ಯಕ್ಷ ಸಾಧಕರು 329
"ಉತ್ಸಾಹಪೂರ್ಣ ಯಕ್ಷ ಪ್ರತಿಭೆ"
ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದ ಕಲೆ. ತಂದೆ ಹವ್ಯಾಸಿ ಯಕ್ಷಗಾನ ಭಾಗವತರು. ಬಾಲ್ಯದಿಂದಲೂ ಯಕ್ಷಗಾನದ ನೃತ್ಯದ ಬಗ್ಗೆ ತುಂಬಾ ಒಲವು, ಯಕ್ಷಗಾನದ ನಾಟ್ಯವನ್ನು ಹೆಚ್ಚಾಗಿ ಆಟ ನೋಡಿಯೇ ಕಲಿತದ್ದು ಎಂದು ಹೇಳುತ್ತಾರೆ ವಿಜಯ.
ಉಡುಪಿ ತಾಲೂಕಿನ ಬಾರ್ಕೂರಿನ ಸಮೀಪದ ಬೆಣ್ಣೆಕುದ್ರು ಗ್ರಾಮದ ರಾಮ ಪೂಜಾರಿ ಹಾಗೂ ಅಕ್ಕಯ್ಯ ಪೂಜಾರ್ತಿ ಇವರ ಮಗನಾಗಿ 13.03.1966 ರಂದು ಬಿ.ವಿಜಯ ಪೂಜಾರಿ ಅವರ ಜನನ. ಗುಂಡ್ಮಿ ರಘುರಾಮ ಇವರ ಯಕ್ಷಗಾನ ಗುರುಗಳು.
ನೆಚ್ಚಿನ ಪ್ರಸಂಗ:-
ಭೀಷ್ಮ ವಿಜಯ, ಶಶಿಪ್ರಭ ಪರಿಣಯ.
ನೆಚ್ಚಿನ ವೇಷ:-
ಅಭಿಮನ್ಯು, ಕಮಲಧ್ವಜ, ಕೃಷ್ಣ.
ರಂಗಕ್ಕೆ ಹೋಗುವ ಮೊದಲು ಪದ್ಯಗಳನ್ನು ನೋಡಿ, ರಂಗದಲ್ಲಿ ಆ ದಿನದ ಪ್ರಸಂಗದಲ್ಲಿ ಬರುವ ಪಾತ್ರಗಳನ್ನು ನೋಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ವಿಜಯ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಕಲೆ ನಿರಂತರ. ಅದಕ್ಕೆ ಅಳಿವು ಇಲ್ಲ, ಆದರೆ ಕಾಲ ಬದಲಾದ ಹಾಗೆ ಯಕ್ಷಗಾನದ ಸ್ವರೂಪವು ಕೂಡ ಗಣನೀಯವಾಗಿ ಬದಲಾಗುತ್ತಾ ಸಾಗುತ್ತಿದೆ, ಕೆಲವೊಂದು ಬದಲಾವಣೆ ಅಗತ್ಯ ಹಾಗೂ ಸ್ವಾಗತಾರ್ಹ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಹೆಚ್ಚಿನ ಪ್ರೇಕ್ಷಕರಿಗೆ ಸಮಯದ ಅಭಾವ, ಕೆಲಸದ ಒತ್ತಡ, ರಾತ್ರಿ ಇಡೀ ನಿದ್ರೆ ಬಿಡುವಷ್ಟು ತಾಳ್ಮೆ ಇಲ್ಲ, ಆದರೆ ಒಳ್ಳೆಯ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಸಿಗುತ್ತದೆ.
ಮೇಳದಲ್ಲಿ ವೃತ್ತಿ ಕಲಾವಿದನಾಗಿ ತಿರುಗಾಟ ಮಾಡಲಿಲ್ಲ. ಆದರೆ ಹವ್ಯಾಸಿಯಾಗಿ ಅನೇಕ ತಂಡದ ಜೊತೆಗೆ ವೇಷ ಮಾಡಿರುತ್ತೇನೆ.
ಕಲಾವಿದರನ್ನು ಒಗ್ಗೂಡಿಸಿಕೊಂಡು ಅಲ್ಲಲ್ಲಿ ಒಂದೊದು ಯಕ್ಷಗಾನ ಕಾರ್ಯಕ್ರಮವನ್ನು ಕೊಡುವ ಯೋಜನೆ ಇದೆ ಎಂದು ಹೇಳುತ್ತಾರೆ ವಿಜಯ.
ವಿಜಯ ಪೂಜಾರಿ ಅವರು 21.05.1997ರಂದು ಸರೋಜಾ ಅವರನ್ನು ಮದುವೆಯಾಗಿ ಮಗ ಕೀತನ್ ಹಾಗೂ ಮಗಳು ಸಿಂಚನ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ತಮ್ಮ ಹಾಗೂ ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ವಿಜಯ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +918317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Comments
Post a Comment