ಯಕ್ಷ ಸಾಧಕರು 337

"ಯಕ್ಷ ನಾದ ವಿಹಾರಿ"

ಊರಿನ ಪ್ರತಿಯೊಂದು ಮನೆಯಲ್ಲಿ ಒಬ್ಬೊಬ್ಬ ಯಕ್ಷಗಾನ ಹವ್ಯಾಸಿ ಕಲಾವಿದರು. ಇವರ ಮನೆಯಲ್ಲೂ ಇವರ ಅಣ್ಣ ಒಳ್ಳೆಯ ಬಣ್ಣದ ವೇಷಧಾರಿ ಹಾಗೂ  ಭಾಗವತಿಕೆ ಬಲ್ಲವರಾಗಿದ್ದರು.
ಇದರಿಂದ ಸಹಜವಾಗಿ ಪ್ರೇರೇಪಣೆಗೊಂಡು ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿ ಯಕ್ಷಗಾನ ರಂಗದಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದ ಶಿತಿಕಂಠ ಎಸ್ ಶೆಂಡ್ಯೆ.
ವೃತ್ತಿಯಲ್ಲಿ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ರಕ್ತಪರೀಕ್ಷಾ ಪ್ರಯೋಗಾಲಯದಲ್ಲಿ ಮುಖ್ಯಸ್ಥರು, ಪ್ರವೃತ್ತಿಯಲ್ಲಿ ಯಕ್ಷಗಾನ ಚೆಂಡೆ ಮದ್ದಲೆವಾದಕರು.

ಶೆಂಡ್ಯೆ ಶ್ರೀನಿವಾಸ ಭಟ್ ಹಾಗೂ ಸತ್ಯಭಾಮ ಇವರ ಮಗನಾಗಿ ಶಿತಿಕಂಠ ಎಸ್ ಶೆಂಡ್ಯೆ ಅವರ ಜನನ. Diploma In Medical Laboratory Technology & Bsc MLT ಇವರ ವಿದ್ಯಾಭ್ಯಾಸ. ಮಡದಿ ಶುಭಪ್ರದಾ, ಮಗಳು ಸಿಂಧೂರ ಜೊತೆಗೆ  ಉಜಿರೆಯ ಪೆರ್ಲದಲ್ಲಿ ವಾಸವಾಗಿದ್ದಾರೆ.




ಯಕ್ಷಗಾನದ ಚೆಂಡೆ ಮದ್ದಲೆ ಗುರುಗಳು:-
ದೊಡ್ಡಪ್ಪನ ಮಗ ರಾಜಶೇಖರ ಶೆಂಡ್ಯೆ ಇವರಲ್ಲಿ ಮದ್ದಳೆಯ ಮೂಲ ಪಾಠ. ಚೆಂಡೆ ವಾದನವನ್ನು ಮಾತ್ರ ನೇರ ಗುರುಗಳಿಲ್ಲದೆ ಕಲಿತರು. ಇವರಿಗೆ ದಿವಂಗತ ಗೋಪಾಲಕೃಷ್ಣ ಕುರುಪ್ ಅವರ ತಮ್ಮ ಜನಾರ್ದನ ಕುರುಪ್ ಇವರು ಪಾಠ ಮಾಡುವಾಗ ಕೇಳಿಸಿಕೊಂಡದಷ್ಟೇ. ಮುಂದೆ ಎಲ್ಲಾ ರಂಗದಲ್ಲೇ ಹಿರಿ - ಕಿರಿಯರ ಒಡನಾಟದಿಂದಿದ ಕಲಿತದ್ದು.

ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:- ಹಿರಿಯರಲ್ಲಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಪದ್ಯಾಣ ಶಂಕರಣ್ಣ. ಕಿರಿಯರಲ್ಲಿ ಚೈತನ್ಯ ಕೃಷ್ಣ ಪದ್ಯಾಣ.
ದಿನೇಶ್ ಅಮ್ಮಣ್ಣಾಯ ನೆಚ್ಚಿನ ಭಾಗವತರು. ಯಕ್ಷಗಾನದಲ್ಲಿ ಬರುವ ಎಲ್ಲಾ ಪೌರಾಣಿಕ ಆಖ್ಯಾನಗಳು ಇವರ ನೆಚ್ಚಿನ ಪ್ರಸಂಗಗಳು. ಅನಿವಾರ್ಯ ಸಂದರ್ಭದಲ್ಲಿ ರಂಗದಲ್ಲಿ ವೇಷ ಮಾಡಿದ ಅನುಭವ ಕೂಡ ಶಿತಿಕಂಠ ಎಸ್ ಶೆಂಡ್ಯೆ ಅವರದು.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಕಾಲಕ್ಕೆ ತಕ್ಕಂತೆ ಬದಲಾಗಿದೆ... ಕಾಲ ನಿರ್ಣಯ ಇಲ್ಲ... ಕಾಲಮಿತಿಯಿಂದಾಗಿ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಬಗ್ಗೆ ಆಸಕ್ತಿ ಕಡಿಮೆ ಆಗ್ತಿದೆ. (ಈಗಿನ ಸ್ಪರ್ಧಾತ್ಮಕ ಕೆಲಸದ ಒತ್ತಡದಿಂದ).

