ಯಕ್ಷ ಸಾಧಕರು 318

"ಸ್ನೇಹಮಯಿ ಯಕ್ಷ ಕಲಾ‌ನಿಪುಣ"

ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಮಂಕಿಯ ಪುಟ್ಟು ನಾಯ್ಕ್ ಹಾಗೂ ವೆಂಕಮ್ಮ ಪಿ ನಾಯ್ಕ್ ಇವರ ಮಗನಾಗಿ ಮೇ 10ರಂದು ಸುಧೀರ್ ಪಿ ನಾಯ್ಕ್ ಮಂಕಿ ಅವರ ಜನನ. ಡಿ.ಇಡಿ.(TCH) ಇವರ ವಿದ್ಯಾಭ್ಯಾಸ. ಯಕ್ಷಗಾನದಲ್ಲಿ ಪ್ರಥಮವಾಗಿ ಶಾಲಾ ದಿನಗಳಲ್ಲಿ ಗುರುಗಳಾಗಿದವರು ಶ್ರೀ ಚಂದ್ರಹಾಸ ಹೆಬ್ಬಾರ್ ಆದರೆ ಸ್ಪಷ್ಟವಾಗಿ ಎಲ್ಲಿಯೂ ಹೆಜ್ಜೆ ಅಭ್ಯಾಸ ಮಾಡಲಿಲ್ಲ. ಯಕ್ಷಗಾನ ನೋಡಿ ಕಲಿತಿದ್ದು ನಂತರದಲ್ಲಿ ಮುಂದುವರೆಸಿಕೊಂಡು ಹೋಗಲು ಸಹಕರಿದ್ದು
ಶ್ರೀ ಉಮೇಶ್ ಸುವರ್ಣ ಗೋಪಾಡಿ, ಶ್ರೀ ಮಹಾಬಲ ದೇವಾಡಿಗ ಕಮಲಶಿಲೆ, ಶ್ರೀ ರಾಘವೇಂದ್ರ ಸಕ್ಕಟ್ಟು.




ಮನೆಯಲ್ಲಿ ಯಾವುದೇ ಯಕ್ಷಗಾನದ ಹಿನ್ನಲೆ ಇಲ್ಲ. ಚಿಕ್ಕಂದಿನಿಂದನೂ ಯಕ್ಷಗಾನದ ಬಗ್ಗೆ ಅತೀ ಆಸಕ್ತಿ ಇತ್ತು. ಅಕ್ಕ ಪಕ್ಕದಲ್ಲಿ ಹೆಚ್ಚಾಗಿ ಮಾರಣಕಟ್ಟೆ, ಮಂದಾರ್ತಿ ಮೇಳದ ಆಟಗಳು ನಡೆಯುತ್ತಿತ್ತು ತಂದೆಯವರ ಜೊತೆ ನೋಡಲು ಹೋಗುತಿದ್ದೆ, ಹಾಗೆ ಆಸಕ್ತಿ ಮುಂದುವರೆಯುತ್ತಾ  ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮಾಡುವ ಪಾತ್ರಗಳ ಬಗ್ಗೆ ಪೂರ್ವಜ್ಞಾನ, ಪ್ರಸಂಗ ನಡೆ, ಹಿರಿಯ ಕಲಾವಿದರ ಅನುಸರಣೆ, ಎದುರು ಕಲಾವಿದರೊಂದಿಗೆ, ಭಾಗವತರೊಂದಿಗೆ ಮುಕ್ತವಾಗಿ ಮಾತನಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಸುಧೀರ್.

ನೆಚ್ಚಿನ ಪ್ರಸಂಗಗಳು:-
ಭೀಷ್ಮ ವಿಜಯ, ಕರ್ಣ ಪರ್ವ, ಅಭಿಮನ್ಯು ಕಾಳಗ, ಗದಾಯುದ್ಧ, ಪಟ್ಟಾಭಿಷೇಕ, ಶ್ರೀ ದೇವಿ ಮಹಾತ್ಮೆ, ಬ್ರಹ್ಮ ಕಪಾಲ, ಶ್ವೇತಕುಮಾರ ಚರಿತ್ರೆ, ಚಂದ್ರಹಾಸ ಚರಿತ್ರೆ, ಕುಶಲವ ಇತ್ಯಾದಿ.
ನೆಚ್ಚಿನ ವೇಷಗಳು:-
ಭೀಷ್ಮ ವಿಜಯದ ಭೀಷ್ಮ, ವೀರಮಣಿ, ಕಂಸ, ಶತ್ರುಘ್ನ, ವಿಷ್ಣು, ಅರ್ಜುನ, ಮಾಗಧ, ಸಾಲ್ವ, ಶ್ವೇತಕುಮಾರ
ಶುoಬಾಸುರ, ದುಷ್ಟಬುದ್ದಿ, ಈಶ್ವರ ಇತ್ಯಾದಿ.




ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಕಲೆ ನಿರಂತರ. ಅದಕ್ಕೆ ಅಳಿವು ಇಲ್ಲ, ಆದರೆ ಕಾಲ ಬದಲಾದ ಹಾಗೆ ಯಕ್ಷಗಾನದ ಸ್ವರೂಪವು ಕೂಡ ಗಣನೀಯವಾಗಿ ಬದಲಾಗುತ್ತಾ ಸಾಗುತ್ತಿದ, ಕೆಲವೊಂದು ಬದಲಾವಣೆ ಅಗತ್ಯ ಹಾಗೂ ಸ್ವಾಗತಾರ್ಹ, ಆದಷ್ಟು ಪೌರಾಣಿಕ ಪ್ರದರ್ಶನಗಳನ್ನೇ ಆಡಿಸುವುದು ಉತ್ತಮ. ಯಕ್ಷಗಾನಕ್ಕೆ ಅಗತ್ಯ ಅಲ್ಲ ಅನಿಸುವ ಕೆಲವು ವೇಷ ಗಳು ಪದ್ಯಗಳ(ಸಿನಿಮೀಯ ಪದ್ಯಗಳು) ಬಳಕೆಯನ್ನು ಕಡಿಮೆ ಮಾಡುವುದು ಯಕ್ಷಗಾನದ ಗುಣಮಟ್ಟದ ನೆಲೆಯಲ್ಲಿ ಉತ್ತಮ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರಜ್ಞಾವಂತ ಪ್ರೇಕ್ಷಕರ ಕೊರತೆ ಕಾಣುತ್ತಿದೆ.
ಕಲಾ ಆರಾಧನೆ ಬಿಟ್ಟು ಕಲಾವಿದರ ಆರಾಧನೆ ಮಾಡುತ್ತಿರುವುದು ಕಂಡು ಬರುತ್ತ ಇದೆ. ಯಕ್ಷಗಾನ ಸಮಷ್ಟಿ ಕಲೆ ಎಲ್ಲವನ್ನೂ ಸಮಾನ ದ್ರಷ್ಟಿಯಿಂದ ನೋಡಬೇಕು. ಕೇವಲ ಒಂದು ವಿಭಾಗವನ್ನು ಮಾತ್ರ ಪೋಶಿಸುವುದು ಸೂಕ್ತವಲ್ಲ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಹವ್ಯಾಸಿಯಾಗಿ ಮುಂದುವರೆಯಬೇಕು, ಸ್ವಲ್ಪ ಕಠಿಣ ವೆನಿಸುವ ಕೆಲವು ವೇಷಗಳನ್ನು ನಿರ್ವಹಿಸಬೇಕು ಅನ್ನುವ ಆಸೆ ಇದೆ, ಪ್ರಸಂಗವನ್ನು ಬರೆಯಬೇಕು ಅನ್ನುವ ಹಂಬಲವಿದೆ.

ಶ್ರೀ ಯೋಗೇಂದ್ರ ಆಚಾರ್ಯ ಗುಜ್ಜಾಡಿ ಹಾಗೂ ಶ್ರೀ ರಾಘವೇಂದ್ರ ಸಕ್ಕಟ್ಟು ಇವರ ಸಹಕಾರದಿಂದ ಯಕ್ಷಮಿತ್ರ ಬಳಗ ಗುಜ್ಜಾಡಿ ಹಾಗೂ ಶ್ರೀ ಪ್ರಸಾದ್ ಕುಮಾರ್ ಮೊಗೇಬೆಟ್ಟು ಇವರ ನಿರ್ದೇಶನದಲ್ಲಿ ಮತ್ಸ್ಯಗಂಧ(ಮೊಗವೀರ ಹವ್ಯಾಸಿ ಕಲಾವಿದರ ಒಕ್ಕೂಟ) ಎನ್ನುವ ಹವ್ಯಾಸಿ ಕಲಾ ಸಂಘಗಳನ್ನು ಕಟ್ಟಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಪ್ರಶಸ್ತಿ, ಸನ್ಮಾನದ ಬಗ್ಗೆ ಒಲವು ಕಡಿಮೆ. ಆದರೂ ಕೆಲವೊಂದು ಕಾರ್ಯಕ್ರಮದಲ್ಲಿ ಹವ್ಯಾಸಿ ಕಲಾವಿದನಾಗಿ ಗುರುತಿಸಿದ್ದಾರೆ.
ಯಕ್ಷಗಾನವನ್ನು ನೋಡುವುದು, ಪುಸ್ತಕ ಓದುವುದು, ಕ್ರಿಕೆಟ್ ನೋಡುವುದು, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು.





ತಂದೆ, ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸುಧೀರ್ ಪಿ ನಾಯ್ಕ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395