ಯಕ್ಷ ಸಾಧಕರು 342

"ಯಕ್ಷ ವಿನೋದ ವಿಶಾರದ"

ಉಡುಪಿ ಜಿಲ್ಲೆಯ ಕಾವಡಿಯ ವಾಸುದೇವ ಐತಾಳ್ ಹಾಗೂ ದೇವಕಿ ಇವರ ಮಗನಾಗಿ 23.06.1983ರಂದು ಗುರುಪ್ರಸಾದ್ ಐತಾಳ್ ಅವರ ಜನನ. ಪದವಿ ಇವರ ವಿದ್ಯಾಭ್ಯಾಸ. ಪ್ರಸ್ತುತ ಇವರು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಅಂಬಲಪಾಡಿ ಮಹಾಕಾಳಿ ದೇವಾಲಯದಲ್ಲಿ ಲೆಕ್ಕಪತ್ರ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ.

ಯಕ್ಷಗಾನದ ಗುರುಗಳು:-
ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಂಜುನಾಥ್ ಕುಲಾಲ್, ಶ್ರೀಧರ್ ಹೆಬ್ಬಾರ್.



ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಶಾಲಾ ದಿನಗಳಲ್ಲಿ ನಡೆಯುತ್ತಿದ್ದ ಯಕ್ಷಗಾನದಲ್ಲಿ ಗುರುಗಳಾದ ಎಮ್ ಎನ್ ಮಧ್ಯಸ್ಥ ಹಾಗೂ ರಾಮದೇವ ಐತಾಳರು ಹೇಳಿಕೊಡುತ್ತಿದ್ದರು. ನಂತರ ಹಲವು ವರ್ಷಗಳ ನಂತರ ಪಕ್ಕದ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಕಲಾರಂಗ ಎಂಬ ಸಂಸ್ಥೆಯನ್ನು ಸಮಾನ ಮನಸ್ಸಿನ ಯುವಕರು ಪ್ರಾರಂಭಿಸಿದರು. ಅಲ್ಲಿ ಪ್ರಾರಂಭದಲ್ಲಿ ಜೊತೆ ಕಾರ್ಯದರ್ಶಿಯಾಗಿ ನೇಮಕಗೊಂಡು ಒಂದು ಸಣ್ಣ ಪಾತ್ರಕ್ಕೆ ಆಯ್ಕೆಯಾದೆ. ಅಕಸ್ಮಾತ್ತಾಗಿ ಹಾಸ್ಯ ಪಾತ್ರದವರು ಬರದೇ ಇದ್ದುದರಿಂದ ಪ್ರಸಾದ್ ಮೊಗೆಬೆಟ್ಟು ಗುರುಗಳು ನನ್ನನ್ನು ಆಯ್ಕೆ ಮಾಡಿದರು. ಅದುವೇ ನನಗೆ ಪ್ರೇರಣೆಯಾಯಿತೋ ಏನೋ ಅಲ್ಲಿಂದ ಸಾಲು ಸಾಲು ಹಾಸ್ಯ ಪಾತ್ರಗಳೇ ಸಿಕ್ಕಿದವು. ಈಗ ಹವ್ಯಾಸಿ ಕಲಾವಿದರಲ್ಲಿ ಹಾಸ್ಯಗಾರರು ಕಡಿಮೆ ಇರುವುದರಿಂದ ನಾನು ಆ ಕಡೆಯೇ ಗಮನ ಹರಿಸಲು ಇದೂ ಒಂದು ಕಾರಣವಾಯಿತು.

