ಯಕ್ಷ ಸಾಧಕರು 314
"ಚಂಡೆಯ ನಾದ ಲಹರಿ"
ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಯುವ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ರಾಹುಲ್ ಕುಂದರ್ ಕೋಡಿ ಕನ್ಯಾನ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೋಡಿ ಕನ್ಯಾನದ ರಾಜು ಮೊಗವೀರ ಹಾಗೂ ಗುಲಾಬಿ ಇವರ ಮಗನಾಗಿ 05.11.1998 ರಂದು ರಾಹುಲ್ ಕುಂದರ್ ಕೋಡಿ ಕನ್ಯಾನ ಅವರ ಜನನ. ದ್ವಿತೀಯ ಪಿಯುಸಿ ಇವರ ವಿದ್ಯಾಭ್ಯಾಸ.
ಸಣ್ಣ ವಯಸ್ಸಿನಿಂದ ಯಕ್ಷಗಾನದ ಮೇಲಿನ ಅತಿಯಾದ ಆಸಕ್ತಿ ಹಾಗೂ ಗುರುಗಳಾದ ಮಹಾಬಲ ಭಂಡಾರಿ ಅವರ ಪ್ರೋತ್ಸಾಹ ಪ್ರೇರಣೆಯಿಂದ ಚೆಂಡೆ ಹಾಗೂ ಮದ್ದಳೆ ಕಲಿತೆ ಎಂದು ಹೇಳುತ್ತಾರೆ ರಾಹುಲ್.
ಯಕ್ಷಗಾನದ ಗುರುಗಳು:-
ಚಂಡೆ:-
ಮಹಾಬಲ ಭಂಡಾರಿ, ಕೋಟ ಶಿವಾನಂದ (ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ), ಬಸವ ಮುಂಡಾಡಿ, ಮಾಧವ ಮಣೂರು, ಭಾಸ್ಕರ ಆಚಾರ್ಯ ಹೆಮ್ಮಾಡಿ, ಉದಯ್ ಸುವರ್ಣ ಐರೋಡಿ.
ಮದ್ದಳೆ:-
ದೇವದಾಸ್ ರಾವ್ ಕೂಡ್ಲಿ.
ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆ. ಸಣ್ಣವನಿದ್ದಾಗ ತುಂಬಾ ವೇಷ ಮಾಡಿದ್ದೆ, ಭಾಗವತಿಕೆಯಲ್ಲೂ ತುಂಬಾ ಆಸಕ್ತಿ ಇದೆ, ಸದ್ಯ ಯಶಸ್ವಿ ಕಲಾಕೇಂದ್ರ ಹಯಗ್ರೀವ ತೆಕ್ಕಟ್ಟೆಯಲ್ಲಿ ಗುರುಗಳಾದ ಲಂಭೋದರ ಹೆಗಡೆ ನಿಟ್ಟೂರು ಹಾಗೂ ದೇವದಾಸ್ ರಾವ್ ಕೂಡ್ಲಿ ಇವರಲ್ಲಿ ಭಾಗವತಿಕೆ ಅಭ್ಯಾಸ ಮಾಡುತ್ತ ಇದ್ದೇನೆ.
ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:-
ರಾಕೇಶ್ ಮಲ್ಯ ಹಳ್ಳಾಡಿ, ಜನಾರ್ಧನ ಆಚಾರ್ಯ ಹಳ್ಳಾಡಿ, ರಾಘವೇಂದ್ರ ಹೆಗಡೆ ಯಲ್ಲಾಪುರ, ದೇವದಾಸ್ ರಾವ್ ಕೂಡ್ಲಿ.
ನೆಚ್ಚಿನ ಪ್ರಸಂಗಗಳು:-
ಚಕ್ರ ಚಂಡಿಕೆ, ಚಕ್ರವ್ಯೂಹ, ಚಂದ್ರಾವಳಿ ವಿಲಾಸ, ವೃಷಸೇನ ಕಾಳಗ, ಇತ್ಯಾದಿ.
ನೆಚ್ಚಿನ ಭಾಗವತರು:-
ಹೆರಂಜಾಲು ಗೋಪಾಲ ಗಾಣಿಗ, ಸುಬ್ರಹ್ಮಣ್ಯ ಆಚಾರ್ ನಗರ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷ ರಂಗದಲ್ಲಿ ನಡೆಯುತ್ತಿರುವ ಆವಿಷ್ಕಾರಗಳು ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟಿಗೆ ಮಾರಕವಾಗದಿದ್ದರೆ ಒಳ್ಳೆಯದು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇತ್ತೀಚಿನ ದಿನಗಳಲ್ಲಿ ನಿಜವಾದ ಯಕ್ಷಗಾನದ ಮೂಲ ಸತ್ವವನ್ನು ಅರಿತಿರುವ ಪ್ರೇಕ್ಷಕರು ಕಡಿಮೆ, ಬಹುತೇಕ ಪ್ರೇಕ್ಷಕರು ಹೊಸ ಹೊಸ ಪ್ರಯೋಗಗಳಿಗೆ ಮಾರುಹೋಗಿದ್ದಾರೆ. ಸಾಂಪ್ರದಾಯಿಕ ಯಕ್ಷಗಾನವನ್ನು ಬಯಸುವ ಪ್ರೇಕ್ಷಕರು, ಕಲಾವಿದರು ಹೆಚ್ಚಾಗಬೇಕೆಂಬುದು ನನ್ನ ಬಯಕೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನದ ಎಲ್ಲಾ ವಿಭಾಗವನ್ನು ಕಲಿತು ಉತ್ತಮ ಕಲಾವಿದನಾಗಬೇಕು ಎಂಬ ಆಸೆ.
ಸೌಕೂರು, ಹಿರಿಯಡ್ಕ, ಅಮೃತೇಶ್ವರಿ, ನೀಲಾವರ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಹಾಗೂ ಯಕ್ಷಗಾನ ರಂಗದಲ್ಲಿ ಒಟ್ಟು 6 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ ರಾಹುಲ್.
ಯಕ್ಷಗಾನ, ಸಂಗೀತ ಇವರ ಹವ್ಯಾಸಗಳು. ಸದ್ಯ ಗುರುಗಳಾದ ಶಾರದಾ ಹೊಳ್ಳ ಅವರ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ ರಾಹುಲ್.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರಾಹುಲ್ ಕುಂದರ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
☎️ :- +918317463705
Comments
Post a Comment