ಯಕ್ಷ ಸಾಧಕರು 335
"ನಾದ ಸುದೀಪ"
ಉಡುಪಿ ಜಿಲ್ಲೆಯ ಕೋಟದ ಹಂದಟಿನ ಸುದರ್ಶನ ಉರಾಳ ಹಾಗೂ ರಾಧಿಕಾ ಉರಾಳ ಇವರ ಮಗನಾಗಿ 2.09.2000 ಸುದೀಪ ಉರಾಳರ ಜನನ. MBA ಇವರ ವಿದ್ಯಾಭ್ಯಾಸ, ವೃತ್ತಿಯಲ್ಲಿ ಕಂಪೆನಿ ಒಂದರಲ್ಲಿ ಕೆಲಸ ಮಾಡಿಕೊಂಡು ಪ್ರವೃತ್ತಿಯಲ್ಲಿ ಯಕ್ಷಗಾನ ರಂಗದ ಹವ್ಯಾಸಿ ಕಲಾವಿದನಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ನೋಡಿ ಬಂದು ಚೆಂಡೆ ಬಡಿಯುವಂತೆ ಮನೆಯಲ್ಲಿ ಡಬ್ಬಿಯನ್ನು ಬಡಿಯುತ್ತಿದ್ದೆ. ನಂತರದಲ್ಲಿ ಕೋಟ ಶಿವಾನಂದ ಅವರು ಕೆಲವು ಪೆಟ್ಟನ್ನು ಕಲಿಸಿದರು. ನಂತರ ಹಂಗಾರಕಟ್ಟೆ ಕಲಾ ಕೇಂದ್ರದಲ್ಲಿ ಮಾಧವ ಮಣೂರು ಮತ್ತು ಬಸವ ಮುಂಡಾಡಿ ಅವರು ನುಡಿಗಳನ್ನು ಸರಿಮಾಡಿದರು.
ನೆಚ್ಚಿನ ಚೆಂಡೆ ವಾದಕರು:-
ಮಂದಾರ್ತಿ ರಾಮಣ್ಣ, ಕೋಟ ಶಿವಾನಂದ, ಜನಾರ್ದನ ಆಚಾರ್ಯ ಹಳ್ಳಾಡಿ, ರಾಕೇಶ್ ಮಲ್ಯ, ಶ್ರೀನಿವಾಸ ಪ್ರಭು.
ನೆಚ್ಚಿನ ಮದ್ದಳೆ ವಾದಕರು:-
ಪರಮೇಶ್ವರ ಭಂಡಾರಿ ಕರ್ಕಿ, ರಾಘವೇಂದ್ರ ಹೆಗಡೆ ಯಲ್ಲಾಪುರ, ದೇವದಾಸ್ ರಾವ್ ಕೂಡ್ಲಿ, ಗಣೇಶ ಶೆಣೈ.
ನೆಚ್ಚಿನ ಭಾಗವತರು:-
ರಾಘವೇಂದ್ರ ಮಯ್ಯ ಹಾಲಾಡಿ, ಲಂಬೋದರ ಹೆಗಡೆ, ಹೆರಂಜಾಲು ಗೋಪಾಲ ಗಾಣಿಗ, ರಾಮಕೃಷ್ಣ ಹೆಗಡೆ ಹಿಲ್ಲೂರು, ಚಂದ್ರಕಾಂತ ರಾವ್ ಮೂಡುಬೆಳ್ಳೆ.
