡದ್ದು, ಅಲ್ಲೇ ವೇಷ ಮಾಡಿಕೊಳ್ಳಿಕ್ಕೆ ಕಲಿತದ್ದು. ಯಕ್ಷಗಾನದ ಮೊದಲ ಹೆಜ್ಜೆ ಮಡಾಮಕ್ಕಿ ಮೇಳ. ನಮ್ಮ ಮೇಳದ ಬಗ್ಗೆ ತುಂಬಾ ಹೆಮ್ಮೆ ಗೌರವ. ಹಾಗಾಗಿ ಆ ಮೇಲೆ 2 ವರ್ಷ ಮೇಳ ಬಿಟ್ಟು ಮಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡಿ ಪುನಃ ಮಂದಾರ್ತಿ ಕೇಂದ್ರದಲ್ಲಿ ಕಲಿತು ಅಲ್ಲಿಂದ ಮಂದಾರ್ತಿ ಮೇಳಕ್ಕೆ ಸೇರಿದೆ. 7 ವರ್ಷ ನಿರಂತರ ತಿರುಗಾಟ ಮುಗಿದಿದೆ. 1 ವರ್ಷ ವೇಷ, 1 ವರ್ಷ ಚೆಂಡೆಗಾರಿಕೆ, 5 ವರ್ಷ ಸಂಗೀತ ಮಾಡಿ ಮುಂದಿನ ತಿರುಗಾಟದಿಂದ ಸಹ ಭಾಗವತನಾಗಿ ಸೇವೆಯನ್ನು ಮುಂದುವರಿಸಿ ಯಕ್ಷಗಾನ ರಂಗದಲ್ಲಿ ಒಟ್ಟು 10 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಮಧುಕರ್ ಹೆಗ್ಡೆ ಮಡಾಮಕ್ಕಿ.
ನಾಗಾನಂದನೆ ಇವರ ನನ್ನ ನೆಚ್ಚಿನ ಪ್ರಸಂಗ.
ಕರುಣಾರಸದ, ಭಕ್ತಿರಸ, ದುಃಖ ರಸದ ರಾಗ ಇಷ್ಟ (ಕಲ್ಯಾಣಿ, ಸಿಂಧುಭೈರವಿ, ಭೈರವಿ, ಪೂರ್ವಿ, ಆನಂದ ಭೈರವಿ, ಸೌರಾಷ್ಟ್ರ,ಕಾನಡ, ಅಠಣ್, ಚಾರುಕೇಶಿ, ಶಹನ, ಶಿವರಂಜಿನಿ, ರಂಜಿನಿ, ನೀಲಂಬರಿ, ರೇವತಿ ಹೀಗೆ ಕೆಲವು) ಇವರ ನೆಚ್ಚಿನ ರಾಗಗಳು.
ಚಂಡೆ ಮದ್ದಳೆ ಇಷ್ಟದವರು ತುಂಬಾ ಜನ ಇದ್ದಾರೆ. ಅತೀ ಇಷ್ಟ ಅಂತ ಯಾರಿಲ್ಲ ವೈಯಕ್ತಿಕವಾಗಿ ತುಂಬಾ ಇಷ್ಟ ಆದವರು ಚಂಡೆ ಉದಯ್ ಸುವರ್ಣ ಐರೋಡಿ.
ನಗರ ಸುಬ್ರಮಣ್ಯ ಆಚಾರ್, ಹೆರಂಜಾಲು ಗೋಪಾಲ ಗಾಣಿಗ, ಪಟ್ಲ ಸತೀಶ್ ಶೆಟ್ಟಿ, ಗಣೇಶ್ ಆಚಾರ್ ಬಿಲ್ಲಾಡಿ ನೆಚ್ಚಿನ ಭಾಗವತರು.