ಯಕ್ಷರಂಗದಲ್ಲಿ ಮುಂದಿನ ಯೋಜನೆಗಳು:-
ನಿರ್ದಿಷ್ಟ ಯೋಜನೆಗಳನ್ನು ಏನೂ ನಾನು ಹಾಕಿಕೊಂಡಿಲ್ಲ. ಆದರೆ ಮುಂದಿನ ಪೀಳಿಗೆಗೆ ಇದನ್ನು ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಯಕ್ಷಗಾನ, ಕ್ರಿಕೆಟ್, ಶಟಲ್ ಆಡುವುದು ಇತ್ಯಾದಿ ಇವರ ಹವ್ಯಾಸಗಳು.
ಯಕ್ಷಗಾನ ರಂಗದಲ್ಲಿ ಕಳೆದ 35 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಶಿತಿಕಂಠ ಎಸ್ ಶೆಂಡ್ಯೆ.




ಮೊದಲ ಬಾರಿ ಚೆಂಡೆ ಹೆಗಲಿಗೆ ಹಾಕಿಸಿದ್ದು ಕೋಳ್ಯೂರ್ ಭಾಸ್ಕರ ಅವರು ಎಂದು ಕೃತಜ್ಞತೆಯಿಂದ ನೆನಪಿಸುತ್ತಾರೆ.
ದೊಡ್ಡ ದೊಡ್ಡ ಮದ್ದಳೆಗಾರರೊಂದಿಗಿನ ಒಡನಾಟ, (ಮಾಂಬಾಡಿ, ಪದ್ಯಾಣ ಶಂಕರಣ್ಣ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್,  ಕಾಸರಗೋಡು ವೆಂಕಟ ಮದ್ಲೆಗಾರ, ತಲೆಂಗಳ ಗೋಪಾಲಕೃಷ್ಣ ಭಟ್, ಚೇವಾರು ಶಂಕರ ಭಟ್, ಪದ್ಮನಾಭ ಉಪಾಧ್ಯ) ಮುಂತಾದವರ ಹಿತನುಡಿಗಳು, ಪದ್ಯಾಣ ಗಣಪತಿ ಭಟ್, ದಿನೇಶ್ ಅಮ್ಮಣ್ಣಾಯ, ಬಲಿಪ ನಾರಾಯಣ ಭಾಗವತರು ಮತ್ತು ಇತ್ತೀಚಿನ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಸತ್ಯನಾರಾಯಣ ಪುಣಿಚಿತ್ತಾಯ ಮುಂತಾದವರ ಪ್ರೋತ್ಸಾಹ ನನ್ನನ್ನು ಈ ಮಟ್ಟಕ್ಕೆ ತಲುಪಿಸಿತು. ದಿ. ಜಲಂಧರ್ ರೈ, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿಯವರು ಅವಕಾಶವನ್ನು ಕೊಡಿಸಿದರು ಎಂಬುದನ್ನೂ ಮರೆಯರು.

ಯಾವುದೇ ವೃತ್ತಿಪರ ಕಲಾವಿದರಿಗೂ ಹೊಂದುವಂತಹಾ ಅಪೂರ್ವ ಸಾಮರ್ಥ್ಯದ ಅವನದ್ಧವಾದಕ. ಸಾಧಿಸಲು ಬಹಳಷ್ಟಿವೆ ಎಂಬುದನ್ನು ಮರೆಯುವುದಿಲ್ಲ. ತನ್ನ ಇತಿ ಮಿತಿಯ ಕುರಿತು ತಿಳಿವಳಿಕೆ ಇದೆ. ಇವರ ಕಲಾಜೀವನ ಉತ್ತುಂಗಕ್ಕೇರಲಿ.
ಯಕ್ಷಗಾನ ಕಲಾವಿದನಾಗಿ ರಾಜ್ಯ, ಅಂತರ ರಾಜ್ಯ ಕಲಾವಿದನಾಗಿ ದೆಹಲಿ, ಕಾಶಿ, ಅಯೋಧ್ಯೆ, ಮುಂಬೈ, ಪುಣೆ, ಅಹಮ್ಮದಾಬಾದ್, ಉತ್ತರ ಪ್ರದೇಶದ ಕುಂಭ ಮೇಳ, ಮುಂತಾದ ಕಡೆ ಭಾಗವಹಿಸಿದ ಹಾಗೂ ಅದಕ್ಕೆ ಅವಕಾಶ ಕಲ್ಪಿಸಿದ ಕೀರ್ತಿ ಶ್ರೀಮತಿ ವಿದ್ಯಾ ಕೋಳ್ಯೂರು ಇವರಿಗೆ ಸಲ್ಲುತ್ತದೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395