ಯಕ್ಷಗಾನದಲ್ಲಿ ಮೊದಲು ಪ್ರಾರಂಭ ಮಾಡಿದ್ದು ವೇಷ ಮಾಡುವುದರಿಂದ. ಗುರುಗಳಾದ ಶ್ರೀಧರ ಹಂದೆ, ನರಸಿಂಹ ತುಂಗ ಹಾಗು ಸುಜಯೀಂದ್ರ ಹಂದೆ ಅವರ ಮಾರ್ಗದರ್ಶನದಲ್ಲಿ ಕಲಿತು ಹಲವಾರು ವೇಷ ಮಾಡುತ್ತಿದ್ದೆ. ಯಾವಾಗ ಚೆಂಡೆ ಬಾರಿಸಲಿಕ್ಕೆ ಪ್ರಾರಂಭ ಮಾಡಿದೆನೋ ಆವಾಗ ವೇಷ ಮಾಡುವುದು ನಿಲ್ಲಿಸಿದೆ. ಎಲ್ಲಾ ಪೌರಾಣಿಕ ಪ್ರಸಂಗ ಇಷ್ಟ ಅದರಲ್ಲೂ ಗದಾಯುದ್ಧ, ಸುಧನ್ವ ಕಾಳಗ ಇವು ನೆಚ್ಚಿನ ಪ್ರಸಂಗ ಎಂದು ಹೇಳುತ್ತಾರೆ ಸುದೀಪ ಉರಾಳ.
ಯಕ್ಷಗಾನದ ಇಂದಿನ ಸ್ಥಿತಿಗತಿ:-
ಹೊಸ ಹೊಸ ಕಲಾವಿದರು ಬರುತ್ತಿದ್ದಾರೆ, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪೌರಾಣಿಕ ಪ್ರಸಂಗ ಇಷ್ಟ ಪಡುವ ಪ್ರೇಕ್ಷಕರ ವರ್ಗ ಒಂದಾದರೆ, ಹೊಸ ಹೊಸ ಆವಿಷ್ಕಾರ ಮತ್ತು ಹೊಸ ಪ್ರಸಂಗ ಇಷ್ಟ ಪಡುವ ಪ್ರೇಕ್ಷಕರು ಹೆಚ್ಚು ಇದ್ದಾರೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಗಳು:-
ಯಕ್ಷಗಾನದಲ್ಲಿ ಇನ್ನೂ ಕಲಿಯುವುದು ಸಾಕಷ್ಟಿದೆ. ಹೀಗೆ ಸಾಕಷ್ಟು ವಿಚಾರ ವಿಷಯಗಳನ್ನು ಕಲಿಯುತ್ತ ಹವ್ಯಾಸಿ ಕಲಾವಿದನಾಗಿ ಮುಂದುವರೆಯುತ್ತೇನೆ.
ಪ್ರಪ್ರಥಮವಾಗಿ ಚೆಂಡೆ ಬಾರಿಸಲಿಕ್ಕೆ ಪ್ರಾರಂಭ ಮಾಡಿದ್ದು ಅಮೃತೇಶ್ವರಿ ಮೇಳದಲ್ಲಿ. ಹಾಗೆ ಅದೇ ಮೇಳಕ್ಕೆ ಯಾವಾಗಲೂ ಹೋಗುತ್ತಾ ಇರುತ್ತೇನೆ. ಹಾಗೆ ಕಲಾವಿದರು ಮೇಳದಲ್ಲಿ ರಜೆ ಇದ್ದಾಗ ಹೋಗಿದ್ದೇನೆ.
ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸಿಗಂದೂರು, ಕಮಲಶಿಲೆ, ನೀಲಾವರ, ಹಟ್ಟಿಯಂಗಡಿ ಹೀಗೆ ಕೆಲವು ಮೇಳಗಳಲ್ಲಿ ಚೆಂಡೆ ಬಾರಿಸಿದ್ದೇನೆ.
ಯಕ್ಷಗಾನ ರಂಗದಲ್ಲಿ 8-9 ವರ್ಷಗಳಿಂದ ಹವ್ಯಾಸಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಫೊಟೋಗ್ರಾಫಿ, cooking, ಬರೆಯುವುದು ಇವರ ಹವ್ಯಾಸ.
ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ ೨೦೨೦-೨೧ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಆಗಿರುತ್ತಾರೆ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸುದೀಪ ಉರಾಳ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
☎️ :- +918317463705
Comments
Post a Comment