ಯಕ್ಷಗಾನದ ಇಂದಿನ ಸ್ಥಿತಿ:-
ಗುಣಮಟ್ಟ ಕಳೆದುಕೊಂಡಿದೆ. ಇದಕ್ಕೆ ಕಾರಣ ಕಲಾವಿದನು ಹೌದು, ಕೆಲವೊಂದು ಪ್ರೇಕ್ಷಕನು ಹೌದು. ಯಾಕೆಂದ್ರೆ ಕಲಾವಿದನ ಪ್ರಯತ್ನ, ಶೃದ್ದೆ, ಕಡಿಮೆಯಾಗಿದೆ. ಕಲಾವಿದರು ಯಕ್ಷಗಾನಕ್ಕೆ ಪ್ರವೇಶ ಮಾಡುವಾಗ ಇದನ್ನು ಕಲೆಯಾಗಿ ಗೌರವಿಸುತ್ತಾರೆ. 1 ವರ್ಷದ ತಿರುಗಾಟದ ನಂತರ ಕೇವಲ ಉದ್ಯೋಗ ಕ್ಷೇತ್ರ ಎನ್ನುವ ಹಾಗೆ ತಿಳಿದುಕೊಂಡು ಕಲಾವಿದನಾಗಿ ಕೆಲಸ ಮಾಡುವುದಿಲ್ಲ. ಬರಿ ವೇಷಧಾರಿಯಾಗಿ, ಹಾಡುಗಾರನಾಗಿ ಇರುತ್ತಾರೆ. ಹಾಗಾಗಿ ಗುಣಮಟ್ಟ ಕಳೆದುಕೊಂಡಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಎಷ್ಟೋ ಜನ ಒಳ್ಳೆಯ ಪ್ರೇಕ್ಷಕರು ಇದ್ದಾರೆ. ಆದರೆ ಹೆಚ್ಚು ಜನರು ಅರ್ಧ ಯಕ್ಷಗಾನ ನೋಡಿ ಬರಿ ತಪ್ಪುಗಳನ್ನು ಹುಡುಕಿ ಅರ್ಥ ಜ್ಞಾನ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದನ ತೇಜೋವಧೆ ಮಾಡುತ್ತಾರೆ. ಕಲಾವಿದನಿಗೆ ಚೇತನದಾಯಕರಾದಂತ ದೇವರಾದಂತಹ ಪ್ರೇಕ್ಷಕರು ಕೆಲವರು ಕೆಲವು ಪಾಪದ ಕಲಾವಿದನ ಉತ್ಸಾಹವನ್ನ ಕುಗ್ಗಿಸುತ್ತಾರೆ. ಇದೇ ಯಕ್ಷಗಾನದ ಅಳಿವಿಗೆ ಕಾರಣ ಆಗುತ್ತದೆ. ಹಾಗಾಗಿ ಪ್ರತಿಯೊಬ್ಬ ಪ್ರೇಕ್ಷಕನು ಆಟ ಮುಗಿಯುವವರೆಗೂ ಕುಳಿತು ಕಲಾವಿದನು ರಂಗದಲ್ಲಿ ಮಾಡುವ ತಪ್ಪುಗಳನ್ನು ಅಳೆದು ನೇರವಾಗಿ ಚೌಕಿಗೆ ಬಂದು ಕಲಾವಿದನಲ್ಲಿ ವಿಮರ್ಶೆ ಮಾಡಿ ಮಾತಾಡಿ ತಪ್ಪನ್ನು ತಿದ್ದಿ ಕಲೆ ಕಲಾವಿದನನ್ನು ಪ್ರೋತ್ಸಾಹಿಸಿ ಯಕ್ಷಗಾನವನ್ನು ಎತ್ತರಕ್ಕೆ ಕೊಂಡೋಯ್ಯುವಲ್ಲಿ ಆಸಕ್ತಿ ಹೆಚ್ಚಿಸಿಕೊಂಡರೆ ಯಕ್ಷಗಾನ ಎಲ್ಲ ಕಲೆಗಿಂತ ಪ್ರಥಮ ಆಗುವುದರಲ್ಲಿ ಸಂಶಯವಿಲ್ಲ.
ಹುಟ್ಟೂರಿನಲ್ಲಿ ಸನ್ಮಾನ ಆಗಿದೆ, ಕಲಾರಂಗದ ವತಿಯಿಂದ ನಡೆಯುವ ಯಕ್ಷ ಶಿಕ್ಷಣದಲ್ಲಿ ಶಾಲೆಗಳಲ್ಲಿ ತರಬೇತಿ ನೀಡುವುದರಿಂದ ಕೆಲವು ಶಾಲೆಗಳಲ್ಲಿ ಗೌರವ ಸನ್ಮಾನಗಳು ಆಗಿವೆ. ಇಷ್ಟೆಲ್ಲ ಸನ್ಮಾನ ಆಗುವುದಕ್ಕೆ ಕಾರಣ ನನ್ನ ಗುರುಗಳು ಮಹೇಶ್ ಮಂದಾರ್ತಿ ಮೊದಲಾಗಿ ನನ್ನನ್ನು ಜನರಿಗೆ ಪರಿಚಯ ಮಾಡಿಸಿದ್ದು ಇವರೇ. ಇವರ ಎಲ್ಲಾ ತರಗತಿಗಳಿಗೂ ನಾನು ಗುರು ಸೇವೆಯ ರೂಪದಲ್ಲಿ ಸಹಕಾರಿಯಾಗಿ ಹೋಗಿದ್ದರಿಂದ ನಾನು ಸ್ವಲ್ಪ ಗುರುತಿಸಿಕೊಂಡೆ. ಹಾಗಾಗಿ ಗುರುವಾದಂತಹ ಮಹೇಶ್ ಮಂದಾರ್ತಿ ಅವರಿಗೆ ಚಿರಋಣಿ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಮಧುಕರ್ ಹೆಗ್ಡೆ ಮಡಾಮಕ್ಕಿ ಅವರು ಹೇಳುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
☎️ :- +918317463705
Comments
Post a Comment