ಎಲ್ಲಾ ಪೌರಾಣಿಕ  ಪ್ರಸಂಗಗಳು ನೆಚ್ಚಿನ ಪ್ರಸಂಗಗಳು.
ನೆಚ್ಚಿನ ವೇಷಗಳು:-
ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಪಡೆದವ ನಾನಲ್ಲ. ನಾನು ಮಾಡಿದ್ದರಲ್ಲಿ ತೃಪ್ತಿ ನೀಡಿದವು ಅಂತಾದರೆ ಶನೀಶ್ವರ ಮಹಾತ್ಮೆಯ ನಂದಿ ಶೆಟ್ಟಿ, ಕಂಸ ವಧೆಯ ರಜಕ, ಕನಕಾಂಗಿ ಕಲ್ಯಾಣದ ಬಲರಾಮ ಧೂತ ಹಾಗೂ ಘಟೋತ್ಕಚ ದೂತ, ಶ್ವೇತಕುಮಾರ ಪ್ರಸಂಗದ ಪ್ರೇತ ಹಾಗೂ ಚಿತ್ರಗುಪ್ತ, ಸುಭದ್ರಾ ಕಲ್ಯಾಣದ ಬಲರಾಮನ ದೂತ, ಕೃಷ್ಣಾರ್ಜುನ ಕಾಳಗದ ದಾರುಕ ಇತ್ಯಾದಿ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪಾತ್ರದ ಬಗ್ಗೆ ಭಾಗವತರಲ್ಲಿ ಹೇಗೆ ಮಾಡಬೇಕು; ಹಾಗೆಯೇ ನಾನು ಮಾಡುವ ರೀತಿಯ ಬಗ್ಗೆ ಸಾಧಕ ಭಾದಕಗಳ ಚರ್ಚೆ ಮಾಡುವೆ. ಸಹ ಕಲಾವಿದರಲ್ಲಿ ಅವರ ಅನುಭವ ಕೇಳಿ ತಿಳಿದುಕೊಳ್ಳುವೆ. ಹಿರಿಯ ಕಲಾವಿದರು ಮಾಡಿದ್ದನ್ನು ಯೂಟ್ಯೂಬ್ ಅಲ್ಲಿ ಪ್ರಸ್ತುತ ಪಡಿಸಿದ್ದನ್ನು ನೋಡಿ ನಾನೇನು ಮಾಡಬಹುದು ಅದರ ಬಗ್ಗೆ ಯೋಚನೆ ಮಾಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಐತಾಳ್.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹಿರಿಯರು ಹೇಳುವಂತೆ ಅವರಿಗೆ ಇದ್ದ ಕಷ್ಟ ಈಗ ಎಳ್ಳಷ್ಟೂ ಇಲ್ಲ. ಕಲೆಯನ್ನು ಉಳಿಸಲು ಯುವ ಜನತೆ ಹಾಗೂ ಸಂಸ್ಥೆಗಳು ಮನಸ್ಸು ಮಾಡಬೇಕಷ್ಟೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗಿನ ಬ್ಯುಸಿ ಪ್ರಪಂಚದಲ್ಲಿ ಕಾಲಮಿತಿಯೇ ಉತ್ತಮ ಎಂದು ಅನಿಸುತ್ತದೆ. ಇಡೀ ರಾತ್ರಿ ನಿದ್ದೆ ಬಿಡುವುದು ಕಲಾವಿದರಿಗೂ ಪ್ರೇಕ್ಷಕರಿಗೂ ಕಷ್ಟ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ನಮ್ಮ ಕಲಾರಂಗದಿಂದ ದಶಮಾನದ ಕಾರ್ಯಕ್ರಮವಾಗಿ ಸುಮಾರು 50 ಜನ ಹವ್ಯಾಸಿ ಕಲಾವಿದರನ್ನು ಒಟ್ಟುಗೂಡಿಸಿ ಕುರುಕ್ಷೇತ್ರ ಎಂಬ ಆಖ್ಯಾನ ಪ್ರಸಾದ್ ಗುರುಗಳ ನಿರ್ದೇಶನದಲ್ಲಿ ಆಡಿಸಿದ್ದು ದೊಡ್ಡ ಸಾಧನೆಯೇ ಸರಿ. ಸಂಘ ಸಂಸ್ಥೆಗಳು ತಮ್ಮದೇ ಆದ ವೇಷಭೂಷಣ ಹಾಗೂ ಮುಖವರ್ಣಿಕೆ ಮಾಡಿಕೊಳ್ಳಲು ಏನಾದರೂ ಮಾಡಬೇಕು ಎಂಬ ಕನಸಿದೆ.





ಹವ್ಯಾಸಿ ಕಲಾವಿದನಾಗಿ ಭಾಗವಹಿಸಿದ ತಂಡಗಳು:-
♦️ ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ.
♦️ ಯಕ್ಷಸೌರಭ ಕೋಟ.
♦️ ಯಕ್ಷಾಂತರಂಗ ಕೋಟ.
♦️ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ  ಅಂಬಲಪಾಡಿ.
♦️ ಯಕ್ಷಾರಾಧನ ಕಿದಿಯೂರು.
♦️ ಬೈದೆಬೆಟ್ಟು ಕೊಕ್ಕರ್ಣೆ ಇಲ್ಲಿನ ಸಂಘ.
♦️ಶ್ರೀ ರಾಮಪ್ರಸಾದ ಯಕ್ಷಗಾನ ಸಂಘ ಕೋಡಿ ಕನ್ಯಾನ.
♦️ ಶ್ರೀ ವಾಣಿ ಯಕ್ಷಗಾನ ಮಂಡಳಿ ಕಾವಡಿ.
♦️ ಶ್ರೀ ಸ್ವರ್ಣನೂಪುರ ಯಕ್ಷಗಾನ ಸಂಘ ಹೇರಿಕುದ್ರು ಕುಂದಾಪುರ.



ಸನ್ಮಾನ ಹಾಗೂ ಪ್ರಶಸ್ತಿ:-
ಕುಂದಾಪುರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಆಟದಲ್ಲಿ ಮೊದಲ ಬಾರಿಗೆ ಗೌರವ ಸನ್ಮಾನ ಮಾಡಿರುತ್ತಾರೆ.
ಹವ್ಯಾಸಗಳು:-
ಯಕ್ಷಗಾನ ನೋಡುವುದು. ಪ್ರತೀ ಸೋಮವಾರ ಸಮೀಪದ ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 13 ವರ್ಷದಿಂದ ಭಜನಾ ಸೇವೆ ನಡೆಸುತ್ತಿದ್ದೇವೆ. ನಮ್ಮ ಮಹಾಲಿಂಗೇಶ್ವರ ಕಲಾರಂಗದಿಂದ ಸ್ಥಳೀಯ ಸುಮಾರು 50 ಮಕ್ಕಳಿಗೆ 7 ವರ್ಷದಿಂದ ಯಕ್ಷಗಾನ ಕಲಿಸಿ ಪ್ರದರ್ಶನ ಮಾಡುತ್ತಿದ್ದೇವೆ.

ಗುರುಪ್ರಸಾದ್ ಐತಾಳ್ ಅವರು 04.04.2014ರಂದು ಅರುಣಾ ಹೊಳ್ಳ (ಕುಂದಾಪುರ R N Shetty P U College ನಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕಿ) ಅವರನ್ನು ಮದುವೆಯಾಗಿ ಪ್ರತೀಕ ಹಾಗೂ ಪ್ರಯಾಗ ಇಬ್ಬರು ಮಕ್ಕಳ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.


ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಗುರುಪ್ರಸಾದ್ ಐತಾಳ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395